ದೀಪ ಪ್ರಜ್ವಲನೆ ಕೇವಲ ಒಂದು ಸಂಪ್ರದಾಯ ಅಲ್ಲ: ಮುಜಾಹೀದ

ದೀಪ ಪ್ರಜ್ವಲನೆ ಕೇವಲ ಒಂದು ಸಂಪ್ರದಾಯ ಅಲ್ಲ: ಮುಜಾಹೀದ  Lamp lighting is not just a tradition: Mujahid

ದೀಪ ಪ್ರಜ್ವಲನೆ ಕೇವಲ ಒಂದು ಸಂಪ್ರದಾಯ ಅಲ್ಲ: ಮುಜಾಹೀದ  


ತಾಳಿಕೋಟಿ 16: ನರ್ಸಿಂಗ್‌ನ ಪಿತಾಮಹಿ ಫ್ಲಾರೆನ್ಸ್‌ ನೈಟಿಂಗೇಲ್ ಅವರ ಜನ್ಮದಿನಾಚರಣೆ ಅಂಗವಾಗಿ ಆಚರಿಸುವ ದೀಪ ಪ್ರಜ್ವಲನೆ ಕಾರ್ಯಕ್ರಮ ಕೇವಲ ಒಂದು ಆಚರಣೆಯಾಗಿರದೆ ನರ್ಸಿಂಗ್ ವಿದ್ಯಾರ್ಥಿಗಳ ಬದುಕಿಗೆ ಮಾರ್ಗದರ್ಶನ ನೀಡುವ ಮಹತ್ವದ ದಿನವಾಗಿದೆ ಎಂದು ಲೋಟಸ್ ಸಮೂಹ ಸಂಸ್ಥೆಯ ಆಡಳಿತಾಧಿಕಾರಿ ಮುಜಾಹೀದ ನಮಾಜಕಟ್ಟಿ ಹೇಳಿದರು.  

ಪಟ್ಟಣದ ಇದಗಾ ಶಾದಿ ಮಹಲ್ ದಲ್ಲಿ ನರ್ಸಿಂಗ್ ಪಿತಾಮಹಿ ಫ್ಲಾರೆನ್ಸ್‌ ನೈಟಿಂಗೇಲ್ ಅವರ ಜನ್ಮದಿನಾಚರಣೆ ಅಂಗವಾಗಿ ಸೋಮವಾರ ಹಮ್ಮಿಕೊಂಡ ದೀಪ ಪ್ರಜ್ವಲನೆ ಹಾಗೂ ನರ್ಸಿಂಗ್ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಅವರು ಮಾತನಾಡಿದರು. ನರ್ಸಿಂಗ್ ವಿದ್ಯಾರ್ಥಿಗಳು ತಮ್ಮ ವೃತ್ತಿಗೆ ಕಾಲಿಟ್ಟಾಗ ಅವರು ನೈಟಿಂಗೇಲ್ ಅವರ ದೃಷ್ಟಿಯ ದೀಪವಾಹಕರು ಎಂದು ಸದಾ ನೆನಪಿಡಬೇಕು. ನಿಮ್ಮಿಂದ ಬರುವ ಆರೈಕೆ ನಂಬಿಕೆ ಮತ್ತು ಆಸೆಯ ಬೆಳಕು ಸಮುದಾಯ ಹಾಗೂ ಆಸ್ಪತ್ರೆಗಳಲ್ಲಿ ಜೀವಗಳನ್ನು ಬದಲಾಯಿಸಬಲ್ಲದು ನಿಮ್ಮ ಈ ಪಯಣವು ಸಹಾನುಭೂತಿ ವೈಜ್ಞಾನಿಕ ಶ್ರೇಷ್ಠತೆ ಮತ್ತು ನರ್ಸಿಂಗ್ ಮೌಲ್ಯಗಳ ಬದ್ಧತೆಯೊಂದಿಗೆ ಇರಬೇಕಾಗಿದೆ ಎಂದರು.  

