ಲಕ್ಷ್ಮಣ ಸವದಿ ಬಿ.ಎಸ್.ವೈ ಕಾಲಿನ ದೂಳಿಗೆ ಸಮವಿಲ್ಲ, ತಕ್ಷಣವೇ ರಾಜೀನಾಮೆ ನೀಡಲಿ

ಹಾವೇರಿ:  ದಕ್ಷಿಣ ಭಾರತದಲ್ಲಿ ಬಿಜೆಪಿ ಪಕ್ಷ ಕಟ್ಟಿ ಬೆಳೆಸಿ ಕನರ್ಾಟಕದಲ್ಲಿ ಅಧಿಕಾರ ತರುವಲ್ಲಿ ಕಷ್ಟಪಟ್ಟವರು ಬಿಎಸ್ ಯಡಿಯೂರಪ್ಪ ಅಂತವರಿಗೆ  ಆರ್.ಎಸ್.ಎಸ್ ನಾಯಕ ಬಿ.ಎಲ್.ಸಂತೋಷ ಅವರು ಬಿ.ಎಸ್.ಯಡಿಯೂರಪ್ಪ ಅವರ ಸಂಪುಟದಲ್ಲಿ ಉಪಮುಖ್ಯಮಂತ್ರಿ ಹುದ್ದೆಯನ್ನು ಸೃಷ್ಠಿ ಮಾಡುವ ಮೂಲಕ ಬಿಜೆಪಿ ಪರೋಕ್ಷವಾಗಿ ಬಿ.ಎಸ್.ವೈನ್ನು ಮೂಲೆಗುಂಪು ಮಾಡಲು ಹೊರಟಿದೆ ಎಂದು ಕನರ್ಾಟಕ ಜನತಾ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಪದ್ಮನಾಭ ಪ್ರಸನಕುಮಾರ ಬಿ.ಎಸ್.ವೈ ಪರ ಬ್ಯಾಟ್ ಬೀಸಿದರು.

       ಮಂಗಳವಾರ ಹಾವೇರಿಯಲ್ಲಿ ಆರಂಭವಾಗಿರುವ ಕೆಜೆಪಿ ಪಕ್ಷದ ಜಿಲ್ಲಾ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.   

        ಸದನದಲ್ಲಿ ನೀಲಿ ಚಿತ್ರ ವಿಕ್ಷಣೆ ಮಾಡಿರುವ ಲಕ್ಷ್ಮಣ ಸವದಿ, ಸೋತ ಸುಣ್ಣವಾಗಿದ್ದರು. ಅವರು ಉಪಮುಖ್ಯಮಂತ್ರಿಯಾಗಲು ಆರ್.ಎಸ್.ಎಸ್. ನಾಯಕ ಸಂತೋಷ ಅವರಿಗೆ ಎಷ್ಟು ಹಣ ಕೊಟ್ಟಿದ್ದಾರೆ ಎಂಬುದನ್ನು ಬಹಿರಂಗ ಪಡಿಸಲಿ. ರಾಜ್ಯದಲ್ಲಿ ಬಿ.ಎಸ್.ವೈಗೆ ಪಯರ್ಾಯ ನಾಯಕರನ್ನು ಹುಟ್ಟು ಹಾಕಲು ಸಂತೋಷ ಅವರು ಸವದಿಗೆ ಡಿ.ಸಿ.ಎಂ. ಸ್ಥಾನ ಕೊಡಿಸಿದ್ದಾರೆ.

        ಆದರೆ, ಲಕ್ಷ್ಮಣ ಸವದಿ ಬಿ.ಎಸ್.ವೈ ಕಾಲಿನ ದೂಳಿಗೆ ಸಮವಿಲ್ಲ. ಸ್ವಪಕ್ಷಿಯರಿಂದ ಯಡಿಯೂರಪ್ಪ ಅವರಿಗೆ ಒಳಗ-ಒಳಗೇ ಗುನ್ನ ಇಡುವ ಕಾರ್ಯ ನಡೆದಿದೆ. ಅಲ್ಲದೇ ಬಿಜೆಪಿಯಲ್ಲಿ ಯಡಿಯೂರಪ್ಪ ಅವರ ಬೆಂಬಲಿಗರನ್ನು ತುಳಿಯಲಾಗುತ್ತಿದೆ. ಆ ಮೂಲಕ ಪಕ್ಷದಿಂದ ಬಿ.ಎಸ್.ವೈ ಅವರನ್ನು ಸೈಡ್ ಲೈನ್ಗೆ ತಳ್ಳುವ ತಂತ್ರ ನಡೆದಿದೆ ಎಂದು ದೂರಿದರು. 

      ದಕ್ಷಿಣ ಭಾರತದಲ್ಲಿ ಬಿಜೆಪಿಯ ಕವಡೆ ಕಾಸಿನ ಕಿಮ್ಮತ್ತು ಇರಲಿಲ್ಲ. ಬಿ.ಎಸ್.ವೈ ಸೈಕಲ್ ಹತ್ತಿ ಪಕ್ಷ ಸಂಘಟನೆ ಮಾಡಿ, ಇಂದು ಪಕ್ಷವನ್ನು ಅಧಿಕಾರಕ್ಕೆ ತರುವ ಮಟ್ಟಿಗೆ ಬೆಳೆಸಿದ್ದಾರೆ. ಅಧಿಕಾರಕ್ಕೆ ಬರುವ ತನಕ ಬಿ.ಎಸ್.ವೈ ಅವರನ್ನು ಬಳಸಿಕೊಂಡ ಬಿಜೆಪಿ ಹಾಗೂ ಆರ್.ಎಸ್.ಎಸ್. ಪುನಃ ಯಡಿಯೂರಪ್ಪ ಅವರನ್ನು ಪರೋಕ್ಷವಾಗಿ ಹತ್ತಿಕ್ಕುವ ಕೆಲಸ ನಡೆಸಿದೆ.

