ಬೆಳಗಾವಿ: 04 :ಪ್ರವಾಹದಿಂದ ಮನೆ ಕಳೆದುಕೊಂಡಿರುವ ಚಿಕ್ಕೋಡಿ ತಾಲ್ಲೂಕಿನ ಮಾಂಜರಿ ಗ್ರಾಮದಲ್ಲಿ ಸಂತ್ರಸ್ತ ಕುಟುಂಬದ ಮನೆ ನಿರ್ಮಾ ಣಕ್ಕೆ ವಸತಿ ಸಚಿವ ವಿ.ಸೋಮಣ್ಣ ಅವರು ಭೂಮಿಪೂಜೆ ನೆರವೇರಿಸಿದರು.
ಜಿಲ್ಲೆಯ ಪ್ರವಾಹ ಬಾಧಿತ ಪ್ರದೇಶಗಳಿಗೆ ಸೋಮವಾರ (ನ.4) ಭೇಟಿ ನೀಡಿದ ಅವರು, ಈಗಾಗಲೇ ಮನೆ ನಿರ್ಮಾ ಣಕ್ಕೆ ಮೊದಲ ಕಂತಿನ ಒಂದು ಲಕ್ಷ ರೂಪಾಯಿ ಪಡೆದುಕೊಂಡಿರುವ ಸಂತ್ರಸ್ತರ ಮನೆ ನಿಮರ್ಾಣಕ್ಕೆ ಮಾಂಜರಿ ಗ್ರಾಮದಲ್ಲಿ ಚಾಲನೆ ನೀಡಿದರು.
ರಾಜಮಾ ಸಾತಪ್ಪ ಕುರಣಿ ಅವರ ಮನೆ ನಿಮರ್ಾಣಕ್ಕೆ ಭೂಮಿಪೂಜೆ ಮಾಡಲಾಯಿತು. ಒಂದು ಲಕ್ಷ ರೂಪಾಯಿ ಜಮೆ ಆಗಿದ್ದು, ನಿಮರ್ಾಣ ಕೆಲಸ ಆರಂಭಿಸಲಾಗುವುದು ಎಂದು ರಾಜಮಾ ತಿಳಿಸಿದರು.
ಕುಸಿದಿರುವ ಮನೆಗಳ ಪರಿಶೀಲನೆಗೆ ಆಗಮಿಸಿದ ಸಚಿವ ಸೋಮಣ್ಣ ಅವರಿಗೆ ಸಂತ್ರಸ್ತರ ಕುಟುಂಬದ ಮಹಿಳೆಯರು ಆರತಿ ಬೆಳಗಿ ಸ್ವಾಗತಿಸಿದರು.
ಭೂಮಿಪೂಜೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಚಿವ ಸೋಮಣ್ಣ ಅವರು, ಪದೆ ಪದೇ ಮುಳುಗಡೆಯಾಗುವ ಗ್ರಾಮಗಳ ಜನರು ಒಪ್ಪಿದರೆ ಶಾಶ್ವತ ಸ್ಥಳಾಂತರಕ್ಕೆ ಸಕರ್ಾರ ಸಿದ್ಧವಿದೆ. ಎಷ್ಟೇ ಹಣ ಖರ್ಚ ದರೂ ಸರ್ಕಾ ರ ನೀಡಲಿದೆ ಎಂದರು.
ಸಂಪೂರ್ಣ ಮುಳುಗಡೆಯಾಗಿದ್ದ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ 225 ಮನೆಗಳಿಗೆ ತಲಾ ಲಕ್ಷ ರೂಪಾಯಿ ಜಮೆ ಆಗಿದೆ. ಅದೇ ರೀತಿ 200 ಕ್ಕೂ ಅಧಿಕ ಮನೆಗಳನ್ನು ಎ ಕೆಟಗರಿಯಲ್ಲಿ ಪರಿಗಣಿಸಿ ಪರಿಹಾರ ಬಿಡುಗಡೆ ಮಾಡಲಿ ತಹಶೀಲ್ದಾರರಿಗೆ ಸೂಚನೆ ನೀಡಲಾಗಿದೆ ಎಂದರು.
329 ಮನೆಗಳಿಗೆ ತಲಾ 50 ಸಾವಿರ ಬಿಡುಗಡೆ ಮಾಡಲಾಗಿದೆ. ಶಾಶ್ವತ ಸ್ಥಳಾಂತರಕ್ಕೆ ಗ್ರಾಮಸ್ಥರು ಒಪ್ಪಿದರೆ ಸರ್ಕಾ ರವು ಸಿದ್ಧವಿದೆ. ಮಾಂಜರಿ ದೊಡ್ಡ ಗ್ರಾಮವಾಗಿದ್ದು, ಅಂಬೇಡ್ಕರ್ ಕಾಲನಿ ಪದೆ ಪದೇ ಮುಳುಗಡೆ ಆಗುವುದರಿಂದ ಸ್ಥಳೀಯ ಜನರ ಅಭಿಪ್ರಾಯ ಹಾಗೂ ಜನಪ್ರತಿನಿಧಿಗಳ ಜತೆ ಚರ್ಚಿ ಸಿ ಶಾಶ್ವತ ಸ್ಥಳಾಂತರಕ್ಕೆ ನಿಧರ್ಾರ ಕೈಗೊಳ್ಳಲಾಗುವುದು ಎಂದು ಸಚಿವ ಸೋಮಣ್ಣ ಹೇಳಿದರು.
