ತಿರುವನಂತಪುರಂ ಮಾರ್ಚ್ 9, ವಿಶ್ವದ ಅತಿದೊಡ್ಡ ಮಹಿಳಾ ಭಕ್ತರ ಸಮಾಗಮದಲ್ಲಿ ಮಹಿಳೆಯರ ಶಬರಿಮಲೆ ಎಂದೇ ಖ್ಯಾತವಾಗಿರುವ ಇಲ್ಲಿನ ಅತ್ತುಕಲ್ ಭಗವತಿ ದೇವಸ್ಥಾನದಲ್ಲಿ ಸೋಮವಾರ ಲಕ್ಷಾಂತರ ಮಹಿಳೆಯರು ‘ಅತ್ತುಕಲ್ ಪೊಂಗಲಾ’ ಅರ್ಪಿಸಿದರು. ಪೊಂಗಲಾ ಅರ್ಪಿಸಲು ವಿಶ್ವದ ವಿವಿಧ ಭಾಗಗಳಿಂದ ಲಕ್ಷಾಂತರ ಮಹಿಳಾ ಭಕ್ತರು ಅತ್ತುಕ್ಕುಲ್ ದೇವಾಲಯದ ಸುತ್ತ 10 ಕಿ.ಮೀ ವ್ಯಾಪ್ತಿಯಲ್ಲಿ ಸಮಾವೇಶಗೊಂಡು ಮಣ್ಣಿನ ಮಡಕೆಗಳಲ್ಲಿ ಬೆಲ್ಲ ಮತ್ತು ತೆಂಗಿನಕಾಯಿ ಬಳಸಿದ ಸಿಹಿ ಅಕ್ಕಿ ತಯಾರಿಸಿ ದೇವತೆಗೆ ಅರ್ಪಿಸಿದರು.ಬೆಳಿಗ್ಗೆ 10.20ಕ್ಕೆ ಆಚರಣೆಗಳು ಆರಂಭವಾದವು. ದೇವಾಲಯದ ಗರ್ಭಗುಡಿಯಿಂದ ತಂದ ಬೆಂಕಿಯಿಂದ ಮುಖ್ಯ ಅರ್ಚಕರು ತಾತ್ಕಾಲಿಕ ಒಲೆ ಹಚ್ಚಿದರು.
ನಂತರ ಒಲೆಯ ಕೆಂಡಗಳನ್ನು 250ಕ್ಕೂ ಅರ್ಚಕರು ರಸ್ತೆಯ ಎರಡೂ ಬದಿಗಳಲ್ಲಿ ನಿಂತಿದ್ದ ಮಹಿಳೆಯರಿಗೆ ನೀಡಿದರು. ಈ ಕೆಂಡಗಳಿಂದ ಮಹಿಳೆಯರು ಪ್ರಸಾದವನ್ನು ತಯಾರಿಸಿ ತಮ್ಮ ಕುಟುಂಬಗಳ ಆರೋಗ್ಯ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸಿ ಅರ್ಪಿಸಿದರು. ಪೊಂಗಲಾ ಆಚರಣೆಯಲ್ಲಿ ಮಹಿಳೆಯರಿಗೆ ಮಾತ್ರ ಭಾಗವಹಿಸಲು ಅವಕಾಶವಿದೆ.ಮಾರ್ಚ್ 1ರಂದು ಆರಂಭವಾದ10 ದಿನಗಳ ಉತ್ಸವ ಮಾರ್ಚ್ 10 ರಂದು 'ಕಪ್ಪು' ಮತ್ತು 'ಕುರುತಿ ತರ್ಪಣಂ' ಅನ್ನು ತೆಗೆದುಹಾಕುವುದರೊಂದಿಗೆ ಉತ್ಸವವು ಮುಕ್ತಾಯಗೊಳ್ಳಲಿದೆ. .ಅತ್ತುಕಲ್ ಪೊಂಗಲಾ ಉತ್ಸವದಲ್ಲಿ ಜಾತಿ, ಮತ, ಧರ್ಮ ಭೇದವಿಲ್ಲದೆ ಒಂದೇ ದಿನದಲ್ಲಿ ಒಂದೇ ಸ್ಥಳದಲ್ಲಿ 25 ಲಕ್ಷಕ್ಕೂ ಮಹಿಳೆಯರು ಸೇರಿರುವುದು ಗಿನ್ನೆಸ್ ದಾಖಲೆಯಾಗಿದೆ.