ಸಂಪನ್ಮೂಲಗಳ ಕೊರತೆ ಗಾಯಕರ ಕನಸಿಗೆ ಅಡ್ಡಿಯಾಗಬಾರದು : ಪರಿಖ್

ಅಹಮದಾಬಾದ್, ಫೆ 08 ,ಸಂಪನ್ಮೂಲಗಳ ಕೊರತೆಯಿಂದಾಗಿ ಮಹತ್ವಾಕಾಂಕ್ಷಿ ಗಾಯಕರು ತಮ್ಮ ಕನಸುಗಳ ಸಾಧನೆಯನ್ನು ನಿಲ್ಲಿಸದೆ ಮಹತ್ವಾಕಾಂಕ್ಷಿಗಳಾಗಿ ಮುಂದುವರೆಯಬೇಕು ಎಂದು ಗುಜರಾತಿ ಗಾಯಕ ಪೃಥ್ವಿ ಪರಿಖ್ ಹೇಳಿದ್ದಾರೆ.ಅವರು ಇತ್ತೀಚೆಗೆ ಟರ್ಕಿಯಲ್ಲಿ ಹಿಂದಿ ವಿಡಿಯೋ ಸಾಂಗ್ ಅನ್ನು ಬಾಂಗ್ಲಾದೇಶಿ ನಟ ರಾಸಾ ಇಸ್ಲಾಂ ಅವರೊಂದಿಗೆ ಬಹಳ ಸೀಮಿತ ಸಂಪನ್ಮೂಲಗಳು ಮತ್ತು ಬಜೆಟ್ನೊಂದಿಗೆ ಚಿತ್ರೀಕರಿಸಿದ್ದು, ಈ ಮೂಲಕ  ಹಲವು ಕೊರತೆಗಳಿಂದ ಹೆಣಗಾಡುತ್ತಿರುವ ಗಾಯಕರಿಗೆ ಸಂದೇಶವನ್ನು ರವಾನಿಸಿದ್ದಾರೆ.  ಅಹಮದಾಬಾದ್‌ನ ಯುವ ಗಾಯಕ ಪರಿಖ್ ಅವರು ನಾಲ್ಕು ಗುಜರಾತಿ ಚಲನಚಿತ್ರಗಳಿಗೆ ಹಿನ್ನಲೆ ಹಾಡನ್ನು ಸಹ ಮಾಡಿದ್ದಾರೆ, ಇದರಲ್ಲಿ 'ಡಿ ತಾಲಿ' ಮತ್ತು 'ಆಂಗ್ರಿ ಫ್ಯಾಮಿಲಿ'  ಮೆಚ್ಚುಗೆ ಪಡೆದಿವೆ. ಮತ್ತು 'ಉಡಾನ್ ದ ಬ್ಯಾಂಡ್' ಎಂಬ ಜನಪ್ರಿಯ ಬ್ಯಾಂಡ್ ಅನ್ನು ಅವರು ಮುನ್ನಡೆಸುತ್ತಿದ್ದಾರೆ.  ಕಲೆಗೆ ಭಾಷೆ ಅಡ್ಡಿಯಾಗದು,. ಯಾವುದೇ ಭಾಷೆಯ ಹಾಡುಗಳನ್ನು ಹಾಡಲು ತಾವು ಸಿದ್ಧ ಎಂದೂ ಸಹ ಪರಿಖ್ ಹೇಳಿಕೊಂಡಿದ್ದಾರೆ.