ಕೂಲಿ ಕಾರ್ಮಿಕನ ಮಗನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಪ್ರತಿಮ ಸಾಧನೆ

ಕೂಲಿ ಕಾರ್ಮಿಕನ ಮಗನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಪ್ರತಿಮ ಸಾಧನೆ Laborer's son scores outstanding in SSLC exam

ಲೋಕದರ್ಶನ ವರದಿ 

ಮಾಂಜರಿ 26 : ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ಅಂಧ ವಿದ್ಯಾರ್ಥಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ 96 ರಷ್ಟು ಅಂಕಗಳಿಸಿದ್ದಾರೆ. ದೃಷ್ಟಿ ಇಲ್ಲದಿದ್ದರೂ ಛಲ ಬಿಡದ ಈ ವಿದ್ಯಾರ್ಥಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಬರೋಬ್ಬರಿ 96ಅ ಅಂಕ ಗಳಿಸುವ ಮೂಲಕ ರಾಜ್ಯವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾನೆ. ಯಕ್ಸಂಬಾ ಗ್ರಾಮದ ಅಮಿತ್ ಸಂಜಯ್ ಗಿಡ್ಡ ಎಂಬ ಯುವಕನೇ ಈ ಅಪ್ರತಿಮ ಸಾಧಕ. ಅಮಿತ್ ತಂದೆ ಒಬ್ಬ ಸಾಮಾನ್ಯ ಕೂಲಿ ಕಾರ್ಮಿಕರು. ಬಡತನದ ನಡುವೆಯೂ ಮಗನ ಶಿಕ್ಷಣಕ್ಕೆ ತಂದೆ-ತಾಯಿ ಶ್ರಮವಹಿಸಿದ್ದರು. ತನಗೆ ಕಣ್ಣು ಕಾಣಿಸದಿದ್ದರೂ ಅದನ್ನು ಅಡ್ಡಿ ಎಂದು ಭಾವಿಸದ ಅಮಿತ್, ಇಂದು ಇಡೀ ಗ್ರಾಮವೇ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾನೆ. ಅಮಿತ್ ಅಸಾಧಾರಣ ಜ್ಞಾಪಕ ಶಕ್ತಿಯನ್ನು ಹೊಂದಿದ್ದಾನೆ. ಒಮ್ಮೆ ಕೇಳಿದ್ದನ್ನು ಅಚ್ಚುಕಟ್ಟಾಗಿ ನೆನಪಿಟ್ಟುಕೊಳ್ಳುವ ಈತನ ಸಾಮರ್ಥ್ಯ ಎಂತಹವರನ್ನೂ ಮೂಕರನ್ನಾಗಿಸುತ್ತದೆ. ಇನ್ನು ವಿದ್ಯೆ ಅಷ್ಟೇ ಅಲ್ಲದೆ ಸಂಗೀತದಲ್ಲಿಯೂ ಅಮಿತ್ ಎತ್ತಿದ ಕೈ. ಈತ ಸಂ ವಾದ್ಯಗಳನ್ನು ನುಡಿಸಲು ಶುರು ಮಾಡಿದರೆ ಕೇಳ  ಮಂತ್ರಮುಗ್ಧರಾಗುತ್ತಾರೆ.  

ಸಂಗೀತವೇ ಈತನ ಪಾಲಿನಅಮಿತ್ ಅಸಾಧಾರಣ ಜ್ಞಾಪಕ ಶಕ್ತಿಯನ್ನು ಹೊಂದಿದ್ದಾನೆ. ಒಮ್ಮೆ ಕೇಳಿದ್ದನ್ನು ಅಚ್ಚುಕಟ್ಟಾಗಿ ನೆನಪಿಟ್ಟುಕೊಳ್ಳುವ ಈತನ ಸಾಮರ್ಥ್ಯ ಎಂತಹವರನ್ನೂ ಮೂಕರನ್ನಾಗಿಸುತ್ತದೆ. ಇನ್ನು ವಿದ್ಯೆ ಅಷ್ಟೇ ಅಲ್ಲದೆ ಸಂಗೀತದಲ್ಲಿಯೂ ಅಮಿತ್ ಎತ್ತಿದ ಕೈ. ಈತ ಸಂಗೀತ ವಾದ್ಯಗಳನ್ನು ನುಡಿಸಲು ಶುರು ಮಾಡಿದರೆ ಕೇಳುಗರು ಮಂತ್ರಮುಗ್ಧರಾಗುತ್ತಾರೆ. ಸಂಗೀತವೇ ಈತನ ಪಾಲಿನ ಬೆಳಕಾಗಿದೆ. ಕಣ್ಣಿದ್ದವರಿಗೂ 90ಕ್ಕಿಂತ ಹೆಚ್ಚು ಅಂಕ ಗಳಿಸುವುದು ಕಷ್ಟಸಾಧ್ಯವಿರುವ ಇಂದಿನ ದಿನಗಳಲ್ಲಿ, ಅಮಿತ್ ಬರೋಬ್ಬರಿ 96 ರಷ್ಟು ಅಂಕಗಳನ್ನು ಬಾಚಿಕೊಳ್ಳುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾನೆ. ದೃಷ್ಟಿ ಇಲ್ಲದಿದ್ದರೂ ತನ್ನ ಜ್ಞಾನದ ದೃಷ್ಟಿಯಿಂದ ಅಸಾಧಾರಣ ಸಾಧನೆ ಮಾಡಿರುವ ಅಮಿತ್ ಗಿಡ್ಡ ಎಂಬ ಈ ಗ್ರಾಮೀಣಪ್ರತಿಭೆಗೆ ಈಗರಿ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ. ಈತನ ಸಾಧನೆಗೆ ಪ್ರೋತ್ಸಾಹ ನೀಡಿದರೆ ಭವಿಷ್ಯದಲ್ಲಿ ದೇಶದ ದೊಡ್ಡ ಆಸ್ತಿಯಾಗುವುದರಲ್ಲಿ ಸಂಶಯವಿಲ್ಲ.