ಕುಡತಿನಿ: ಮುಂಗಡ ಆಯ-ವ್ಯಯ ವರದಿ ಸಿದ್ಧತಾ ಸಭೆ
Kudathini: Advance Budget Report Preparation Meeting
ಬಳ್ಳಾರಿ 17: ಕುಡತಿನಿ ಪಟ್ಟಣ ಪಂಚಾಯಿತಿಯ 2026-27ನೇ ಸಾಲಿನ ಮುಂಗಡ ಆಯ-ವ್ಯಯ ವರದಿ ಸಿದ್ಧತೆ ಅಂಗವಾಗಿ ಶುಕ್ರವಾರ ಆಡಳಿತಾಧಿಕಾರಿ ಅಧ್ಯಕ್ಷತೆಯಲ್ಲಿ ಪಟ್ಟಣ ಪಂಚಾಯಿತಿಯ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಸ್ವೀಕಾರಗೊಂಡ ಸಲಹೆ-ಸೂಚನೆ:
ಕುಡತಿನಿ ಪಟ್ಟಣದ 02 ನೇ ವಾರ್ಡ್‌ನಲ್ಲಿ ಚರ್ಚ್ ಹತ್ತಿರ ಉಳಿಕೆ ರಸ್ತೆ ಕಾಮಗಾರಿಯನ್ನು ಅಳವಡಿಸಿ ಪೂರ್ಣಗೊಳಿಸುವುದು. 02 ನೇ ವಾರ್ಡಿನಲ್ಲಿ ಈಗಾಗಲೇ ಮುಕ್ತಾಯವಾದ ರಸ್ತೆ ಕಾಮಗಾರಿ ಅಕ್ಕ ಪಕ್ಕ ಗ್ರಾವೆಲ್ ಹಾಕುವುದು. ಕೆರೆ ಹತ್ತಿರ 1 ಲಕ್ಷ ಲೀಟರ್ ಸಾಮರ್ಥ್ಯವುಳ್ಳ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ ಮಾಡುವುದು. ಕನ್ನಡ ಉಳಿವಿಗಾಗಿ ಕರ್ನಾಟಕ ರಕ್ಷಣಾ ವೇದಿಕೆಗೆ ವಸತಿ ಕಲ್ಪಿಸಲು ಸೂಚಿಸಲಾಯಿತು.
09 ನೇ ವಾರ್ಡಿನಲ್ಲಿ ದುರಸ್ಥಿಯಲ್ಲಿದ್ದ ರಸ್ತೆಯನ್ನು ಅಗೆದು ಪೇವರ್ಸ ಹಾಕಲು ಕ್ರಮವಹಿಸುವುದು. ರಾಜ ಕಾಲುವೆಯಲ್ಲಿನ ಶೀಲ್ಟ್ ತೆಗೆಯಲು ಕ್ರಮವಹಿಸುವುದು. 18ನೇ ವಾರ್ಡಿನಲ್ಲಿ ಚಲುವಾದಿ ಕೇರಿಯಲ್ಲಿ ಜನಾಂಗದವರು ಕಾಯ್ದಿರಿಸಿದ 100*100 ಸ್ಥಳದಲ್ಲಿ ಗ್ರಂಥಾಲಯ ಅಥವಾ ಭವನ ನಿರ್ಮಾಣ ಮಾಡಲು ಸೂಚಿಸಿದರು.
ಬಳಿಕ ಸಭೆಯಲ್ಲಿ ಪಟ್ಟಣ ಪಂಚಾಯಿತಿಯ ನಿಕಟಪೂರ್ವ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಕುಡತಿನಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಪಟ್ಟಣದ ಹಿರಿಯ ನಾಗರಿಕರು, ಪಟ್ಟಣದ ಮುಖಂಡರು ಭಾಗವಹಿಸಿ ತಮ್ಮ ಅಮೂಲ್ಯ ಸಲಹೆಗಳನ್ನು ನೀಡಿದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 