ಎಣ್ಣೆ ಬದಲು ನೀರಿನಿಂದ ದೀಪ ಹಚ್ಚಿ ಪವಾಡ !


ಧಾರವಾಡ 14: ಎಣ್ಣೆಯ ಬದಲು ನೀರಿನಿಂದ ದೀಪ ಹಚ್ಚಿ ಕನರ್ಾಟಕ ವಿದ್ಯಾವರ್ದಕ ಸಂಘದ ವಿಜ್ಞಾನ ಮಂಟಪದ ಆಶ್ರಯದಲ್ಲಿ ನವಲಗುಂದ ತಾಲೂಕಿನ ಮೊರಬ ಗ್ರಾಮದಲ್ಲಿ ನಡೆದ `ಪವಾಡ ರಹಸ್ಯ ಬಯಲು' ಉದ್ಘಾಟನೆ ಸಮಾರಂಭ ಅಚ್ಚರಿ ಎಂಬಂತೆ ನಡೆಯಿತು. 

ಗ್ರಾಮದ ಹಿರಿಯರು ಮತ್ತು ಕನರ್ಾಟಕ ವಿದ್ಯಾವರ್ಧಕ ಸಂಘದ ಹಿರಿಯ ಸದಸ್ಯರೂ ಆಗಿರುವ ಹನುಮಂತಗೌಡ ಪಾಟೀಲ ಅವರು ಎಣ್ಣೆ ಬದಲು ಪ್ರಣತೆಗೆ ನೀರು ಸುರುವಿ ಅಲ್ಲಿಯ ಬತ್ತಿಗೆ ಮೇಣಬತ್ತಿಯಿಂದ ದೀಪ ಹಚ್ಚಿ ಅದು ಬೆಳಗುತ್ತಿದಂತೆ ಅಚ್ಚರಿಯೊಂದಿಗೆ ನೆರೆದ ಸಭಿಕರ ಸಂಗಡ ಚಪ್ಪಾಳೆ ತಟ್ಟಿ ಸಂತೋಷ ವಕ್ತಪಡಿಸಿದರು. ಈ ಅಚ್ಚರಿ ಇಷ್ಟಕ್ಕೆ ನಿಲ್ಲಲಿಲ್ಲ. ಕಾಜಿನ ತಟ್ಟೆಯಲ್ಲಿ ಮಡಿಕೆಯೊಪಾದಿಯಲ್ಲಿ ಇದ್ದ ಕಾಗದಗಳು ಅವುಗಳನ್ನು ತೇಲಿ ಬಿಟ್ಟಾಗ ಆಕರ್ಷಕ ಹೂವುಗಳಾಗಿ ರೂಪಾಂತರಗೊಂಡವು. 

ಕ.ವಿ.ವ.ಸಂಘದ ವಿಜ್ಞಾನ ಮಂಟಪ ಹಾಗೂ ಮೊರಬ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ-3 ರ ಆಶ್ರಯದಲ್ಲಿ ಹುಬ್ಬಳ್ಳಿಯ ಅಗಸ್ತ್ಯ ಪೌಂಢೇಶನವರು ಈ ಪವಾಡ ರಹಸ್ಯ ಬಯಲು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಒಟ್ಟು 30 ಕ್ಕೂ ಹೆಚ್ಚು ಪವಾಡಗಳ ರಹಸ್ಯ ಬಯಲು ಮಾಡಿ ಸಭಿಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು. ಇವುಗಳಲ್ಲಿ ಅನೇಕ ವೈವಿಧ್ಯತೆಗಳಿದ್ದವು. ಈ ಪೌಂಢೇಶನ ಮುಖ್ಯಸ್ಥರಾದ ಶಿವಾನಂದ ಚಲವಾದಿ, ಡಾ. ಬಬಿತಾ ಅವರು ಅಚ್ಚುಕಟ್ಟಾಗಿ ಕಾರ್ಯಕ್ರಮ ನೆರವೇರಿಸಿಕೊಟ್ಟರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಕಾಮರ್ಿಕ ಧುರೀಣ ಮತ್ತು ಕ.ವಿ.ವ.ಸಂಘದ ಗೌರವ ಉಪಾಧ್ಯಕ್ಷ ಎಂ. ಬಿ. ಕಟ್ಟಿಯವರು ಮಾತನಾಡಿ, ಪವಾಡಗಳ ಭೀತಿಯಿಂದ ಸಾಮಾನ್ಯ ಜನ ನರಳುತ್ತಿದ್ದಾರೆ. ಮೋಸಗಾರರು, ವಂಚಕರು, ಹಣ ಲಪಟಾಯಿಸುವವರು ಮಂಕು ಬೂದಿ ಎರಚುವ ಮೂಲಕ ಕಲ್ಪಿತ ಪವಾಡಗಳನ್ನು ಮಾಡುತ್ತಾರೆ. ವೈಜ್ಞಾನಿಕ ಹಿನ್ನೆಲೆಯಲ್ಲಿ ಪವಾಡ ರಹಸ್ಯ ಬಯಲು ಮಾಡುವ ಕಾರ್ಯಕ್ರಮಗಳು ಹಮ್ಮಿಕೊಂಡಿದ್ದು ಸ್ತುತ್ಯಾರ್ಹ ಎಂದರು. 

ಕ.ವಿ.ವ.ಸಂಘದ ವಿಜ್ಞಾನ ಮಂಟಪದ ಸಂಚಾಲಕ ಮನೋಜ ಪಾಟೀಲ ಮಾತನಾಡಿ, ಸಂಘದ ಆಶ್ರಯದಲ್ಲಿ ಮೊರಬ ಗ್ರಾಮದಲ್ಲಿ ಇಂತಹ ಕಾರ್ಯಕ್ರಮ ನಡೆಯುತ್ತಿರುವುದು ಇದೇ ಮೊದಲ ಬಾರಿಯಾಗಿದ್ದು, ಶಾಲಾ ವಿದ್ಯಾಥರ್ಿಗಳ ಮತ್ತು ಗ್ರಾಮಸ್ಥರ ಪ್ರತಿಕ್ರಿಯೆ ಸಂತೋಷ ತಂದಿದೆ ಎಂದರು. 

ಗ್ರಾಮ ಪಂಚಾಯಿತಿ ಸದಸ್ಯರಾದ ಷಣ್ಮುಖ ಕರಿಸೀರಿ, ಪ್ರಕಾಶ ಮಾನಶೆಟ್ಟಿ ಹಾಗೂ ಯೋಗಪ್ಪ ಧಾರವಾಡ ಇತರರು ಉಪಸ್ಥಿತರಿದ್ದರು. ವಿಜ್ಞಾನ ಮಂಟಪದ ಸಲಹಾ ಸಮಿತಿ ಸದಸ್ಯರಾದ ಮಹಾಂತೇಶ ನರೇಗಲ್ಲ ಹಾಗೂ ಗೋಪಾಲ ಖಾಸನೀಸ ಮಾತನಾಡಿದರು. ಡಾ. ಲಿಂಗರಾಜ ರಾಮಾಪುರ ಅವರು ಪವಾಡಗಳ ವೈಜ್ಞಾನಿಕ ಹಿನ್ನೆಲೆಯ ಬಗ್ಗೆ ವಿವರಿಸಿದರು. ಶಿಕ್ಷಕರಾದ ಮುತ್ತಣ್ಣ ಚುಳಕಿ ಕಾರ್ಯಕ್ರಮ ನಿರ್ವಹಿಸಿದರು. ಲಿಂಗರಾಜ ಕಮತರ ಅಭಾರ ಮನ್ನಿಸಿದರು.