೨೩ ರಂದು ಕರಕುಶಲಗಾರರಿಗೆ ಲೇಬರ್ ಕಾರ್ಡ್ ವಿತರಣೆ ಹಾಗೂ ಮೆಗಾ ನೋಂದಣಿ ಶಿಬಿರ
Labor card distribution and mega registration camp for artisans on the 23rd
ಬೆಳಗಾವಿ, ಜೂನ್ ೨೨: ದೈವಜ್ಞ ಜುವೆಲ್ಲರ್ಸ್ ಅಸೋಸಿಯೇಷನ್ (ಆಎಂ), ಬೆಳಗಾವಿ ವತಿಯಿಂದ ಜಿಲ್ಲೆಯ ಚಿನ್ನದ ಕೆಲಸಗಾರರು, ಕರಕುಶಲಗಾರರು, ಕಾರಿಗರು, ಅರ್ಕಸಾಲಿಗಳು ಹಾಗೂ ಶಿಲ್ಪಿಗಳಿಗಾಗಿ “ಹುನರ್ ಸೆ ವಿಕಾಸ್” ಉಪಕ್ರಮದಡಿ ಲೇಬರ್ ಕಾರ್ಡ್ ವಿತರಣೆ ಹಾಗೂ ಮೆಗಾ ನೋಂದಣಿ ಶಿಬಿರವನ್ನು ಜೂನ್ ೨೩ ರಂದು ಆಯೋಜಿಸಲಾಗಿದೆ.
ನಗರದ ಕುಮಾರ ಗಂಧರ್ವ ಹಾಲ್‌ನಲ್ಲಿ (ಹಳೆಯ ಎಸ್‌ಪಿ ಕಚೇರಿ ಹತ್ತಿರ) ಬೆಳಿಗ್ಗೆ ೧೦ ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ಉದ್ಘಾಟನಾ ಸಮಾರಂಭದೊAದಿಗೆ ಅರ್ಹ ಫಲಾನುಭವಿಗಳಿಗೆ ಲೇಬರ್ ಕಾರ್ಡ್ಗಳನ್ನು ವಿತರಿಸಲಾಗುವುದು.
ಇತ್ತೀಚೆಗೆ ಲೇಬರ್ ಕಾರ್ಡ್ಗೆ ಅರ್ಜಿ ಸಲ್ಲಿಸಿ ಪ್ರಕ್ರಿಯೆ ಪೂರ್ಣಗೊಳಿಸಿರುವ ಕರಕುಶಲಗಾರರಿಗೆ ಜಿಲ್ಲಾಧಿಕಾರಿ ಹಾಗೂ ಉಪ ಕಾರ್ಮಿಕ ಆಯುಕ್ತರ ಸಮ್ಮುಖದಲ್ಲಿ ಕಾರ್ಡ್ಗಳನ್ನು ವಿತರಿಸಲಾಗುವುದು.
ಈ ಕಾರ್ಯಕ್ರಮವು ಕರಕುಶಲ ಸಮುದಾಯವನ್ನು ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳೊಂದಿಗೆ ಸಂಪರ್ಕಿಸುವ ಉದ್ದೇಶ ಹೊಂದಿದೆ.
ಇದೇ ವೇಳೆ ಇನ್ನೂ ಲೇಬರ್ ಕಾರ್ಡ್ಗೆ ನೋಂದಣಿ ಮಾಡಿಸದಿರುವ ಕರಕುಶಲಗಾರರಿಗಾಗಿ ವಿಶೇಷ ಮೆಗಾ ನೋಂದಣಿ ಶಿಬಿರವನ್ನೂ ಆಯೋಜಿಸಲಾಗಿದೆ. ನೋಂದಣಿಗಾಗಿ ಆಧಾರ್ ಕಾರ್ಡ್ ಜೆರಾಕ್ಸ್, ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ ಹಾಗೂ ರಾಷ್ಟ್ರೀಕೃತ ಬ್ಯಾಂಕ್ ಪಾಸ್‌ಬುಕ್ ಜೆರಾಕ್ಸ್ ಪ್ರತಿಯನ್ನು ತರಬೇಕೆಂದು ತಿಳಿಸಲಾಗಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸುವುದು, ಲೇಬರ್ ಕಾರ್ಡ್ ನೋಂದಣಿ ಹಾಗೂ ಸರ್ಕಾರದ ಕಲ್ಯಾಣ ಯೋಜನೆಗಳಿಗೆ ಸೇರ್ಪಡೆಗೊಳ್ಳುವುದು ಸಂಪೂರ್ಣ ಉಚಿತವಾಗಿದ್ದು, ಯಾವುದೇ ರೀತಿಯ ಶುಲ್ಕ ಪಾವತಿಸುವ ಅಗತ್ಯವಿಲ್ಲ ಎಂದು ಸಂಘದ ಪದಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಈ ಕಾರ್ಯಕ್ರಮಕ್ಕೆ ಐಬಿಜೆಎ ಇಂಡಿಯಾ ಬುಲಿಯನ್ ಅಂಡ್ ಜುವೆಲ್ಲರ್ಸ್ ಅಸೋಸಿಯೇಷನ್ ಸಹಯೋಗ ನೀಡುತ್ತಿದೆ.
ಲೇಬರ್ ಕಾರ್ಡ್ಗೆ ಈಗಾಗಲೇ ಅರ್ಜಿ ಸಲ್ಲಿಸಿರುವ ಎಲ್ಲಾ ಕರಕುಶಲಗಾರರು ಕಾರ್ಯಕ್ರಮಕ್ಕೆ ಹಾಜರಾಗಿ ತಮ್ಮ ಕಾರ್ಡ್ಗಳನ್ನು ಸ್ವತಃ ಪಡೆದುಕೊಳ್ಳುವಂತೆ ದೈವಜ್ಞ ಜುವೆಲ್ಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಮಣಿಕ್ ಗಜಾನನ ನರೇಶ್ ಅಣವೇಕರ್ ಹಾಗೂ ಗೌರವ ಕಾರ್ಯದರ್ಶಿ ವೈಭವ ಶಾಂತಾರಾಮ್ ವೆರ್ಣೇಕರ್ ಮನವಿ ಮಾಡಿದ್ದಾರೆ.
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ 