ಕವಿವಿಯನ್ನು ಮಾದರಿ ವಿಶ್ವವಿದ್ಯಾಲಯವಾಗಿ ಪರಿಗಣಿಸಲಾಗಿದೆ: ಪ್ರೊ. ಎ.ಎಂ. ಖಾನ್
Kuvempu University is considered a model university: Prof. A.M. Khan
ಲೋಕದರ್ಶನ ವರದಿ
ಧಾರವಾಡ, 24: ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನ (ರೂಸಾ) ಅಡಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯವನ್ನು ಮಾದರಿ ವಿಶ್ವವಿದ್ಯಾಲಯವಾಗಿ ಪರಿಗಣಿಸಲಾಗಿದೆ ಎಂದು ಕುಲಪತಿ ಪ್ರೊ. ಎ.ಎಂ. ಖಾನ್ ಹೇಳಿದರು. ಕವಿವಿ ಸ್ನಾತಕೋತ್ತರ ಶಿಕ್ಷಕರ ಸಂಘದ ಆಶ್ರಯದಲ್ಲಿ ಬುಧವಾರ ನಡೆದ ಮಾನಸೋಲ್ಲಾಸ ಸಮಾರಂಭ ಹಾಗೂ ನಿವೃತ್ತ ಪ್ರಾಧ್ಯಾಪಕರು ಮತ್ತು ಅಂತಾರಾಷ್ಟ್ರೀಯ ಮಟ್ಟದ ಶೈಕ್ಷಣಿಕ ಸಾಧನೆ ಮಾಡಿದ ಅಧ್ಯಾಪಕರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕವಿವಿಯ ಪ್ರಾಧ್ಯಾಪಕರು ಜಾಗತಿಕ ಮಟ್ಟದ ಶ್ರೇಷ್ಠ ಶೇ.5ರ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಹಾಗೂ ಅಂತಾರಾಷ್ಟ್ರೀಯ ಜರ್ನಲ್ಗಳಲ್ಲಿ ಸಂಶೋಧನಾ ಲೇಖನಗಳನ್ನು ಪ್ರಕಟಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ವಿಶ್ವವಿದ್ಯಾಲಯದ ಶೈಕ್ಷಣಿಕ ಅಭಿವೃದ್ಧಿಗಾಗಿ ಕೋರ್ ಕಮಿಟಿ ಹಾಗೂ ಶೈಕ್ಷಣಿಕ ಸಂಶೋಧನೆ ಮತ್ತು ಅಭಿವೃದ್ಧಿ ಸಮಿತಿಗಳನ್ನು ರಚಿಸಲಾಗಿದೆ. ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿಗೆ ಒತ್ತು ನೀಡುವ ಉದ್ದೇಶದಿಂದ ಪ್ರತಿಷ್ಠಿತ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಇದು ವಿಶ್ವವಿದ್ಯಾಲಯದ ಪ್ರಗತಿಯ ಸಂಕೇತವಾಗಿದ್ದು, ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಉತ್ತಮ ಅವಕಾಶಗಳನ್ನು ಪಡೆಯಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕವಿವಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಪ್ರೊ. ಜಯಶ್ರೀ ಜೆ. ತೋಣಣವರ ದಂಪತಿ, ಪ್ರೊ. ಎಸ್.ಕೆ. ಪವಾರ್ ಹಾಗೂ ಪ್ರೊ. ಡೇವಿಡ್ ಅವರನ್ನು ಸನ್ಮಾನಿಸಲಾಯಿತು. ಶೈಕ್ಷಣಿಕ ಸಾಧನೆಗಾಗಿ ಪ್ರೊ. ಆರ್.ಎಫ್. ಭಜಂತ್ರಿ (ಭೌತಶಾಸ್ತ್ರ), ಡಾ. ಆರ್.ಆರ್. ಕಾಂಬಳೆ, ಪ್ರೊ. ಆರ್. ಚೌಗಲಾ (ರಸಾಯನಶಾಸ್ತ್ರ), ಪ್ರೊ. ರಮಾನೆ (ಗಣಿತಶಾಸ್ತ್ರ), ಪ್ರೊ. ಶಣ್ಮುಖ ಕಾಂಬಳೆ (ಮನೋವಿಜ್ಞಾನ), ಪ್ರೊ. ಸಂಗೀತಾ ಮಾನೆ (ಸಮಾಜಕಾರ್ಯ), ಪ್ರೊ. ಜೆ.ಎಂ. ಚಂದುನವರ (ಪತ್ರಿಕೋದ್ಯಮ), ಪ್ರೊ. ಈಶ್ವರ ಬೈದರೆ (ಕಂಪ್ಯೂಟರ್ ಸೈನ್ಸ್) ಹಾಗೂ ಡಾ. ನಿಂಗಪ್ಪ ಮೂದೇನೂರ (ಕನ್ನಡ) ಅವರನ್ನು ಗೌರವಿಸಲಾಯಿತು.
ಕುಲಸಚಿವ ಪ್ರೊ. ವಿಶ್ವನಾಥ ಎಂ., ಮೌಲ್ಯಮಾಪನ ಕುಲಸಚಿವ ಪ್ರೊ. ಎಂ.ಎಂ. ಕಡಕೋಳ ಉಪಸ್ಥಿತರಿದ್ದರು. ಕಾರ್ಯದರ್ಶಿ ಪ್ರೊ. ಹನುಮಗೌಡ ಸಿ. ಸ್ವಾಗತಿಸಿ ಪರಿಚಯಿಸಿದರು. ಸಂಘದ ಅಧ್ಯಕ್ಷ ಪ್ರೊ. ಎ.ಬಿ. ವೇದಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಪದ್ಮಾವತಿ ಸಿಂಗಾರಿ ಪ್ರಾರ್ಥಿಸಿದರು. ಪ್ರೊ. ತ್ರಿವೇಣಿ ಎಸ್. ನಿರೂಪಿಸಿದರು. ಪ್ರೊ. ಸಂಗೀತಾ ಮಾನೆ ವಂದಿಸಿದರು.
ಎನ್ಒಸಿ ನೀಡಲು ಲಂಚ : ಖಾನಾಪುರ ತಾಲೂಕು ಆರೋಗ್ಯಾಧಿಕಾರಿ ಲೋಕಾಯುಕ್ತ ಬಲೆಗೆ
ಅರ್ಧಕ್ಕೆ ನಿಂತ ಚನ್ನಮ್ಮ ಪ್ರತಿಮೆ ಕಾಮಗಾರಿ: ಅವ್ಯವಹಾರದ ಶಂಕೆ : ಲೆಕ್ಕ ಕೊಡಿ ಹೋರಾಟಕ್ಕೆ ಕನ್ನಡ ಹೋರಾಟಗಾರರು ಸಜ್ಜು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ 