ಕೊಟ್ಟೂರು, ಫೆ 22,ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿ ಮಣ್ಣಿನ ಮನೆ ಕುಸಿದು ಕಾರ್ಮಿಕನೊರ್ವ ಮೃತಪಟ್ಟಿರುವ ಘಟನೆ ವರದಿಯಾಗಿದೆ. ತಾಲೂಕಿನ ಹುಣಿಸಿಕಟ್ಟೆ ಗ್ರಾಮದ ಅಂಜಿನಪ್ಪ (35) ಮೃತ ವ್ಯಕ್ತಿ. ಇಲ್ಲಿನ ಮೂಗಬಸವೇಶ್ವರ ಆಸ್ಪತ್ರೆ ಸಮೀಪದ ಹಳೆಯ ಮಣ್ಣಿನ ಮನೆ ಕೆಡವಲು 21 ಸಾವಿರ ರೂಗಳಿಗೆ ಗುತ್ತಿಗೆ ಪಡೆದುಕೊಂಡಿದ್ದು, ಮನೆ ಕಡವಲು ಹೋಗುತ್ತಿದ್ದಂತೆಯೇ ಮನೆ ಕುಸಿದು ಬಿದ್ದದೆ. ಇದರ ಪರಿಣಾಮ ಅಂಜಿನಪ್ಪ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಈ ಬಗ್ಗೆ ಕೊಟ್ಟೂರು ಪೊಲ್ಲೀಸ್ ಠಾಣೆಯಲ್ಲಿ ಪ್ರಕರಣದಖಲಾಗಿದೆ.