ಕೃಷ್ಣಗೌಡ ಪಾಟೀಲರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
Krishnagouda Patil launches various development works
ಗದಗ 10: ಅವಳಿ ನಗರವಾದ ಗದಗ ಬೆಟಗೇರಿ ನಗರಸಭೆಯ ವ್ಯಾಪ್ತಿಯಲ್ಲಿ ಬರುವ 23 ನೇ ವಾರ್ಡಿನಲ್ಲಿ ಇದೇ ದಿನಾಂಕ 10 ರಂದು ಬೆಳ್ಳಿಗ್ಗೆ 11 ಘಂಟೆಗೆ ರಾಚೋಟೇಶ್ವರ ದೇವಸ್ಥಾನದ ಹತ್ತಿರದ ಮಾನ್ವಿಯವರ ಓಣಿಯ ರಸ್ತೆಯಿಂದ ಸರಕಾರಿ ಹಿರಿಯ ಮಾದರಿ ಶಾಲೆ ಯ ವರೆಗೂ ಬಡಾವಣೆಯ ನಾಗರಿಕರ ಬಹುದಿನಗಳ ಬೇಡಿಕೆಯಾದ ಒಳಚರಂಡಿ ( ಯು ಜಿ ಡಿ ) ಕಾಮಗಾರಿಯನ್ನು ವಾರ್ಡಿನ ಜನಪ್ರಿಯ ಉತ್ಸಾಹಿ ಗದಗ ಬೆಟಗೇರಿ ನಗರಸಭೆಯ ಸದಸ್ಯರು ಹಾಗೂ ಗದಗ ಜಿಲ್ಲಾ ಯೋಜನಾ ಸಮಿತಿಯ ಸದಸ್ಯರಾದ ಜನಾಬ್ ಬರಕತ ಅಲಿ ಮುಲ್ಲಾ ರವರ ನೇತೃತ್ವದಲ್ಲಿ, ಕಾಂಗ್ರೇಸ್ ಪಕ್ಷದ ಯುವ ನಾಯಕರು ಹಾಗೂ ಗದಗ ಜಿಲ್ಲಾ ಯುವ ಕಾಂಗ್ರೇಸ್ ಸಮಿತಿಯ ಅಧ್ಯಕ್ಷರಾದ ಕೃಷ್ಣಗೌಡ ಪಾಟೀಲ್ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಈ ಒಂದು ಅವಿಸ್ಮರಣೀಯ ಸುಸಂಧರ್ಭದಲ್ಲಿ ಬಡಾವಣೆಯ ಮುಖಂಡರಾದ ನಾಗಪ್ಪ ಗುಗ್ಗರಿ, ವಿರೂಪಾಕ್ಷಪ್ಪ ಅಕ್ಕಿ, ಪರಮೇಶ್ವಪ್ಪ ಜಂತಲಿ, ಮುತ್ತಣ್ಣ ರೋಣದ, ಸಿದ್ದಲಿಂಗಪ್ಪ ತುರಾಕಾಣಿ, ಬಸಣ್ಣ ಹತ್ತಿಶೆಟ್ಟರ, ಜಗದೀಶ್ ಗೌಡರ, ಸಿದ್ದಲಿಂಗಪ್ಪ ಕಮತರ, ರಾಜು ಜಕ್ಕನಗೌಡರ ಆಶೀಫ್ ಮುಲ್ಲಾ, ಶಾಬಾಜ್ ಮುಲ್ಲಾ, ಖಾದರ್ ಕಿರೆಸೂರ್, ವಕೀಲರು ಹಾಗೂ ಸಾಮಾಜಿಕ ಕಾರ್ಯಕರ್ತರಾದ ರಾಘವೇಂದ್ರ ಪಾಲನಕರ, , ರಮೇಶ ಸತ್ಯಪ್ಪನವರ, , ಬಾಬು ಗುಳಗುಂದಿ, ಜಂಬಣ್ಣ ಮಲ್ಲಾಡದ, ಜೀವನಸಾಬ್ ನದಾಫ್, ಎಚ್ ಕೆ ಮುಲ್ಲಾ, ಅಲ್ಲಾಬಕ್ಷ ದೊಡ್ಡಮನಿ, ನಾಗೇಶ್ ರೇವಣಕರ, ಶೇಕವ್ವ ತೊಂಡಿಹಾಳ್, ಬೀಬಿಜಾನ್ ಬೇಲೆರಿ, ಮುಕ್ತುಮ್ ಸಾಬ್ ನಾಗನೂರ, ದಾವಲಸಾಬ್ ಖಾಜಾಮುಲ್ಲಾ, ಹಾಗೂ ಸಮಸ್ತ ಬಡಾವಣೆಯ ನಾಗರಿಕರು ಉಪಸ್ಥಿತರಿದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 