ಸಂಬರಗಿ 28: ಸಮೀಪದ ಕೃಷ್ಣಾ ಕಿತ್ತೂರ ಗ್ರಾಮದ ಡಿ ಕೃಷ್ಣಾ ಕಿತ್ತೂರ ಕೋ ಆಫ್ ಕ್ರಿಡೆಟ್ ಲಿ., ನೂತನ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗೆ 5 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಧೊಂಡಿರಾಮ ಬಾಬಾಸಾಹೇಬ ಪವಾರ, ಉಪಾಧ್ಯಕ್ಷರನ್ನಾಗಿ ಶ್ರೀಕಾಂತ ಜಾನು ಕಾಂಬಳೆ ಅವಿರೋಧವಾಗಿ ಆಯ್ಕೆ ಆಗಿದ್ದಾರೆಂದು ಚುನಾವಣಾ ಅಧಿಕಾರಿ ರಾಘವೇಂದ್ರ ನೂಲಿ ಅವರು ಘೋಷಿಸಿದರು.
ಅಣ್ಣಾಸಾಬ ಇರಪ್ಪ ಸತ್ತೀಕರ ಇವರ ನೇತೃತ್ವದ ಸಂಸ್ಥಾಪಕರ ಪೆನೆಲ್‌ನಿಂದ ನಿರ್ದೇಶಕರು, ಅಧ್ಯಕ್ಷ ಮತ್ತು ಉಪಾಧ್ಯಕ್ಷರರನ್ನು ಆಯ್ಕೆ ಮಾಡಲಾಯಿತು.
ಈ ವೇಳೆ ನಿರ್ದೇಶಕರಾಗಿ ಗಣಪತಿ ಅಣ್ಣಾಸಾಬ ಕಾಕಣಕಿ, ಅಪ್ಪಸಾಬ ಗುರುಪಾದ ಮಗದುಮ್ಮ, ಸಂಗಪ್ಪಾ ರಾಮಗೌಂಡ ಪಾಟೀಲ, ಮಾಂತೇಶ ಶಿವಪ್ಪಾ ಮದನೆ, ಧೊಂಡಿರಾಮ ಪವಾರ, ಬಾಳಸಾಬ ಬಾಬಾಸಾಬ ಖಾಮಕರ, ರಾಮ ಭೀಮಾ ಯಂಡೋಳಿ, ಕಲ್ಲಪ್ಪ ಮಚಂದ್ರ ಕರಗಾರ, ವಿದ್ಯಾದರ ಅಪ್ಪಾಸಾಬ ಸುತಾರ, ಸವಿತಾ ಅಣ್ಣಾಪ್ಪಾ ಜಂಬಗಿ, ನೀಲವ್ವಾ ಸುಭಾಸ ಪಾಟೀಲ, ಶ್ರೀಕಾಂತ ಜಾನು ಕಾಂಬಳೆ, ಭಗವಂತ ನೀಲಪ್ಪಾ ನಾಯಿಕ ಸೇರಿದಂತೆ ಪುಂಡಲೀಕ ನರಸಪ್ಪಾ ಬೋಗಿ, ಕಲ್ಮೇಶ ಪಾಟೀಲ, ಲಗಮನ್ನ ಕಾಂಬಳೆ, ಉಮೇಶನಾಯಿಕ, ಪರಶುರಾಮ್ ನಾಯಕ್,ದತ್ತ ಕದಮ,ಉಮೇಶ್ ನಾಯಕ್, ಮಂಜು ಜಮಾಗಿ, ಅಪ್ಪಾಸಾಬ ಜಮಾಗಿ, ರಾಜು ಮ ದನೆ, ಅಶೋಕ್ ಇಚಲಂಕಾರಂಜಿ , ಚೇತನ್ ಮಂಟೂರ್ ಪವನ್ ಪಾಟೀಲ್ ಉಪಸ್ಥಿತರಿದ್ದರು.