ತೋಟಗಾರಿಕೆ ಬೆಳೆಯಲ್ಲಿ ಯಶಸ್ಸು ಕಂಡ ಕುಟುಗನಹಳ್ಳಿಯ ರೈತ

ಕೊಪ್ಪಳ 05: ಕೃಷಿಯನ್ನು ನಂಬಿದವರಿಗೆ ಭೂಮಿತಾಯಿ ಎಂದೂ ಕೈ ಕೊಟ್ಟಿಲ್ಲ ಎನ್ನುವುದಕ್ಕೆ ಅಶೋಕ ಹಾಗೂ ವೆಂಕನಗೌಡ ಮೇಟಿ ಅವರ ಕುಟುಂಬ ಸಾಕ್ಷಿಯಾಗಿದೆ.

ಕೊಪ್ಪಳ ಜಿಲ್ಲೆಯ ಕುಟುಗನಹಳ್ಳಿ ಗ್ರಾಮದ ಅಶೋಕ ಹಾಗೂ ವೆಂಕನಗೌಡ ಅವರು ಕೃಷಿಯನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದಾರೆ. ಇವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದು, ಶಾಲಾ ಸಮಯದ ನಂತರ ಮತ್ತು ಬಿಡುವಿನ ವೇಳೆಯಲ್ಲಿ ಕೃಷಿಯಲ್ಲೇ ಕಾಲ ಕಳೆಯುತ್ತಾರೆ. ಕಿರಿಯರಾದ ಅಶೋಕ ರವರು ಕೂಡಾ ಕೃಷಿ ಪದವೀಧರರಾಗಿದ್ದು ಯಾವುದೇ ನೌಕರಿಗೆ ಸೇರದೆ ತಮ್ಮ ಜಮೀನಿನಲ್ಲಿಯೇ ದುಡಿಯುತ್ತಿದ್ದಾರೆ. 47 ಎಕರೆ ಜಮೀನು ಉಸ್ತುವಾರಿ ನೋಡಿಕೊಳ್ಳುತ್ತಾರೆ. ಇವರ ಒಟ್ಟು 47 ಎಕರೆ ಜಮೀನಿನಲ್ಲಿ 12 ಎಕರೆ ಪ್ರದೇಶದಲ್ಲಿ ವಿವಿಧ ತಳಿಯ ಮಾವು, 2 ಸಾವಿರ ಚ.ಮೀ. ವಿಸ್ತೀರ್ಣದ 1 ಪಾಲಿಮನೆ ಮತ್ತು 1 ನೆರಳು ಪರದೆ ಮಾಡಿಕೊಂಡಿದ್ದಾರೆ. ಇದಲ್ಲದೇ ದೊಡ್ಡ ಕೃಷಿ ಹೊಂಡವನ್ನು ಮಾಡಿಕೊಂಡಿರುತ್ತಾರೆ. ಇವರ ಜಮೀನಿನಲ್ಲಿ ಮೂರು ಕೊಳವೆ ಬಾವಿಗಳಿವೆ. ವರ್ಷದುದ್ದಕ್ಕೂ ತರಕಾರಿ, ಪುಷ್ಪ ಕೃಷಿ, ಜೇನು ಕೃಷಿ ಮತ್ತು ಬಹು ವಾಷರ್ಿಕ ಹಣ್ಣಿನ ಬೆಳೆಗಳನ್ನು ಬೆಳೆಯುತ್ತಾರೆ. 

2019-20ನೇ ಸಾಲಿನಲ್ಲಿ ಸಮಗ್ರ ತೋಟಗಾರಿಕೆ ಯೋಜನೆಯಡಿ ಫಲಾನುಭವಿಯಾಗಿ ಆಯ್ಕೆಯಾದ ಇವರು 5 ಎಕರೆ ವಿಸ್ತೀರ್ಣದಲ್ಲಿ ಕಲ್ಲಂಗಡಿ ಬೆಳೆ ಬೆಳೆದಿದ್ದಾರೆ. ಹೋಬಳಿ ಅಧಿಕಾರಿ ಕೃಷ್ಣಮೂತರ್ಿ ಪಾಟೀಲ್ ಮತ್ತು ವಿಷಯ ತಜ್ಞ  ವಾಮನಮೂತರ್ಿರವರ ಮಾರ್ಗದರ್ಶನದಲ್ಲಿ ಅಲ್ಪಾವಧಿ ಬೆಳೆಯಾದ ಕಲ್ಲಂಗಡಿ ಬೆಳೆಯನ್ನು ಡಿಸೆಂಬರ್ನಲ್ಲಿ 23ರಂದು ಖಾಸಗಿ ಕಂಪನಿಯ ಹೈಬ್ರಿಡ್ ತಳಿ ತಂದು ಬಿತ್ತನೆ ಮಾಡಿರುತ್ತಾರೆ. 

