ಹಣದ ದುರುಪಯೋಗ ತನಿಖೆಗೆ ಕುಂದಾಪುರ ಒತ್ತಾಯ

ರಾಣೇಬೆನ್ನೂರು.11:  ಸ್ಥಳಿಯ ಮಹಿಷಾಸುರಾ ಮಧರ್ಿನಿ ಹರ್ಬನ್ ಕೋಆಪರೆಟ್ ಕ್ರೆಡಿಟ್ ಸೊಸೈಟಿಯಲ್ಲಿ ನಡೆದಿದೆ ಎನ್ನಲಾದ ಕಾನೂನು ಬಾಹೀರ, ಅಧಿಕಾರ ದುರುಪಯೋಗ, ಲಕ್ಫ್ಷಂತರ ರೂ ಭಷ್ಟಾಚಾರ ಹಣ ದುರುಪಯೋಗ ಸ್ಭೆರಿದಂತೆ ಮತ್ತಿತರ ಅನ್ಯಾಯಗಳು ನಡೆದ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿಸ್ಥರನ್ನು ಶಿಕ್ಷಿಸಿ ಸಂಸ್ಥೆಯನ್ನು ರಕ್ಷಿಸುವುದರ ಜೊತೆಗೆ ಎಲ್ಲಾ ಶೇರುದಾರರನ್ನು ಸಚಿರಕ್ಷಿಸಬೇಕೆಂದು ಸೊಸೈಟಿಯ ನಿದೇರ್ಶಕ ಪ್ರಕಾಶ ತಿಮ್ಮಪ್ಪ ಕುಂದಾಪುರ ಒತ್ತಾಯಿಸಿದರು. 

ಮಂಗಳವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. 2001 ರಿಂದ ಆರಂಭವಾಗಿರುವ ಈ ಸಂಸ್ಥೆಯ ಬಗ್ಗೆ ಈಗಾಗಲೇ ಜಿಲ್ಲಾ ಸಹಕಾರಿ ಸಂಘಗಗಳ ಉಪನಿಬಂಧಕರು ಹಾಗೂ ಬೆಳಗಾವಿಯ ಸಹಕಾರಿ ಸಂಘಗಳ ಸಂಯುಕ್ತ ನಿಭಂಧಕರು ಮತ್ತು ಹಾವೇರಿ ಉಪವಿಭಾಗದ ಸಹಾಯಕ ಸಂಘಗಳ ಅಧಿಕಾರಿಗಳು ಸಂಘಕ್ಕೆ ಕಳೆದ 3 ವರ್ಷಗಳ ಹಿಂದೆ ಭೇಟಿ ನೀಡಿ ಇಲ್ಲಿ ನಡೆಯುತ್ತಿದೆ ಎನ್ನಲಾದ ಹಣ ದುರುಪಯೋಗ ಪ್ರಕರಣದ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡಿದ್ದಾರೆ.

 ಈ ಹಿನ್ನಲೆಯಲ್ಲಿ 2017 ರ ಜುಲೈ 14 ರಂದು ಆಡಳಿತ ಮಂಡಳಿಯನ್ನು ಅನರ್ಹಗೊಳಿಸಿದ್ದಾರೆ. ನಂತರ ರಾಜಕೀಯ ಒತ್ತಡದಿಂದ ಮತ್ತೆ ದುರಾಡಳಿತ ನಡೆಸುತ್ತಿರುವುದು ವಿಷಾಧನೀಯ ಎಂದರು. 

