ಜಮೀನು ಮಾರಾಟ: ನಕಲಿ ದಾಖಲೆ ಸೃಷ್ಟಿಸಿ ವಂಚನೆ: 6 ಜನ ಬಂಧನ
Land sale: Fraud by creating fake documents: 6 people arrested
ಹೂವಿನ ಹಡಗಲಿ ಅ.29: ವಿದೇಶದಲ್ಲಿರುವ ಮಾಲೀಕರ ಜಮೀನಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ತಾಲ್ಲೂಕಿನ ಕೊಯಿಲಾರಗಟ್ಟಿ ಕಂದಾಯ ಗ್ರಾಮದ 68.17 ಜಮೀನನ್ನು ಇಲ್ಲಿನ ಉಪ ನೋಂದಣಿ ಕಚೇರಿ ಯಲ್ಲಿ ಅಕ್ರಮವಾಗಿ ನೋಂದಣಿ ಮಾಡಿಸಿ ಮೂಲ ಜಮೀನು ಮಾಲೀಕರಿಗೆ ವಂಚಿಸಿರುವ ಪ್ರಕರಣಕ್ಕೆ 6ಜನ ಆರೋಪಿಗಳಿಗೆ ಇಲ್ಲಿನ ಜೆಎಂಎಫ್ ಸಿ ನ್ಯಾಯಾಲಯ ಸೋಮವಾರ ಜಮೀನು ನಿರಾಕರಣೆ ಮಾಡಿ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.
ಬಳ್ಳಾರಿಯ ಕೆ.ಮೋಹನ್, ಹಗರಿಬೊಮ್ಮನಹಳ್ಳಿ ತಾಲೂಕಿನ ಬಾದನಹಟ್ಟಿ ಗ್ರಾಮದ ಟಿ.ರಂಜಿತ್, ಶಿರಗುಪ್ಪದ ರಾವಿ ತಿರುಮಲೇಶ, ಬಳ್ಳಾರಿಯ ಎಸ್.ವಿಜಯಕುಮಾರ, ತಾಲೂಕಿನ ರಾಜವಾಳ ಗ್ರಾಮದ ಜಾಸ್ತಿ ಶ್ರೀನಿವಾಸ ರೆಡ್ಡಿ, ಪಟ್ಟಣದ ನಿವಾಸಿ ಲಲಿತ್ ಕುಮಾರ ಜೈನ್ ನ್ಯಾಯಾಂಗ ಬಂಧನವಾಗಿದೆ. ಇದೇ ಪ್ರಕರಣದ ಇನ್ನೊಬ್ಬ ಆರೋಪಿ ತಿಪಟೂರಿನ ಪಿ.ಸುರೇಶ್ ದಾವಣಗೆರೆ ಕಾರಾಗೃಹದಲ್ಲಿ ಬಂಧಿಯಾಗಿದ್ದಾರೆ.
ಪ್ರಕರಣ ವಿವರ: ಬೆಂಗಳೂರು ಮೂಲದ ವಿಜಯ್ ಥಾಮಸ್, ರಾಜನ್ ಥಾಮಸ್ ಅಮೇರಿಕ, ದುಬೈ ಯಲ್ಲಿ ನೆಲೆಸಿದ್ದಾರೆ. ತಾಲೂಕಿನ ಕೊಯಿಲಾರಗಟ್ಟಿ ಗ್ರಾಮದಲ್ಲಿ 2008 ರಲ್ಲಿ 97 ಎಕರೆ ಜಮೀನು ಖರೀದಿಸಿದ್ದರು. ಈ ಜಮೀನಿಗೆ ಯಾರು ದಿಕ್ಕು ದೆಸೆ ಇಲ್ಲ ಎಂಬ ತಿಪಟೂರಿನ ಸುರೇಶ ಎಂಬ ವ್ಯಕ್ತಿಯು ವಿಜಯ್ ಥಾಮಸ್ ಮತ್ತು ರಾಜನ್ ಥಾಮಸ್ ಎಂಬುವವರ ಕಡೆಯಿಂದ ಅಧಿಕಾರ ಪತ್ರ (ಪವರ್ ಆಫ್ ಆಟಾರ್ನಿ) ಸುಳ್ಳು ದಾಖಲೆ ಸೃಷ್ಟಿಸಿ 97 ಎಕರೆ ಜಮೀನಿನಲ್ಲಿ 68.17 ಸೆಂಟ್ಸ್ ಜಮೀನು ಆಸ್ತಿ ಬೇರೆ ಬೇರೆ ವ್ಯಕ್ತಿಗಳ ಹೆಸ-ರಿನಲ್ಲಿ ನೋಂದಣಿ ಮಾಡಿಸಿ ವಂಚಿಸಿದ್ದರು.ಜಮೀನು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಿದ್ದಾರೆ. ವಿದೇಶದಲ್ಲಿರುವ ಥಾಮಸ್ ಸಹೋದರ ವ್ಯವಸ್ಥಾಪಕ ಬೆಂಗಳೂರಿನ ಬಿಜು ಜಾಕೋ ಎಂಬುವರು ಮೇ ತಿಂಗಳಲ್ಲಿ ಜಮೀನು ನೋಡಿ ಕೊಂಡು ಹೋಗಲು ಕೊಯಿಲಾರಗಟ್ಟಿ ಗ್ರಾಮಕ್ಕೆ ಬಂದಾಗ ವಂಚನೆ ಬೆಳಕಿಗೆ ಬಂದಿದೆ.
ನಂತರ ಹೂವಿನಹಡಗಲಿ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ. ಆರೋಪಿಗಳು ಜಾಮೀನು ಪಡೆಯಲು ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆಗ ಅರ್ಜಿ ತಿರಸ್ಕೃತಗೊಂಡಿತ್ತು. ನಂತರದಲ್ಲಿ ಹೈಕೋಟ್ ನಲ್ಲಿಯೂ ಜಾಮೀನು ಅರ್ಜಿ ಹಾಕಿದ್ದರು. ಅಲ್ಲಿಯೂ ಅರ್ಜಿ ತಿರಸ್ಕೃತಗೊಂಡಿತ್ತು. ಇಲ್ಲಿನ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶೆ ಟಿ. ಅಕ್ಷತಾ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ು ನೀಡಿದ್ದಾರೆ. ಸಹಾಯಕ ಸರ್ಕಾರಿ ಅಭಿಯೋಜಕ ಕೆ.ಅಜ್ಜಯ್ಯ ವಾದ ಮಂಡಿಸಿದ್ದಾರೆ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 