ನಾಟಿ ವಿಧಾನ: ಕೃಷಿ ಪದವೀಧರರಾದ ಅಶೋಕ, ನಾಟಿ ಮಾಡುವ ಮುಂಚೆ ಆರು ಅಡಿ ಅಂತರದಲ್ಲಿ ಏರು ಮಡಿ ಮಾಡಿ ನಂತರ ಹನಿಕೆಗಳನ್ನು ಎಳೆದು 2 ಅಡಿ ಅಂತರದಲ್ಲಿ ತ್ರಿಕೋನಾಕೃತಿಯಲ್ಲಿ ಬೀಜ ಬಿತ್ತನೆ ಮಾಡಿರುತ್ತಾರೆ. ಬಿತ್ತನೆ ಮೊದಲು ಬೀಜೋಪಚಾರ ಮಾಡಿ ಎಕರೆಗೆ 10 ಟನ್ ಕೊಟ್ಟಿಗೆ ಗೊಬ್ಬರದ ಜೊತೆಗೆ 5 ಕಿಲೊ ಟ್ರೈಕೋಗ್ರಾಮದಿಂದ ಉಪಚರಿಸಿ ಬಿತ್ತನೆ ಮಾಡಿರುತ್ತಾರೆ.

ಗೊಬ್ಬರ ಬಳಸುವ ವಿಧಾನ: ಬಿತ್ತನೆ ಮಾಡಿದ 15 ನೇ ದಿನದಿಂದ ಶಿಫಾರಸ್ಸಿನಂತೆ ನೀರಿನಲ್ಲಿ ಕರಗುವ ಗೊಬ್ಬರಗಳ ಜೊತೆಗೆ ಲಘು ಪೋಷಕಾಂಶಗಳನ್ನು ನೀಡಿರುತ್ತಾರೆ. ಇದಲ್ಲದೇ ಕ್ಯಾಲ್ಸಿಯಂ ನೈಟ್ರೈಟ್ ಉಪಯೋಗ ಮಾಡಿರುತ್ತಾರೆ. ತಜ್ಞರ ಸಲಹೆಯಂತೆ ಎಕರೆಗೆ 10 ಹಳದಿ ಅಂಟು ಕಾಡರ್ುಗಳು ಮತ್ತು ಮೋಹಕ ಬಲೆಗಳಲ್ಲದೇ ಸೌರಶಕ್ತಿ ಚಾಲಿತ ದೀಪಾಕರ್ಷಕ ಬಲೆಗಳನ್ನು ಬಳಸಿರುತ್ತಾರೆ. ವೈಜ್ಞಾನಿಕ ರೀತಿಯಲ್ಲಿ ಆರಂಭ ಹಂತದಿಂದಲೂ ಶಿಫಾರಿತ ಕೀಟನಾಶಕ ಮತ್ತು ಶಿಲೀಂಧ್ರನಾಶಕಗಳ ಜೊತೆಗೆ ಜೈವಿಕ ಗೊಬ್ಬರ ಹಾಗೂ ಜೈವಿಕ ಕೀಟ ನಾಶಕಗಳಾದ ಬೇವಿನ ಎಣ್ಣೆ ಬಳಸಿ ಸಸ್ಯ ಸಂರಕ್ಷಣೆ ಮಾಡಿರುತ್ತಾರೆ.

