ಎರಡನೇಯ ಹೆಚ್ಚುವರಿ ದಿವಾನಿ ನ್ಯಾಯಾಲಯಕ್ಕೆ ಕೃಷ್ಣಪ್ಪ ಪಮ್ಮಾರ ನೂತನ ನೇಮಕಗೋಡ
ಯರಗಟ್ಟಿ, 02; ಪಟ್ಟಣದ ಎರಡನೇಯ ಹೆಚ್ಚುವರಿ ದಿವಾನಿ ನ್ಯಾಯಾಲಯಕ್ಕೆ ನೂತನವಾಗಿ ನೇಮಕಗೋಡ ಗೌರವಾನ್ವಿತ ನ್ಯಾಯಾಧೀಶರಾದ ಕೃಷ್ಣಪ್ಪ ಪಮ್ಮಾರ ಅವರು ಬುಧವಾರ ಯರಗಟ್ಟಿ ಸಂಚಾರಿ ನ್ಯಾಯಾಲಯದ ನ್ಯಾಯಾಧೀಶರಾಗಿ ಅಧಿಕಾರ ವಹಿಸಿಕೊಂಡರು. ಈ ವೇಳೆ ಯರಗಟ್ಟಿ ನ್ಯಾಯಾಲಯದ ನ್ಯಾಯವಾದಿಗಳ ಸಂಘದಿಂದ ಸ್ವಾಗತಿಸಿದರು.ಈ ಸಂದರ್ಭದಲ್ಲಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್. ಆರ್. ರೆಬ್ಬನ್ನವರ, ಉಪಾಧ್ಯಕ್ಷ ವಿ. ಜಿ. ಬಿರಾದಾರ ಪಾಟೀಲ, ಖಜಾಂಚಿ ಆರ್. ಎಸ್. ಆಲದಕಟ್ಟಿ, ಎಂ. ಎಂ. ಮಡಿವಾಳರ, ಸರಕಾರಿ ಸಹಾಯಕ ಅಭಿಯೋಜಕ ಸಚೀನ ಅಂಗಡಿ ಸೇರಿದಂತೆ ಗೌರವಾನ್ವಿತ ನ್ಯಾಯವಾದಿ ಸಂಘದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.