ಧರ್ಮಸ್ಥಳ ಗ್ರಾಮಾಭಿರುದ್ಧಿ ಯೋಜನೆ ವತಿಯಿಂದ ಕೆರೆಯ ಭೂಮಿ ಪೂಜೆ ಕಾರ್ಯಕ್ರಮ
Lake Bhoomi Puja program by Dharmasthala Rural Development Project
ಲೋಕದರ್ಶನ ವರದಿ
ಧರ್ಮಸ್ಥಳ ಗ್ರಾಮಾಭಿರುದ್ಧಿ ಯೋಜನೆ ವತಿಯಿಂದ ಕೆರೆಯ ಭೂಮಿ ಪೂಜೆ ಕಾರ್ಯಕ್ರಮ
ಗದಗ 05 : 25-26 ನೇ ಸಾಲಿನ ನಮ್ಮೂರು ನಮ್ಮಕೆರೆ ಕಾರ್ಯಕ್ರಮದಡಿಯಲ್ಲಿ ಗದಗ ತಾಲೂಕಿನ ಹೊಂಬಳ ವಲಯದ ಕದಡಿ ಗ್ರಾಮದ ಸಾರ್ವಜನಿಕ ಕುಡಿಯುವ ನೀರಿನ ಕೆರೆಗೆ ಭೂಮಿಪೂಜೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಕೇಶವ ದೇವಾಂಗ ಅವರು ಮಾತನಾಡಿ, ಯೋಜನಾ ಕಾರ್ಯಕ್ರಮಗಳು ಹಾಗೂ ನಮ್ಮೂರು ನಮ್ಮ ಕೆರೆ ಪ್ರಾರಂಭವಾದ ಬಗ್ಗೆ ಮಾಹಿತಿ ನೀಡಿ ಕಾಮಗಾರಿ ಸಂದರ್ಭದಲ್ಲಿ ಎದುರಾಗುವ ಸಮಸ್ಯೆಗಳಿಗೆ ಸಮಿತಿಯವರು ನಮ್ಮ ಕಾರ್ಯಕರ್ತರಿಗೆ ಸಹಕಾರ ನೀಡಬೇಕು ಮತ್ತು ಕೆರೆಯಲ್ಲಿ ಸ್ವಚ್ಛತೆ ಕಾಪಾಡುವಂತೆ ಮನವಿ ಮಾಡಿದರು.
ಊರಿನ ಹಿರಿಯರಾದ ವೀರುಪಾಕ್ಷಪ್ಪ ಅವರು ಮಾತನಾಡಿ, ಸರ್ಕಾರ ಮಾಡದ ಕೆಲಸ ಧರ್ಮಸ್ಥಳ ಯೋಜನೆ ಮಾಡಿಕೊಂಡು ಬಂದಿದೆ ಸಮಾಜಸೇವೆಯನ್ನು ತಮ್ಮ ಉಸಿರಾಗಿ ಮಾಡಿಕೊಂಡಿರುವ ಪೂಜ್ಯ ಹೆಗ್ಗಡೆ ದಂಪತಿಗಳಿಗೆ ನಮ್ಮ ನಮನಗಳು ಈ ಕೆರೆ ಕಾಮಗಾರಿಗೆ ನಮ್ಮ ಊರಿನ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಕೆರೆ ಸಮಿತಿ ಅಧ್ಯಕ್ಷರಾದ ರುದ್ರ್ಪ ಗಾರವಾಡ ಅವರು ಮಾತನಾಡಿ, ಕೆರೆ ಕಾಮಗಾರಿ ನಮ್ಮೂರಿಗೆ ಬಂದಿರುವುದು ನಮ್ಮ ಭಾಗ್ಯ ಅದರಲ್ಲೂ ಸಮಿತಿ ಅಧ್ಯಕ್ಷತೆ ಸಿಕ್ಕಿರುವುದು ನನ್ನ ಪುಣ್ಯ ನಾನು ಯಾವುದೇ ಪಲಾಪೇಕ್ಷೆ ಇಲ್ಲದೆ ನಿಸ್ವಾರ್ಥವಾಗಿ ದುಡಿಯುವುದಾಗಿ ಹೇಳಿದರು.
ಕೆರೆ ಸಮಿತಿ ಉಪಾಧ್ಯಕ್ಷರಾದ ಶಿವಾನಂದ ಮರಗೋಳ ಅವರು ಮಾತನಾಡಿ, ಈ ಸೇವೆಯಲ್ಲಿ ಭಾಗವಹಿಸುವುದು ನಮ್ಮ ಪೂರ್ವ ಜನುಮದ ಪುಣ್ಯ ಈ ಕೆಲಸದಲ್ಲಿ ಯಾವುದೇ ರಾಜಕೀಯ ಬಣಗಳು ಪ್ರವೇಶಿಸದೆ ಜಾತಿ, ಕುಲ, ಧರ್ಮ ನೋಡದೆ ಒಟ್ಟಾಗಿ ಎಲ್ಲರೂ ಸೇವೆ ಸಲ್ಲಿಸೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೊಪ್ಪಳ ಪ್ರಾದೇಶಿಕ ವ್ಯಪ್ತಿ ಕೆರೆ ಅಭಿಯಂತರರಾದ ಸತೀಶ, ತಾಲೂಕಾ ಕ್ಷೇತ್ರ ಯೋಜನಾಧಿಕಾರಿ ಉಮಾ, ಕೃಷಿ ಮೇಲ್ವಿಚಾರಕರು ಕಿರಣ ಮಹೇಂದ್ರಕರ, ವಲಯದ ಮೇಲ್ವಿಚಾರಕರಾದ ಮಲ್ಲಿಕಾರ್ಜುನ ಗೌಡ್ರು, ಪಂಚಾಯತ್ ಅಧ್ಯಕ್ಷೆ ಕವಿತಾ ಕೋಣಿಮನಿ, ಒಕ್ಕೂಟದ ಅಧ್ಯಕ್ಷರು ಅನ್ನಪೂರ್ಣ ನಾಯ್ಕ್ ಊರಿನ ಹಿರಿಯರಾದ ಪರಶುರಾಮ, ಸೇರಿದಂತೆ ನವಜೀವನ ಸಮಿತಿ ಸರ್ವ ಸದ್ಯಸರು, ಗ್ರಾಮ ಪಂಚಾಯತ ಅಧ್ಯಕ್ಷರು ಹಾಗೂ ಸರ್ವ ಸದ್ಯಸರು, ಕೆರೆ ಸಮಿತಿ ಸರ್ವ ಸದ್ಯಸರು, ಸ್ವ ಸಹಾಯ ಸಂಘದ ಸದ್ಯಸರು ಊರಿನ ಗುರು ಹಿರಿಯರು ಗ್ರಾಮಸ್ಥರು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 