ನಿಖರ ಬೇಸಾಯ ಪದ್ದತಿಯ ಎಲ್ಲಾ ವಿಧಾನಗಳನ್ನು ವಿಜ್ಞಾನಿಗಳ, ತಜ್ಞರ ಸಲಹೆ ಪಡೆದು ತಮ್ಮ ಸ್ವಂತಿಕೆಯನ್ನು ಉಪಯೋಗಿಸಿ ಬೆಳೆದ ಕಲ್ಲಂಗಡಿ ಬೆಳೆ ಬಿತ್ತಿದ 63 ನೇ ದಿನಕ್ಕೆ ಕಟಾವಿಗೆ ಬಂದಿದೆ. ಮೊದಲೇ ಇವರ ಬೆಳೆ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ಮುಂಬೈ ನಗರದ ಖರೀದಿದಾರರು ರೂ. 9 ಪ್ರತಿ ಕೆ.ಜಿ.ಯಂತೆ ಮೊದಲ ಕಟಾವಿನ ಸುಮಾರು 30 ಟನ್ಗಳಷ್ಟು ಹಣ್ಣುಗಳನ್ನು ಖರೀದಿಸಿದ್ದಾರೆ. ಎಕರೆ ಒಂದಕ್ಕೆ ಇವರು ಮಾಡಿರುವ ಖಚರ್ು ರೂ. 30 ಸಾವಿರಗಳು ಹಾಗೂ ಇಳುವರಿ ಸರಾಸರಿ 20 ಟನ್. ಹೀಗೆ ಉತ್ತಮ ಇಳುವರಿ ಹಾಗೂ ಆದಾಯ ಪಡೆದ ಅಶೋಕ ಮೇಟಿ ರವರ ಸಾಧನೆ ಇತರರಿಗೂ ಸ್ಪೂತರ್ಿಯಾಗಿದೆ ಎಂದು ಕೊಪ್ಪಳ ತೋಟಗಾರಿಕೆ ಹಿರಿಯ ಸಹಾಯಕ ನಿದರ್ೇಶಕರಾದ ನಜೀರ್ ಅಹ್ಮದ್ ಹೇಳುತ್ತಾರೆ. 

``ಎರಡು ಸಾರಿ ಕಲ್ಲಂಗಡಿ ಬೆಳೆದು ಕೈ ಸುಟ್ಟುಕೊಂಡು ನಷ್ಟ ಅನುಭವಿಸಿದ ನನಗೆ ಇಲಾಖಾ ಅಧಿಕಾರಿಗಳು ಹಾಗೂ ಇತರೆ ತಜ್ಞರು ಮಾರ್ಗದರ್ಶನ ನೀಡಿ ಕಲ್ಲಂಗಡಿ ಬೆಳೆ ಉತ್ತಮವಾಗಿ ಇಳುವರಿ ಬರುವಂತೆ ಸಹಕರಿಸಿರುತ್ತಾರೆ. ಎಕರೆಗೆ 1.50 ಲಕ್ಷ ರೂ. ರಷ್ಟು ನಿವ್ವಳ ಆದಾಯ ಕೇವಲ 65 ದಿನಗಳಲ್ಲಿ ನನಗೆ ದೊರೆತಿರುವುದು ನನ್ನ ಆಥರ್ಿಕತೆಗೆ ಬೆಂಬಲವಾಗಿದೆ. ಈ ರೀತಿಯಾಗಿ ಛಲದಿಂದ ಸೋಲನ್ನೇ ಸವಾಲಾಗಿ ಸ್ವೀಕರಿಸಿ ನಾನು ಯಶಸ್ಸು ಹೊಂದಿದ್ದೇನೆ. ಇತರೆ ರೈತರು ಕೂಡಾ ಆತ್ಮಸ್ಥೈರ್ಯದಿಂದ ಕೃಷಿ ಮಾಡಬೇಕು ಮತ್ತು ಅಲ್ಪಾವಧಿ ಬೆಳೆಗಳನ್ನು ಬೆಳೆದು ನಿರಂತರ ಆದಾಯ  ಪಡೆಯಬೇಕು" ಎಂದು ಬೇರೆಯವರಿಗೆ ಸ್ಫೂತರ್ಿಯ ಮಾತುಗಳನ್ನು ಹೇಳುತ್ತಾರೆ ಅಶೋಕ ಮೇಟಿ.

ಹೆಚ್ಚಿನ ಮಾಹಿತಿಗಾಗಿ ಅಶೋಕ ಮೇಟಿ ಮೊ.ಸಂ: 9980553099 ಹಾಗೂ ವೆಂಕನಗೌಡ ಮೇಟಿ ಅವರ ಮೊ.ಸಂ: 9845509277ಗೆ ಸಂಪಕರ್ಿಸಿ ಕೃಷಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.