ಕ್ಷಯಮುಕ್ತ ಭಾರತ ಮೋದಿಯವರ ಸಂಕಲ್ಪ : ಡಾ ಸತೀಶ

Kshayamukta Modi's resolution: Dr Satish

ಕ್ಷಯಮುಕ್ತ ಭಾರತ ಮೋದಿಯವರ ಸಂಕಲ್ಪ : ಡಾ ಸತೀಶ  

ಶಿಗ್ಗಾವಿ 17 : ಪಟ್ಟಣದ ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯದಲ್ಲಿ ಕ್ಷಯ ರೋಗಿಗಳ ಮನೆಯ ಸಂಪರ್ಕಿತರಿಗೆ ಸಿ.ವಾಯ್‌. ಕ್ಷಯರೋಗ ಪರೀಕ್ಷೆಯ ಅಂದೋಲನಕ್ಕೆ ತಾಲೂಕ ಆರೋಗ್ಯ ಅಧಿಕಾರಿ ಡಾ. ಸತೀಶ ಚಾಲನೆ ನೀಡಿದರು.   ನಂತರ ಮಾತನಾಡಿದ ಅವರು ಕ್ಷಯಮುಕ್ತ ಭಾರತ ಮಾಡಲು ಪ್ರಧಾನಿ ಮೋದಿಯವರು ಸಂಕಲ್ಪ ಮಾಡಿರುವ ಕಾರಣ ಕ್ಷಯರೋಗಿಗಳ ಜೊತೆಗೆ ಅವರ ಕುಟುಂಬದ ಸದಸ್ಯರು ಸಹಿತ ಕ್ಷಯರೋಗ ಮುಕ್ತವಾಗಿರಲಿ ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಪ್ರಾರಂಭವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಆಡಳಿತ ವೈದ್ಯಾಧಿಕಾರಿ ಡಾ. ವಿಜಯಾ ಪಾಟೀಲ ಹಾಗೂ ತಾಲೂಕಾ ಆರೋಗ್ಯ ಅಧಿಕಾರಿಗಳ ಕಛೇರಿಯ ಸಿಬ್ಬಂದಿಗಳಾದ ಅಶೋಕ ಅಮಾತ್ಯಣ್ಣವರ, ಶಂಕರ ಕೋರಿಶೆಟ್ಟರ, ಗುರು ಹಾಗಲೂರ ಹಾಗೂ ಸಮುದಾಯ ಆರೋಗ್ಯ ಅಧಿಕಾರಿಗಳಾದ ಸುಮಾ, ಸಂತೋಷ, ಶೃತಿ ಸೇರಿದಂತೆ ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿಗಳು, ಆಶಾ ಕಾರ್ಯಕರ್ತರು ಸೇರಿದಂತೆ ರೋಗಿ ನಿರೋಗಿಗಳು ಉಪಸ್ಥಿತರಿದ್ದರು.