ಲಿಬಿಯಾ ರಾಯಭಾರಿ ರಾಜೀನಾಮೆ, ಖಚಿತಪಡಿಸಿದ ವಿಶ್ವಸಂಸ್ಥೆ

ವಿಶ್ವಸಂಸ್ಥೆ, ಮಾರ್ಚ್ 3, ಲಿಬಿಯಾದ ವಿಶ್ವ ಸಂಸ್ಥೆಯ ಉನ್ನತ ರಾಯಭಾರಿ ಘಾಸನ್ ಸಲಾಮೆ ಅವರು ರಾಜೀನಾಮೆ ನೀಡಿದ್ದಾರೆ ಎಂದು ವಿಶ್ವಸಂಸ್ಥೆಯು ಸೋಮವಾರ ದೃಡಪಡಿಸಿದೆ. ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರು ಸಲಾಮೆ ಅವರಿಂದ ಈ ಹುದ್ದೆಯನ್ನು ತೊರೆಯುವ ಉದ್ದೇಶ, ಇಂಗಿತವನ್ನು ಪತ್ರದ ಮೂಲಕ ವ್ಯಕ್ತಪಡಿಸಿದ್ದಾರೆ ಎಂದು ಗುಟೆರೆಸ್ ವಕ್ತಾರ ಸ್ಟೀಫನ್ ಡುಜಾರಿಕ್ ಹೇಳಿದ್ದಾರೆ. ಈ ವಿಷಯದ ಬಗ್ಗೆ ಗುಟರೆಸ್ ಸಲಾಮೆ ಅವರೊಂದಿಗೆ ಚರ್ಚಿಸಲಿದ್ದಾರೆ ಎಂದೂ ಡುಜಾರಿಕ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಲೆಬನಾನಿನವರಾದ ಸಲಾಮೆ ಅವರನ್ನು 2017 ರ ಜೂನ್ನಲ್ಲಿ ಲಿಬಿಯಾದ ವಿಶ್ವಸಂಸ್ಥೆ ಸಪೋರ್ಟ್ ಮಿಷನ್ ಮುಖ್ಯಸ್ಥರನ್ನಾಗಿ ನೇಮಿಸಲಾಗಿತ್ತು.