ಪಾಕಿಸ್ತಾನದಲ್ಲಿ ಎಲ್ಪಿಜಿ ಟ್ಯಾಂಕರ್ ಸ್ಫೋಟ: 6 ಜನರ ದುರ್ಮರಣ

ಇಸ್ಲಾಮಾಬಾದ್, ಫೆಬ್ರವರಿ 24, ಪಾಕಿಸ್ತಾನದ ನೈರುತ್ಯ  ಪ್ರಾಂತೀಯ ರಾಜಧಾನಿ ಕ್ವೆಟ್ಟಾದಲ್ಲಿ  ಅನಿಲ  (ಎಲ್ಪಿಜಿ) ಟ್ಯಾಂಕರ್ ಸ್ಫೋಟಗೊಂಡು  6 ಜನರು ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ  ಇತರೆ  ಮೂವರಿಗೆ ಗಂಭೀರವಾಗಿ ಗಾಯಗಳಾಗಿವೆ ಎಂದು  ಸ್ಥಳೀಯ ಮಾಧ್ಯಮ  ವರದಿ ಮಾಡಿವೆ.      ವರದಿಗಳ ಪ್ರಕಾರ, ಭಾನುವಾರ ರಾತ್ರಿ ಕಳ್ಳಸಾಗಾಣಿಕೆದಾರರ ಗುಂಪೊಂದು ಹಾಜಿ ಕ್ಯಾಂಪ್ ಬಳಿಯ ಗೋದಾಮಿನೊಂದರಲ್ಲಿ ಟ್ಯಾಂಕರ್ನಲ್ಲಿ ತಯಾರಿಸಿದ ಗುಟ್ಕಾ ತಂಬಾಕು, ಬೆಟೆಲ್ ಕಾಯಿಗಳಿಂದ ತಯಾರಿಸಿದ ನಿಷೇಧಿತ ಔಷಧ  ಗಳನ್ನು ಮರೆಮಾಚಲು  ಪ್ರಯತ್ನಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ.        

ಬೆಂಕಿಯು ಗೋದಾಮಿನಲ್ಲಿದ್ದ ಎಲ್ಲ ಎಂಟು ಜನರನ್ನು ಸುಟ್ಟುಹಾಕಿದ್ದು, ಅವರಲ್ಲಿ ಐವರು ಸಾವನ್ನಪ್ಪಿದ್ದಾರೆ.ರಕ್ಷಣಾ , ಪರಿಹಾರ ತಂಡಗಳು  ಪೊಲೀಸರು ಮತ್ತು ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿ ಶವಗಳನ್ನು ಮತ್ತು ಗಾಯಾಳುಗಳನ್ನು ಆಸ್ಪತ್ರೆಗೆ ಸ್ಥಳಾಂತರಿವೆ .ಬೆಂಕಿಯಲ್ಲಿ ಸಿಲುಕಿಕೊಂಡ ರಕ್ಷಣಾ  ಸಿಬ್ಬಂದಿಯೊಬ್ಬರೂ ಸಹ  ದುರಂತದಲ್ಲಿ  ಮೃತಪಟ್ಟಿದ್ದಾರೆ ಎಂದೂ  ವರದಿಯಾಗಿದೆ.  ಗಾಯಗೊಂಡ ಮೂವರ ಸ್ಥಿತಿ ಗಂಬೀರವಾಗಿರುವ  ಕಾರಣ  ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗಲಿದೆ. ಕಳ್ಳಸಾಗಣೆ ಜಾಲದಲ್ಲಿ ಭಾಗಿಯಾಗಿರುವ ಇತರ ವ್ಯಕ್ತಿಗಳನ್ನು ಬಂಧಿಸಲು ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು  ತನಿಖೆ ಆರಂಭಿಸಿದ್ದಾರೆ.