ಗದಗ ಅವಳಿ ನಗರ ನಾಗರಿಕರಿಗೆ ಮೂಲಭೂತ ಸೌಕರ್ಯಗಳ ಕೊರತೆ: ಅಗತ್ಯ ಕ್ರಮಕ್ಕೆ ಆಗ್ರಹ
Lack of basic amenities for Gadag twin city citizens: Demand for necessary action
ಗದಗ 19:-ಅವಳಿ ನಗರವಾದ ಬೆಟಗೇರಿ ನಗರವು ಐತಿಹಾಸಿಕ ಪ್ರಸಿದ್ಧ, ಸಂಸ್ಕೃತಿ ವೈಭವದಿಂದ ಕೂಡಿದ ಸ್ಥಳವಾಗಿದ್ದರೂ,ಅದರಲ್ಲೂ ಇಂದು ವಾಣಿಜ್ಯ ಸಂಸ್ಕೃತಿ, ಮತ್ತು ವಸ್ತು ಪ್ರದರ್ಶನ ಪ್ರಾಧಿಕಾರ ರಚನೆಯಾಗಿ ಹೈಟೆಕ್ ನಗರದ ಪರಿಕಲ್ಪನೆಯನ್ನು ಹೊಂದಿರುವ ಅವಳಿ ನಗರವು ಇಂದಿನ ದಿನಗಳಲ್ಲಿ ನಾಗರಿಕರು ಹಲವಾರು ಮೂಲಸೌಕರ್ಯ ಕೊರತೆಯಿಂದ ನರಳುತ್ತಿದ್ದಾರೆ. ನಾಗರಿಕರು ದಿನನಿತ್ಯದ ಸುರಳಿತ ಜೀವನಕ್ಕೆ ತೊಡಕು ಉಂಟುಮಾಡುತ್ತಿರುವದು ಬೇಸರದ ಸಂಗತಿಯಾಗಿರುತ್ತದೆ ಎಂದು ಉತ್ತರ ಕರ್ನಾಟಕ ಭಾರತೀಯರ ಸೇವಾ ಸಮಿತಿಯ ಅಧ್ಯಕ್ಷರಾದ ಫಾಸ್ಟರ್ ಫ್ರಾನ್ಸಿಸ್ ಕನ್ನಯ್ಯರವರು ವಿಷಾದವನ್ನು ವ್ಯಕ್ತಪಡಿಸಿರುತ್ತಾರೆ.
ಅನೇಕ ಬೀದಿಗಳು ಮತ್ತು ಪ್ರಮುಖ ರಸ್ತೆಗಳಲ್ಲಿ ಸರಿಯಾದ ರಸ್ತೆ ಇಲ್ಲದಿರುವುದು ಜನರಿಗೆ ಹಾಗೂ ವಾಹನ ಸಂಚಾರಕ್ಕೆ ತೀವ್ರ ತೊಂದರೆ ಉಂಟುಮಾಡುತ್ತಿದೆ. ಮಳೆ ಬಂದಾಗ ಮಣ್ಣು-ಕಾಲುವೆ ನೀರುತುಂಬಿ ರಸ್ತೆ ಸಂಚಾರವೇ ಅಸಾಧ್ಯವಾಗುತ್ತದೆ. ಪಾದಚಾರಿಗಳಿಗೆ ಫುಟ್ಪಾತ್ ಗಳ ಕೊರತೆ ಪಾದಚಾರಿಗಳಿಗೆ ಸುರಕ್ಷಿತವಾಗಿ ನಿರ್ಭಯವಾಗಿ ಸಂಚರಿಸಲು ಅಗತ್ಯ ಫುಟ್ಪಾತ್ ಇಲ್ಲದಿರುವುದರಿಂದ, ಮಕ್ಕಳು, ಮಹಿಳೆಯರು, ಹಿರಿಯರು ರಸ್ತೆಯಲ್ಲೇ ನಡೆಯಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ.ಇದರಿಂದ ಅಪಘಾತಗಳಿಗೆ ಕಾರಣವಾಗುತ್ತಿದೆ.
ತಗ್ಗು ಗುಂಡಿಗಳಿಂದ ಕೂಡಿದ ಪ್ರಮುಖ ರಸ್ತೆಗಳು: ಬಹುತೇಕ ರಸ್ತೆಗಳು ಗುಂಡಿ ಬಿದ್ದಿವೆ. ವಾಹನ ಸವಾರರು ಮಾತ್ರವಲ್ಲ, ಅಂಬ್ಯುಲೆನ್ಸ್ ಮತ್ತು ಅಗ್ನಿಶಾಮಕ ವಾಹನಗಳಿಗೂ ಸಂಚರಿಸಲು ತೊಂದರೆ ಆಗುತ್ತಿದೆ. ಅನೇಕ ಬಾರಿ ಜನರ ಜೀವಾಪಾಯದ ಪರಿಸ್ಥಿತಿ ಉಂಟಾಗಿದೆ.
ಪಟ್ಟಣದ ಪ್ರಮುಖ ಬಸ್‌ಸ್ಟ್ಯಾಂಡ್, ಮಾರುಕಟ್ಟೆ ಪ್ರದೇಶ, ಸರ್ಕಾರಿ ಕಚೇರಿಗಳ ಬಳಿ ವಾಹನ ನಿಲ್ಲಿಸಲು ಸೂಕ್ತ ಸ್ಥಳವಿಲ್ಲ. ಇದರಿಂದ ವಾಹನ ದಟ್ಟಣೆ ಹೆಚ್ಚಾಗಿ ಗೊಂದಲ ಉಂಟಾಗಿದೆ. ನಾಗರಿಕರಿಗೆ ತಕ್ಕ ಪ್ರಮಾಣದಲ್ಲಿ ಕುಡಿಯುವ ಶುದ್ಧ ನೀರು ದೊರೆಯುತ್ತಿಲ್ಲ. ಹಲವಾರು ವಾರ್ಡ್‌ಗಳಲ್ಲಿ ದಿನಗಟ್ಟಲೆ ನೀರಿನ ಸರಬರಾಜು ಆಗದೆ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಸರಿಯಾದ ಒಳಚರಂಡಿ ಇಲ್ಲದೆ ನೀರುರಸ್ತೆ ಮೇಲೆ ಹರಿದು ದುರ್ವಾಸನೆ, ಮಲಿನತೆ, ಆರೋಗ್ಯ ಸಮಸ್ಯೆಗಳನ್ನು ಸೃಷ್ಟಿಸಿದೆ. ಮಲೇರಿಯಾ, ಡೆಂಗ್ಯೂ ಮೊದಲಾದ ರೋಗಗಳ ಭೀತಿ ಹೆಚ್ಚಾಗಿದೆ.
ಸರ್ಕಾರಿ ಶಾಲೆಗಳ ಅಭಿವೃದ್ಧಿ ಕೊರತೆಯಿಂದ ಹಿಂದುಳಿತ ಸ್ಥಿತಿ :ಹಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯಗಳ ಕೊರತೆ ಇದೆ. ಕುಡಿಯುವ ನೀರು, ಶೌಚಾಲಯ, ಮೇಜು-ಕುರ್ಚಿಗಳು, ಕಿಟಕಿಗಳು ಸರಿಯಾಗಿ ಇಲ್ಲದಿರುವುದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಹಾನಿ ಮಾಡುತ್ತಿದೆ.
ಆದುದರಿಂದ ಸಂಭಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲಾಡಳಿತದಿಂದ ಅವಳಿ ನಗರದ ನಾಗರಿಕರ ಹಿತರಕ್ಷಣೆ ಯದ್ಯೋತಕವಾಗಿ ಸೂಕ್ತ ಕ್ರಮಗಳನ್ನು ಕೈಗೊಂಡು ಸಮಸ್ತ ನಾಗರಿಕರಿಗೆ ಸುರಳಿತ ಸುರಕ್ಷಿತ ಜೀವನ ಸಾಗಿಸುವಂತಾಗಲು ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲು ಮುಂದಾಗಬೇಕೆಂದು ಸಮಸ್ತ ನಾಗರಿಕರ ಹಿತದೃಷ್ಟಿಯಿಂದ ಉತ್ತರ ರ್ನಾಟಕ ಭಾರತೀಯರ ಸೇವಾ ಸಮಿತಿಯ ಅಧ್ಯಕ್ಷರಾದ ಫಾಸ್ಟರ್ ಫ್ರಾನ್ಸಿಸ್ ಕನ್ನಯ್ಯರವರು ಜನಾಗ್ರಹವನ್ನು ವ್ಯಕ್ತಪಡಿಸಿರುತ್ತಾರೆ.
ಅವಳಿ ನಗರದಲ್ಲಿಅಗತ್ಯ ಮೂಲಭೂತ ಸೌಕರ್ಯಗಳ ಕೊರತೆಯಿಂದ ಹಲವಾರು ಸಮಸ್ಯೆಗಳು ಸಾಮಾನ್ಯ ನಾಗರಿಕರ ದಿನನಿತ್ಯದ ಬದುಕಿಗೆ ನೇರವಾಗಿ ಸಂಬಂಧಿಸಿದ್ದು ತಕ್ಷಣಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 