ವೀರೇಶ್ವರ ಪುಣ್ಯಾಶ್ರಮದಲ್ಲಿ ಕುಮಾರಶ್ರೀ ಪ್ರಶಸ್ತಿ ಪ್ರದಾನ

ವೀರೇಶ್ವರ ಪುಣ್ಯಾಶ್ರಮದಲ್ಲಿ ಕುಮಾರಶ್ರೀ ಪ್ರಶಸ್ತಿ ಪ್ರದಾನ  Kumarashri Award presentation at Veereshwara Punyashrama

ಗದಗ 5: ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಪಂಚಾಕ್ಷರಿ ಗವಾಯಿಗಳ 82ನೇ ಹಾಗೂ ಪಂ. ಪುಟ್ಟರಾಜ ಗವಾಯಿಗಳ 16ನೇ ಪುಣ್ಯಸ್ಮರಣೋತ್ಸವ ಮತ್ತು ಉಭಯ ಗುರುಗಳ ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳ ಸಾಧಕರಿಗೆ ‘ಕುಮಾರಶ್ರೀ ಪ್ರಶಸ್ತಿ’ ಪ್ರದಾನ ಮಾಡಲಾಯಿತು.  ಕಾರ್ಯಕ್ರಮದಲ್ಲಿ ಚೆನ್ನೈನ ಶಹನಾಯಿ ವಾದಕ ಪದ್ಮಶ್ರೀ ಪಂ. ಡಾ. ಎಸ್‌. ಬಾಲೇಶ್ ಭಜಂತ್ರಿ, ಪ್ರವಚನ ಕ್ಷೇತ್ರದಲ್ಲಿ ಸಾಧನೆಗೈದ ಡೋಣಿ ಶಶಿಧರಶಾಸ್ತ್ರಿ ಹಿರೇಮಠ ಹಾಗೂ ತಬಲಾ ವಾದಕ ಹೊನ್ನಿಗನೂರಿನ ಬಸವರಾಜ ಅಮರಗೋಳ ಅವರನ್ನು ಕುಮಾರಶ್ರೀ ಪ್ರಶಸ್ತಿಯಿಂದ ಗೌರವಿಸಲಾಯಿತು.  

ಈ ಸಂದರ್ಭದಲ್ಲಿ ಗದುಗಿನ ತೋಂಟದಾರ್ಯ ಮಠದ ಡಾ. ಸಿದ್ದರಾಮ ಮಹಾಸ್ವಾಮಿಗಳು, ಗುಳೇದಗುಡ್ಡ ಮುರುಘಾಮಠದ ಪೂಜ್ಯ ಶ್ರೀ ಕಾಶೀನಾಥ ಮಹಾಸ್ವಾಮಿಗಳು, ಅಡೂರು ಬ್ರಹನ್ಮಠದ ಪೂಜ್ಯ ಶ್ರೀ ಅಭಿನವ ಪಂಚಾಕ್ಷರಿ ಶಿವಾಚಾರ್ಯ ಮಹಾಸ್ವಾಮಿಗಳು, ಮೈಸೂರಿನ ಕುಂದೂರು ಮಠದ ಪೂಜ್ಯ ಶ್ರೀ ಡಾ. ಶರತ್ಚಂದ್ರ ಸ್ವಾಮೀಜಿ, ಮೈಸೂರಿನ ಅರಮನೆ ಪಂಚಗವಿಮಠದ ಪೂಜ್ಯ ಶ್ರೀ ಶ್ರೀಕಂಠ ಸ್ವಾಮೀಜಿ, ನಿದಿ್ಧ್ಘಿಹಿ್ಪೈದಿ್ಧ್ಘ್ತಿೂ ಪೂಜ್ಯ ಶ್ರೀ ಕುಮಾರ ದೇವರು, ಅಡವೀಂದ್ರಮಠದ ಮಹೇಶ್ವರ ಸ್ವಾಮೀಜಿ, ವಿಧಾನಪರಿಷತ್ ಸದಸ್ಯ ಎಸ್‌.ವಿ. ಸಂಕನೂರು, ವೀರೇಶ್ವರ ಪುಣ್ಯಾಶ್ರಮ ಟ್ರಸ್ಟ್‌ ಅಧ್ಯಕ್ಷ ನಿಂಗಪ್ಪ ಕೆಂಗಾರ, ಟ್ರಸ್ಟ್‌ ಸದಸ್ಯ ಪರಶುರಾಮ ಕಟ್ಟಿಮನಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.  ಇದೇ ವೇಳೆ ಸಾರಿಗೆ ಇಲಾಖೆಯ ಅಧಿಕಾರಿಗಳಾದ ವಿಶಾಲ ಪವಾರ, ಅರುಣ ಕಟ್ಟಿಮನಿ, ಮಂಜುನಾಥ ಎಸ್‌.ಪಿ., ಧಾರವಾಡದ ರಮೇಶ್ ಬಸ್ಮಿ, ಮುರಳೀಧರ ದೇಶಪಾಂಡೆ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.