ಕುರುಗೋಡು ಉತ್ಸವ: ಶಿವಬಸವ ಆರತಿಯ ಮೂಲಕ ದೈವಿಕ ದರ್ಶನ
Kurugod Festival: Divine darshan through Shiva Basava Aarti
ಬಳ್ಳಾರಿ 16: ಕುರುಗೋಡು ಉತ್ಸವದ ಅಂಗವಾಗಿ ಆಯೋಜಿಸಿದ್ದ ಶಿವಬಸವ ಆರತಿ ಕಾರ್ಯಕ್ರಮವು ದೈವಿಕ ದರ್ಶನಕ್ಕೆ ಸಾಕ್ಷಿಯಾಯಿತು. ಐತಿಹಾಸಿಕ ಪಟ್ಟಣ ಕುರುಗೋಡಿನ ಆರಾಧ್ಯದೈವ ಶ್ರೀ ದೊಡ್ಡಬಸವೇಶ್ವರ ದೇವಸ್ಥಾನ ಸನ್ನಿಧಿ ಮುಂಭಾಗದ ದೊಡ್ಡಬಸವೇಶ್ವರ ವೇದಿಕೆಯಲ್ಲಿ ಉತ್ಸವದ ಮೊದಲ ದಿನವಾದ ಭಾನುವಾರ ವಾರಣಾಸಿಯ ಅರ್ಚಕರು ಗಂಗಾರತಿಯ ಮಾದರಿಯಲ್ಲಿ ಶಿವಬಸವ ಆರತಿ ನಡೆಸಿಕೊಟ್ಟರು.
ಅರ್ಚಕರು ಸಾಲಾಗಿ ನಿಂತು, ಮಂತ್ರಘೋಷಗಳ ನಡುವೆ ದೊಡ್ಡದಾದ ಕಂಚಿನ ದೀಪಗಳಿಂದ ಆರತಿ ಬೆಳಗಿದರು. ಮಂತ್ರಗಳ ಪಠಣ ಮತ್ತು ಶಂಖನಾದವು ಸಾರ್ವಜನಿಕರಲ್ಲಿ ಭಕ್ತಿಭಾವ ಮೂಡಿಸಿತು. ಆರತಿ ಕಾರ್ಯಕ್ರಮವು ದಾರ್ಶನಿಕ ಪಾವಿತ್ರ್ಯತೆಯನ್ನು ಮರುಕಳಿಸುವ ಕ್ಷಣಕ್ಕೆ ನಾಂದಿಯಾಯಿತು. ಇದೇ ವೇಳೆ ಮಹಾಶಿವರಾತ್ರಿಯಂದು ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತಗಣ ಹಾಗೂ ಅಪಾರ ಜನಸ್ತೋಮ ಶಿವಬಸವ ಆರತಿ ಕಂಡು ಪುನೀತರಾದರು. ಶಿವಬಸವ ಆರತಿ ಕಾರ್ಯಕ್ರಮಕ್ಕೆ ಭರತನಾಟ್ಯ ಕಲಾವಿದರ ಹೆಜ್ಜೆಯ ನಾದವು ಜೊತೆಯಾಗಿದ್ದು, ನೋಡುಗರಿಗೆ ರೋಮಾಂಚನ ಮೂಡಿಸಿತು. ಇದಕ್ಕೂ ಮುನ್ನ ಕಂಪ್ಲಿ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಹಕಾರ ಕೈಮಗ್ಗ ನೇಕಾರರ ಮಹಾಮಂಡಳಿ ನಿಯಮಿತ (ಕಾವೇರಿ ಹ್ಯಾಂಡ್ಲೂಮ್ಸ್) ದ ಅಧ್ಯಕ್ಷರೂ ಆಗಿರುವ ಜೆ.ಎನ್.ಗಣೇಶ್ ಅವರು ಉತ್ಸವದ ಮೂರ್ತಿ ಪರಮೇಶ್ವರನಿಗೆ ಪೂಜಾ ಧಾರ್ಮಿಕ ವಿಧಿ-ವಿಧಾನ ನೆರವೇರಿಸಿದರು. ಬಳಿಕ ಶ್ರೀ ದೊಡ್ಡ ಬಸವೇಶ್ವರ ದೇವಸ್ಥಾನದ ಆರತಿ ವೇದಿಕೆಯಲ್ಲಿ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ, ನಂತರ ಸಾಧಕರಿಗೆ ಹಾಗೂ ನೌಕರರಿಗೆ ಸನ್ಮಾನ ಕಾರ್ಯಕ್ರಮ ಜರುಗಿದವು.
ಈ ವೇಳೆ ಕುರುಗೋಡು ಪುರಸಭೆಯ ಅಧ್ಯಕ್ಷ ಟಿ.ಶೇಖಣ್ಣ, ಕುರುಗೋಡು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಸವನಗೌಡ, ತಹಶೀಲ್ದಾರ ನರಸಪ್ಪ, ತಾಪಂ ಇಓ ನಿರ್ಮಲಾ ಸೇರಿದಂತೆ ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿ- ಸಿಬ್ಬಂದಿ ಹಾಗೂ ಸಾರ್ವಜನಿಕರು ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 