ಆಗಷ್ಟ 3 ರಂದು ಕುರುಬ ಸಮಾಜದ ರಾಜ್ಯಮಟ್ಟದ ವಧು-ವರರ ಸಮಾವೇಶ : ರುದ್ರಣ್ಣ ಗುಳಗುಳಿ

ಆಗಷ್ಟ 3 ರಂದು ಕುರುಬ ಸಮಾಜದ ರಾಜ್ಯಮಟ್ಟದ ವಧು-ವರರ ಸಮಾವೇಶ : ರುದ್ರಣ್ಣ ಗುಳಗುಳಿ  Kuruba Samaj state level bride and groom convention on August 3: Rudranna Gulaguli

ಗದಗ  03: ಹಾಲುಮತ ಮಹಾಸಭಾ ಜಿಲ್ಲಾ ಘಟಕ ಹಾಗೂ ಪ್ರದೇಶ ಕುರುಬರ ಸಂಘ ಜಿಲ್ಲಾ ಘಟಕದ ಸಹಯೋಗದಲ್ಲಿ ಇದೇ  ಆಗಷ್ಟ 3 ರಂದು  ಬೆಳಿಗ್ಗೆ 10 ಗಂಟೆಗೆ ನಗರದ ಮುಳಗುಂದ ರಸ್ತೆಯಲ್ಲಿರುವ ಶ್ರೀ ಕನಕ ಭವನದಲ್ಲಿ ಹಾಲುಮತ (ಕುರುಬ) ಸಮಾಜದ 7 ನೇ ರಾಜ್ಯಮಟ್ಟದ ವಧು-ವರರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷರಾದ ರುದ್ರಣ್ಣ ಗುಳಗುಳಿ ಅವರು ಹೇಳಿದರು. 

ನಗರದ ಪತ್ರಿಕಾಭವನದಲ್ಲಿ ಗುರುವಾರ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಸಮಾವೇಶದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ಹಾಗೂ ಗದಗ ಜಿಲ್ಲೆಯ ಸುತ್ತಮುತ್ತಲಿನ ಪ್ರದೇಶಗಳಿಂದ ಸುಮಾರು 250 ಕ್ಕೂ ಹೆಚ್ಚು ವಧು-ವರರು ಆಗಮಿಸಲಿದ್ದಾರೆ. ಈ ಸಮಾವೇಶದಲ್ಲಿ ವಧು-ವರರಿಗೆ  ಹಾಲುಮತದ ಸಂಪ್ರದಾಯದಂತೆ ಉಡಿತುಂಬಿ ಪರಿಚಯಿಸಲಾಗುವದು. ಇದೇ ಸಂದರ್ಭದಲ್ಲಿ ಸಮಾಜದ ಐವರು ಹಿರಿಯರಿಗೆ ಜೀವಮಾನ ಸಾಧನೆಗಾಗಿ ಸನ್ಮಾನಿಸಲಾಗುವುದು ಎಂದು ಹೇಳಿದರು.  

ಈ ಸಮಾವೇಶದಲ್ಲಿ ಬೇರೆ ಬೇರೆ ಊರುಗಳಿಂದ ವಧು-ವರರು ಆಗಮಿಸುವದರಿಂದ ಪಾಲಕರು ತಮ್ಮ ಮಕ್ಕಳಿಗೆ ಒಂದೇ ವೇದಿಕೆಯಲ್ಲಿ ಹಲವಾರು ಆಯ್ಕೆಗಳಿಗಾಗಿ ಇಲ್ಲಿ ಅವಕಾಶ ಕಲ್ಪಿಸಲಾಗುತ್ತದೆ. ಪಾಲಕರಿಗೆ ಸಮಯದ ಉಳಿತಾಯ ಹಾಗೂ ಸೂಕ್ತ ವಧು-ವರರನ್ನು ಆಯ್ಕೆ ಮಾಡುವ ಸದವಕಾಶವನ್ನು ಇಲ್ಲಿ ನಿರ್ಮಿಸಲಾಗುತ್ತದೆ. ಈಗಾಗಲೇ ಹೆಸರು ನೋಂದಾಯಿಸುವ ಕಾರ್ಯ ಆರಂಭವಾಗಿದ್ದು. ಆಸಕ್ತರು ಶ್ರೀ ದುರ್ಗಾದೇವಿ ಶಿಕ್ಷಣ ಸಮಿತಿ ಶ್ರೀ ಬನಶಂಕರಿ ದೇವಿ ದೇವಸ್ಥಾನದ ಆವರಣ ಗಂಗಾಪುರ ಪೇಟೆ ಗದಗದಲ್ಲಿ ಸದಸ್ಯತ್ವ ಶುಲ್ಕದೊಂದಿಗೆ ಹೆಸರನ್ನು ನೋಂದಾಯಿಸಬೇಕು. ನೋಂದಣಿಗಾಗಿ  ವೆಂಕಟೇಶ  ಇಮರಾಪೂರ ಮೋ.ಸಂ. 9742842133, ಮುತ್ತು ಜಡಿ 9880831983 ಅವರನ್ನು ಹಾಗೂ ಹೆಚ್ಚಿನ ಮಾಹಿತಿಗಾಗಿ ನಾಗರಾಜ ಮೆಣಸಗಿ ಮೋ.ಸಂ 9448746400, ಬಸವರಾಜ ನೀಲಗಾರ-8970974959, ಸೋಮನಗೌಡ ಪಾಟೀಲ-9845636775 ಅವರನ್ನು ಸಂಪರ್ಕಿಸಬಹುದು ಎಂದು ಹೇಳಿದರು.  

ಈ ಸುದ್ದಿಗೋಷ್ಠಿಯಲ್ಲಿ   ಪ್ರದೇಶ ಕುರುಬ ಸಂಘದ ಗದಗ ತಾಲ್ಲೂಕಾ ಅಧ್ಯಕ್ಷ ನಾಗಪ್ಪ ಗುಗ್ಗರಿ, ಹಾಲುಮತ ಮಹಾಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿ  ಉಮಾ ದ್ಯಾವನೂರ, ಕುರುಬರ ಸಂಘದ ರಾಜ್ಯ ನಿರ್ದೇಶಕಿ ಚನ್ನಮ್ಮ ಹುಳಕಣ್ಣವರ, ಹಾಲುಮತ ಮಹಾಸಭಾದ  ಜಿಲ್ಲಾ ಗೌರವಾಧ್ಯಕ್ಷ ನಾಗರಾಜ ಮೆಣಸಗಿ, ಜಿಲ್ಲಾಧ್ಯಕ್ಷ ಬಸವರಾಜ ನೀಲಗಾರ, ಉಪಾಧ್ಯಕ್ಷ ಸೋಮನಗೌಡ ಪಾಟೀಲ, ರಾಘು ವಗ್ಗನವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುತ್ತು ಜಡಿ, ಮುತ್ತು ಜಡಿ,  ಸತೀಶ ಗಿಡ್ಡಹನಮಣ್ಣವರ, ಮಂಜುನಾಥ ಜಡಿ  

ಹೇಮಂತ ಗಿಡ್ಡಹನಮಣ್ಣವರ, ಉಮೇಶ ಪೂಜಾರ,ಬಸವರಾಜ ಕುರಿ  

ಕುಮಾರ ಮಾರನಬಸರಿ, ರವಿ ವಗ್ಗನವರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.