           ಯಡಿಯೂರಪ್ಪ ಅವರನ್ನು ಕಟ್ಟಿ ಹಾಕಲು ಡಿ.ಸಿ.ಎಂ.ಹುದ್ದೆ ಸೃಷ್ಠಿ ಮಾಡಲಾಗಿದೆ ಇದರಲ್ಲಿ ಬಿಜೆಪಿ ಅಧ್ಯಕ್ಷ ಅಮೀತ್ ಶಾ ಕುತಂತ್ರ ಸಹ ಇದೆ. ಜೊತೆಗೆ ರಾಜ್ಯದಲ್ಲಿ ಪಕ್ಷದ ಪದಾಧಿಕಾರಿಗಳ ಆಯ್ಕೆಯಲ್ಲಿ ಬಿ.ಎಲ್. ಸಂತೋಷ ತಮಗೆ ಬೇಕಾದವರಿಗೆ ಸ್ಥಾನ-ಮಾನ ನೀಡುವ ಮೂಲಕ ಬಿಜೆಪಿಯಲ್ಲಿ ಹಿಡಿತ ಸಾಧಿಸಲು ಮುಂದಾಗಿದ್ದಾರೆ ಎಂದು ದೂರಿದರು. 

        ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಅಧಿಕಾರ ನಡೆಸುತ್ತಿರುವ ಬಿ.ಎಸ್.ವೈ ನೋಡಿದರೆ, ಜೀವ ಮರುಗುತ್ತಿದೆ ಯಾವುದೇ ನಾಯಕರಿಗೂ ಇಂತಹ ಸ್ಥಿತಿ ಬರಬಾರದು. ಈ ಎಲ್ಲ ಬೆಳವಣಿಗೆ ನೋಡಿದರೆ ರಾಜ್ಯದಲ್ಲಿ 2013 ರಂತೆ ಕೆ.ಜೆ.ಪಿ ನೇತೃತ್ವದ ಯುಗ ಆರಂಭವಾಗುವ ಮುಂಚೂಚನೆ ಕಂಡು ಬರುತ್ತಿದೆ. 

       ಆ ಹಿನ್ನೆಲೆಯಲ್ಲಿ ಈಗ 17 ಕ್ಷೇತ್ರದಲ್ಲಿ ನಡೆಯುವ ಉಪ ಚುನಾವಣೆಗೆ ಕೆಜೆಪಿಯಿಂದ ಅಭ್ಯಥರ್ಿಗಳ ಕಣಕ್ಕೆ ಇಳಿಸಲಾಗುವದು.  ಮಧ್ಯಂತರ ಚುನಾವಣೆ ಬಂದರೆ, 224 ಕ್ಷೇತ್ರದಲ್ಲಿ ಚುನಾವಣೆಗೆ ಸ್ಪಧರ್ಿಸುತ್ತೇವೆ ಎಂದು ತಿಳಿಸಿದರು. 

         ಕೇಂದ್ರದಲ್ಲಿ ಆಡಳಿತ ಮಾಡುತ್ತಿರುವ ಬಿಜೆಪಿ ನೇತೃತ್ವದ ಪ್ರಧಾನಿ ನರೇಂದ್ರ ಮೋದಿ ಆಡಳಿತ ಅವಧಿಯು ಆಥರ್ಿಕ ದಿವಾಳಿಯನ್ನುಂಟು ಮಾಡಿದೆ. 

       ಜನಸಾಮಾನ್ಯರ ಜೀವನ ಬೀದಿಗೆ ಬೀಳುವಂತಾಗಿದೆ, ಪ್ರಸ್ತುತ ಜಿಡಿಪಿ ಶೇ.5 ಅಂದರೆ ವಿರೋಧಿ ರಾಷ್ಟಗಳಿಗಿಂತ ಕನಿಷ್ಠ ನಾಚೀಗೆಯಾಗಬೇಕು ಈ ಮೋದಿ ಸರಕಾರಕ್ಕೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ದೇಶದ ಕೈಗಾರಿಕೆಗಳು ನೆಲಕಚ್ಚುತ್ತಿವೆ. ಅಲ್ಲಿನ ಲಕ್ಷಾಂತರ ಉದ್ಯೋಗಸ್ಥರು ಕೆಲಸ ಕಳೆದುಕೊಂಡು ಬೀದಿ ಪಾಲಾಗುತ್ತಿದ್ದಾರೆ. ದೇಶ ರೈತ ಕುಲಕ್ಕೆ ಈ ಸರಕಾರದಲ್ಲಿ ಬೆಲೆ ಇಲ್ಲ  ಈ ದೇಶವನ್ನು ಮೂರು ದಶಕ ಕಾಂಗ್ರೆಸ್  ಅನ್ಯಾಯ ಮಾಡಿದರೇ ಇವರು ಆರೇ ವರ್ಷದಲ್ಲಿ ಲೂಟಿ ಮಾಡಿದ್ದಾರೆ ಎಂದು ಹೇಳಿದರು. 

      ಈ ಸಮಯದಲ್ಲಿ ಜಿಲ್ಲಾ ಕೆಜೆಪಿ ಅಧ್ಯಕ್ಷ ಸತೀಶ ಮಾಳದಕರ, ಮಲ್ಲಿಕಾಜರ್ುನ ಪಾಟೀಲ್,  ಸೇರಿದಂತೆ ಮುಂತಾದವರು ಹಾಜರಿದ್ದರು.