ಜಕಾರ್ತಾ, ಫೆ 20,ಇಂಡೋನೇಷ್ಯಾದ ಪಶ್ಚಿಮ ಜಾವಾ ಪ್ರಾಂತ್ಯದಲ್ಲಿ ಗುರುವಾರ ಸಂಭವಿಸಿದ ಪ್ರಕೃತಿ ವಿಕೋಪದ ಮಳೆ, ಭೂಕುಸಿತಕ್ಕೆ ನಾಲ್ವರು ಮೃತಪಟ್ಟಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ವಕ್ತಾರ ಅಗಸ್ ವಿಬೊವೊ ತಿಳಿಸಿದ್ದಾರೆ.ಭಾರಿ ಮಳೆಯಿಂದಾಗಿ ಭೂಕುಸಿತ ಉಂಟಾಗಿದ್ದು, ಬೊಗೊರ್ ಜಿಲ್ಲೆಯ ಸಿಬೊಲಾಂಗ್ ಗ್ರಾಮದಲ್ಲಿ ಅನೇಕ ಮನೆಗಳು ಹಾನಿಯಾಗಿದೆ ಎಂದೂ ವಕ್ತಾರರು ತಿಳಿಸಿದ್ದಾರೆ."ಹಾನಿಗೊಳಗಾದ ಮನೆಯಲ್ಲಿ ಪರಿಹಾರ ಕಾರ್ಯಕರ್ತರು ನಾಲ್ಕು ಶವಗಳನ್ನು ಹೊರ ತೆಗೆದಿದ್ದಾರೆ . ಸೈನಿಕರು, ಪೊಲೀಸ್ ಸಿಬ್ಬಂದಿ, ಅಗ್ನಿಶಾಮಕ ದಳ ಮತ್ತು ಸ್ಥಳೀಯ ನಿವಾಸಿಗಳನ್ನು ಒಳಗೊಂಡ ಪರಿಹಾರ ಪಡೆಗಳಿಂದ ಪರಿಹಾರ ಕಾರ್ಯ ನಡೆಯುತ್ತಿದೆ.ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಕಳುಹಿಸಲಾಗಿದೆ.ಭಾರೀ ಮಳೆಯ ಸಮಯದಲ್ಲಿ ದೇಶದಲ್ಲಿ ಭೂಕುಸಿತ, ಪ್ರವಾಹ ಸಾಮಾನ್ಯವಾಗಿದೆ.