ಕಾಳಿಕಾ ಮಂದಿರದಲ್ಲಿ ಜರುಗಿದ ಕುಂಕುಮಾರ್ಚನೆ ಹಾಗೂ ಲಲಿತಾಸಹಸ್ರನಾಮ ಪಠಣ
Kumkummarchana and recitation of Lalitasahasranama held at Kalika Mandir
ಲೋಕದರ್ಶನ ವರದಿ
ಬೆಳಗಾವಿ 09: ಕಾಳಿಕಾ ದೇವಸ್ಥಾನ, ಗಣೇಶಪೂರ ಗಲ್ಲಿ, ಶಹಾಪೂರ, ಬೆಳಗಾವಿಯಲ್ಲಿ ರವಿವಾರ, ದಿನಾಂಕ 07ರಂದು ವೇದಮೂರ್ತಿ ಬ್ರಹ್ಮರ್ಷಿ ರವೀಂದ್ರಾಚಾರ್ಯ ಹಾಗೂ ಬ್ರಹ್ಮವಾದೀನೀ ಕುಮಾರಿ ಭುವನೇಶ್ವರಿ ರವೀಂದ್ರಾಚಾರ್ಯ ಇವರ ಪೌರೋಹಿತ್ಯದಲ್ಲಿ ಕುಂಕುಮಾರ್ಚನೆ ಹಾಗೂ ಶ್ರೀ ಲಲಿತಾಸಹಸ್ರನಾಮ ಪಠಣ ಕಾರ್ಯಕ್ರಮವನ್ನು ಶ್ರೀ ಕಾಳಿಕಾ ದೇವಸ್ಥಾನ ವಿಶ್ವಸ್ಥ ಮಹಿಳಾ ಮಂಡಳ ವತಿಯಿಂದ ಗೀತಾ ಸುತಾರ, ಪೂರ್ಣಿಮಾ ಪತ್ತಾರ, ರಾಜಶ್ರೀ ಬಡಿಗೇರ, ಕಮಲಾ ಕಟ್ಟಿ, ಶಾಂತಾ ಸುತಾರ, ಅರುಣಾ ಕಡಕೋಳ, ಜಯಶ್ರೀ ಕಮ್ಮಾರ, ಕವಿತಾ ಪತ್ತಾರ, ಅನ್ನಪೂರ್ಣ ಪತ್ತಾರ, ಮಂಜುಳಾ ಸಾಲಿ, ನಿರ್ಮಲಾ ಸುತಾರ, ಕವಿತಾ ಪೋತದಾರ, ಸುನಿತಾ ಪೋತದಾರ, ಪೂಜಾ ಶಿರಸಂಗಿ, ಇವರ ನೇತ್ರತ್ವದಲ್ಲಿ ಅತೀ ವಿಜೃಂಬಣೆಯಿಂದ ಆಚರಿಸಲಾಯಿತು, ಈ ಕುಂಕುಮಾರ್ಚನೆ ಕಾರ್ಯಕ್ರಮದಲ್ಲಿ ನೂರಾರು ಸುಮಂಗಲೆಯರು ಭಕ್ತಿಭಾವದಿಂದ ಪಾಲ್ಗೊಂಡು ಕುಂಕುಮಾರ್ಚನೆ ಹಾಗೂ ಶ್ರೀಲಲಿತಾಸಹಸ್ರನಾಮ ಪಠಿಸಿ ಶ್ರೀ ಕಾಳಿಕಾದೇವಿ ಕೃಪೆಗೆ ಪಾತ್ರರಾದರು. ನಂತರ ನೆರೆದಂತಹ ಎಲ್ಲ ಭಕ್ತರಿಗೂ ಮಹಾಪ್ರಸಾದದ ವ್ಯವಸ್ಥೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ದೇವಸ್ಥಾನದ ಅಧ್ಯಕ್ಷರಾದ ಜನಾರ್ಧನ ಬಡಿಗೇರ ಹಾಗೂ ಮಂಡಳದ ಎಲ್ಲ ಸದಸ್ಯರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 