ಅತೀ ಹೆಚ್ಚು ಪರಿಹಾರ:
ಪ್ರವಾಹ ಸಂತ್ರಸ್ತರಿಗೆ ಇತಿಹಾಸದಲ್ಲಿ ಇದೇ ಮೊದಲ ಬಾರಿ ಅತೀ ಹೆಚ್ಚು ಪರಿಹಾರ ಜಮೆ ಮಾಡಲಾಗಿದೆ. ಬೆಳೆಪರಿಹಾರ ಹೆಚ್ಚಿಸಲಾಗಿದೆ. ನೇಕಾರ ಕುಟುಂಬಗಳಿಗೂ ಮುಖ್ಯಮಂತ್ರಿಗಳ ಆಶಯದಂತೆ ಹೆಚ್ಚುವರಿ ಪರಿಹಾರವನ್ನು ಸರ್ಕಾ ರ ನೀಡುತ್ತಿದೆ ಎಂದು ಸಚಿವ ಸೋಮಣ್ಣ ವಿವರಿಸಿದರು.
ಎ ಮತ್ತು ಕೆಟಗರಿ ಮನೆಗಳಿಗೆ ಈಗಾಗಲೇ ಬಹುತೇಕ ಮನೆಗಳ ನಿರ್ಮಾ ಣಕ್ಕೆ ತಲಾ ಒಂದು ಲಕ್ಷ ರೂಪಾಯಿ ಜಮೆ ಮಾಡಲಾಗಿದೆ. ಆದಾಗ್ಯೂ ಯಾವುದಾದರೂ ತಾಂತ್ರಿಕ ಕಾರಣಕ್ಕೆ ಪರಿಹಾರದ ಹಣ ಜಮೆಯಾಗಿರದಿದ್ದರೆ ಕೂಡಲೇ ಅಂತಹ ಮನೆಗಳಿಗೂ ಪರಿಹಾರ ನೀಡಬೇಕು ಎಂದು ತಹಶೀಲ್ದಾರರಿಗೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದರು. ಮನೆ ಕಳೆದುಕೊಂಡ ಪ್ರತಿ ಕುಟುಂಬಕ್ಕೂ ಪರಿಹಾರ ಒದಗಿಸುವಂತೆ ತಿಳಿಸಿದರು.
ಇದಕ್ಕೂ ಮುಂಚೆ ಸಚಿವ ವಿ.ಸೋಮಣ್ಣ ಅವರು ಮಾಂಜರಿಯಲ್ಲಿರುವ ಡಾ.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
ವಿಧಾನ ಪರಿಷತ್ತಿನಲ್ಲಿ ಸಕರ್ಾರದ ಮುಖ್ಯ ಸಚೇತಕರಾದ ಮಹಾಂತೇಶ್ ಕವಟಗಿಮಠ, ಸಂಸದ ಅಣ್ಣಾಸಾಹೇಬ್ ಜೊಲ್ಲೆ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ. ಮತ್ತಿತರರು ಉಪಸ್ಥಿತರಿದ್ದರು.
ಇದಾದ ಬಳಿಕ ಯಡೂರ ಮತ್ತು ಕಾಗವಾಡ ತಾಲ್ಲೂಕಿನ ಜುಗೂಳ ಗ್ರಾಮದಲ್ಲಿ ಪರಿಶೀಲನೆ ಕೈಗೊಂಡರು. ಜುಗೂಳ ಗ್ರಾಮದ ಸಿದ್ದಿ ವಿನಾಯಕ ದೇವಸ್ಥಾನದ ಆವರಣದಲ್ಲಿ ಪ್ರವಾಹ ಸಂತ್ರಸ್ತರನ್ನು ಉದ್ದೇಶಿಸಿ ಮಾತನಾಡಿದ ವಸತಿ ಸಚಿವ ವಿ.ಸೋಮಣ್ಣ ಅವರು, ಪ್ರವಾಹಬಾಧಿತ ಪ್ರತಿ ಕುಟುಂಬಕ್ಕೂ ಪರಿಹಾರ ತಲುಪಿಸಲು ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಂಪೂರ್ಣ ಮನೆ ಕಳೆದುಕೊಂಡ ಕುಟುಂಬಗಳಿಗೆ ಈಗಾಗಲೇ ಮೊದಲ ಕಂತಿನಲ್ಲಿ ಒಂದು ಲಕ್ಷ ನೀಡಲಾಗಿದ್ದು, ಸಂತ್ರಸ್ತರು ಮನೆ ನಿರ್ಮಾ ಣ ಕೆಲಸ ಆರಂಭಿಸಬೇಕು ಎಂದು ತಿಳಿಸಿದರು.