ವಿಜೃಂಭಣೆಯಿಂದ ಕುರಣಿವಾಡಿ ಜಾತ್ರೆ

ವಿಜೃಂಭಣೆಯಿಂದ ಕುರಣಿವಾಡಿ ಜಾತ್ರೆ  Kuraniwadi fair celebrated with grandeur

ಲೋಕದರ್ಶನ ವರದಿ 

ಯಮಕನಮರಡಿ 24: ಸಮೀಪದ ಕುರಣಿವಾಡಿ ಗ್ರಾಮದ 5 ದೇವಸ್ಥಾನಗಳ ಜಾತ್ರೆಯು 5 ದಿನಗಳವರೆಗೆ ವಿಜೃಂಭಣೆಯಿಂದ ಜರುಗಿ ದಿ. 24ರಂದು ಮುಕ್ತಾಯಗೊಂಡಿದ್ದು ಅಂದಿನ ಕಾರ್ಯಕ್ರಮದ ಸಾನಿಧ್ಯವನ್ನು ಯಮಕನಮರಡಿ ಶೂನ್ಯ ಸಂಪಾದನಾ ಹುಣಸಿಕೊಳ್ಳ ಮಠದ ಉತ್ತರಾಧಿಕಾರಿ ಸಿದ್ದಬಸವ ದೇವರು ದಿವ್ಯಸಾನಿದ್ಯ ವಹಿಸಿ ಆಶೀರ್ವಚನ ನೀಡಿದರು.  ಮಾಜಿ ಸಂಸದ ರಮೇಶ ಕತ್ತಿ ಅವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತ್ತಾ ಮಕ್ಕಳಿಗೆ ಸಂಸ್ಕಾರ ನೀಡಿ ಅವರ ಕೈಯಲ್ಲಿ ಮೊಬೈಲನ್ನು ಕೊಡಬೇಡಿ. ಅವರಿಗೆ ಲಿಂಗದೀಕ್ಷೆ ಕೊಡಿಸಿ ಲಿಂಗಪೂಜೆ ಮಾಡುವುದನ್ನು ಕಲಿಸಿಕೊಡಿ ಮಕ್ಕಳು ಮೋಬೈಲ ಬಳಕೆಯಿಂದ ಹೆತ್ತವರನ್ನು ಮರೆತು ದಾರಿ ತಪ್ಪುತ್ತಿದ್ದಾರೆ ಎಂದು ಹೇಳಿದರು. 

ರೈತ ಸಂಘದ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ತಾಲೂಕಾ ರೈತ ಸಂಘದ ಅಧ್ಯಕ್ಷ ಸಂಜು ಹಾವನ್ನವರ ಕೆಇಬಿ ನಿರ್ದೇಶಕ ಪ್ರವೀಣ ನಿಲಜಗಿ ಬಿಜೆಪಿ ಮುಖಂಡ ಮಾರುತಿ ಅಷ್ಟಗಿ ನಿರ್ವಾಣಿ, ಜೋಶಿ ಆನಂದ ಖೋತ ಮಹಾದೇವ ಬಡಿಗೇರ ಸೇರಿದಂತೆ ಗ್ರಾಮದ ಹಿರಿಯರು ಅಪಾರ ಭಕ್ತಾದಿಗಳು ಸೇರಿದಂತೆ 5 ದಿನಗಳವರೆಗೆ ಜರುಗಿದ ಬ್ರಹ್ಮದೇವ ಮಲ್ಲಿಕಾರ್ಜುನ, ಮಹಾಲಕ್ಷೀ ಸೇರಿದಂತೆ ನೂತನ ಹನುಮಾನ ಮೂರ್ತಿ ಪ್ರತಿಷ್ಟಾಪನೆ ಸಮಾರಂಭವನ್ನು ಯಶಸ್ವಿಗೊಳಿಸಿದರು.  5 ದಿನಗಳ ಕಾಲ ಮಹಾಪ್ರಸಾದ ಮನರಂಜನೆ ಭಜನಾ ಕಾರ್ಯಕ್ರಮಗಳು ಹಾಗೂ ದಾನಿಗಳಿಗೆ ಸನ್ಮಾನ ಸಮಾರಂಭಗಳು ಯಶಸ್ವಿಯಾಗಿ ಜರುಗಿದವು.