ಸಂಘಗಳ ಕಾಯಿದೆ ಪ್ರಕಾರ ಸಂಘಗಳ ಕಾರ್ಯವ್ಯಾಪ್ತಿಯು ರಾಣಿಬೆನ್ನೂರು ನಗರಕ್ಕೆ ಮಾತ್ರ ಸೀಮಿತವಾಗಿದ್ದು, ಆದರೆ ಈಗಿರುವ ಆಡಳಿತ ಮಂಡಳಿಯವರು ಬೇಜವ್ದಾರಿಯಿಂದ ಮತ್ತು ಕಾನೂನು ಬಾಹೀರವಾಗಿ ಹಾವೇರಿ, ದಾವಣಗೇರೆ, ಶಿವಮೊಗ್ಗ, ಕುಂದಾಪುರ, ಉಡುಪಿಯ ನಿವಾಸಿಗಳನ್ನು ಶೇರುದಾರನ್ನಾಗಿ ಮಾಡಿಕೊಂಡು ಸಾಲ ನೀಡಿದ್ದು, ಈವರೆಗೂ ಸಹ ಸಾಲ ಮರುಪಾವತಿ ಆಗಿಲ್ಲ. ವಾಹನ ಹಾಗೂ ಆಸ್ತಿ ಮೇಲೆ ಕೊಟ್ಟ ಸಾಲಗಳ ಕಾಗದಪತ್ರಗಳೇ ಸಂಘದಲ್ಲಿ ಮಾಯವಾಗಿದ್ದು, ಬಹಳಷ್ಟು ಭ್ರಷ್ಟಾಚಾರ ನಡೆದಿದೆ ಎಂದು ಅಂಕಿಅಂಶಗಳ ಸಮೇತ ಗೊತ್ತಾಗಿದೆ ಎಂದರು. 

ಸೊಸ್ಶೆಟಿಯ ಹಿಂದಿನ ಕಾರ್ಯದಶರ್ಿಯವರು ಸಂಘದಲ್ಲಿನ ಅಚಿದಾಜು 38,13,149 ರೂಪಾಯಿಗಳ ಹಣ ದುರುಪಯೋಗ ಪಡಿಸಿಕೊಂಡಿದ್ದು ಸಾಬೀತಾಗಿದೆ ಈ ಬಗ್ಗೆ ಜಿಲ್ಲಾ ಸಹಕಾರಿ ಸಂಘಗಳ ಉಪನಿಬಂಧಕರು ಆಡಳಿತ ಮಂಡಳಿಗೆ ಲಿಖಿತ ರೂಪದಲ್ಲಿ ಪತ್ರ ಬರೆದಿದ್ದು, ಈಕ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಆಡಳಿತ ಮಂಡಳಿಯವರು ಹಿಂದೇಟು ಹಾಕುತ್ತಿದ್ದಾರೆ. ಈಗಾಗಲೇ ಕಾರ್ಯದಶರ್ಿಯು ಆ ಎಲ್ಲಾ 38,13,149 ರೂಗಳನ್ನು ನಾನೇ ದುರುಪೋಗ ಪಡಿಸಿಕೊಂಡಿರುವುದಾಗಿ ಆಡಳಿತ ಮಂಡಳಿಗೆ ಲಿಖಿತ ರೂಪದಲ್ಲಿ ಬರೆದುಕೊಟ್ಟಿದ್ದಾರೆ. ಆದರೂ ಸಹ ಆ ಕಾರ್ಯದಶರ್ಿಯ ಬಗ್ಗೆ ಈ ವರೆಗೂ ಏನೂ ಸಹ ಕ್ರಮ ಜರುಗಿಸದಿರುವುದು ನೋವಿನ ಸಂಗತಿಯಾಗಿದೆ ಎಂದರು. 

ಸೊಸ್ಶೆಟಿಯಲ್ಲಿ ಆಗಿರುವ ಎಲ್ಲಾ ರೀತಿಯ ಅವ್ಯವಹಾರ, ಭ್ರಷ್ಟಾಚಾರ ಮತ್ತಿತರ ಕಾನೂನು ಬಾಹೀರ ಕ್ರಮಗಳ ಬಗ್ಗೆ ಸರಕಾರವು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷಿಸಲು ಮುಂದಾಗಬೇಕೆಂದು ಆಗ್ರಹಿಸಿ ಶೀಘ್ರವೇ ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳುವುದಾಗಿ ಕುಂದಾಪುರ ಅವರು ವಿವರಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ಸೊಸೈಟಿಯ ನಿದರ್ೇಶಕರಾದ ಗೋಪಾಲ ಎನ್ ಕುಂದಾಪುರ, ಸದಾನಂದ ಜೀ ಕುಂದಾಪುರ ಮತ್ತಿತರರು ಇದ್ದರು