ಮಾ.27 ರಂದು ಕುಮಾರ ಸ್ವಾಮೀಜಿ ಆಸ್ಟ್ರೇಲಿಯಾ ಪ್ರಯಾಣ

ಮಾ.27 ರಂದು ಕುಮಾರ ಸ್ವಾಮೀಜಿ ಆಸ್ಟ್ರೇಲಿಯಾ ಪ್ರಯಾಣ Kumaraswamyji to travel to Australia on March 27

ರಾಯಬಾಗ 20 :  ಸಾಂಸ್ಕೃತಿಕ ವಿದ್ಯಾಭ್ಯಾಸ ಪರೀವೀಕ್ಷಣೆ ಮಾಡಲು ಮಾ.27 ರಂದು ಆಸ್ಟ್ರೇಲಿಯಾ ದೇಶಕ್ಕೆ ಪ್ರಯಾಣ ಮಾಡಲಿರುವ ಪ್ರಯುಕ್ತ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಕಲಿವಾಳ ಗ್ರಾಮದ ಸಿದ್ಧಾರೂಢ ಮಠದ ಪೀಠಾಧಿಪತಿ ಕುಮಾರ ಸ್ವಾಮೀಜಿಯವರನ್ನು ಗುರುವಾರ ತಾಲೂಕಿನ ಹಿಡಕಲ ಗ್ರಾಮದಲ್ಲಿ ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ತ್‌ ರಾಯಬಾಗ ತಾಲೂಕಾಧ್ಯಕ್ಷ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತ್‌ ಗೌರವ ಕಾರ್ಯದರ್ಶಿ, ಸಾಹಿತಿ ಟಿ.ಎಸ್‌.ವಂಟಗೂಡಿ ಅವರು ಸತ್ಕರಿಸಿದರು. ರಾಮು ವಂಟಗೂಡಿ, ಅಮಿತ ಪೂಜೇರಿ, ಜಡಿಸಿದ್ದ ವಂಟಗೂಡಿ, ಹಾಲಸಿದ್ಧ ವಂಟಗೂಡಿ ಇದ್ದರು.