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಸಂಸ್ಥೆಯ ಅಧ್ಯಕ್ಷ ಇರ್ಫಾನ್ ಶೇಕ ಮಾತನಾಡಿ ಲೋಟಸ್ ನರ್ಸಿಂಗ್ ಶಾಲೆ ಪಟ್ಟಣದ ಪ್ರತಿಯೊಬ್ಬ ನರ್ಸಿಂಗ್ ವಿದ್ಯಾರ್ಥಿಯೂ ಕರುಣೆ, ಪ್ರಾಮಾಣಿಕತೆ ಮತ್ತು ಬದ್ಧತೆಯ ಮೌಲ್ಯಗಳನ್ನು ಅಳವಡಿಸಿಕೊಂಡು ತಮ್ಮ ಆರೈಕೆಯಿಂದ ಇತರರ ಬದುಕಿನಲ್ಲಿ ಬೆಳಕು ಪಸರಿಸುವ ಕಾರ್ಯವನ್ನು ಮಾಡಬೇಕು ಎಂದು ಬಯಸುತ್ತದೆ ಎಂದರು.  

ಇದೇ ಸಂದರ್ಭದಲ್ಲಿ 2024- 25 ನೇ ಸಾಲಿನಲ್ಲಿ ಡಿ ಫಾರ್ಮ್‌ ಸಿ ಹಾಗೂ ನರ್ಸಿಂಗ್ ಅಂತಿಮ ವರ್ಷದಲ್ಲಿ ಅತಿ ಹೆಚ್ಚು ಅಂಕಗಳಿಸಿದ ಲೋಟಸ್ ಸಮೂಹ ಸಂಸ್ಥೆಯ ತಲಾ ಐದು ವಿದ್ಯಾರ್ಥಿಗಳನ್ನು,ತಾಳಿಕೋಟಿ ಸಿ.ಎಚ್‌.ಸಿ.ಹಾಗೂ ಕೊಡಕಲ್ಲ ಪಿ.ಎಚ್‌.ಸಿ. ಶುಸ್ರೋಷಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಧಾರ್ಮಿಕ ಮುಖಂಡ ಸೈಯದ್ ಶಕೀಲ್ ಅಹಮದ್ ಖಾಜಿ, ಪುರಸಭೆ ಮಾಜಿ ಸದಸ್ಯ ಪ್ರಭುಗೌಡ ಮದರಕಲ್ಲ,ಇದಗಾ ಕಮಿಟಿ ಅಧ್ಯಕ್ಷ ಮಾಸೂಮಸಾಬ ಕೆಂಭಾವಿ, ಎಂ.ಎ. ಮೇತ್ರಿ,ಕೊಡಕಲ್ಲ ಸಿ.ಎಚ್‌.ಓ. ಸತೀಶ ಕುಮಾರ, ಉಪನ್ಯಾಸಕ ಎಂ.ಎಚ್‌. ನಮಾಜಕಟ್ಟಿ, ಖ್ಯಾತ ವೈದ್ಯ ಡಾ. ಗಂಗಾಂಬಿಕಾ ಪಾಟೀಲ, ಪ್ರಸೂತಿ ತಜ್ಞೆ ಡಾ.ಮಧುಬಾಲಾ ಸಿಂಘಾಲ, ಮಡಿವಾಳಪ್ಪ, ರಮೇಶ, ಡಿ ಫಾರ್ಮ್‌ ಸಿ ಕಾಲೇಜ್ ಪ್ರಾಚಾರ್ಯ ಡಾ.ಸಿರಾಜ್ ಚೌಧರಿ,ನಿರ್ದೇಶಕ ಡಾ.ಅಬ್ದುಲ್ ರೆಹಮಾನ, ಕಾರ್ಯದರ್ಶಿ ನೂರ ನಮಾಜಕಟ್ಟಿ, ಉಪನ್ಯಾಸಕರಾದ ಸೂರಜ ಡಿ,ನಗಮಾನಾಜ್, ಇಮ್ತಿಯಾಜ್, ಇಲಿಯಾಸ್, ತಾಳಿಕೋಟಿ ಸಿ.ಎಚ್‌.ಸಿ. ಹಾಗು ಕೊಡೆಕಲ್ ಪಿಎಚ್ ಸಿ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.