ಅಗಸ್ಟ 16 ರಂದು ಕೃಷ್ಣ ಜಯಂತಿ : ಪೂರ್ವಭಾವಿ ಸಭೆ

ಅಗಸ್ಟ 16 ರಂದು ಕೃಷ್ಣ ಜಯಂತಿ : ಪೂರ್ವಭಾವಿ ಸಭೆ Krishna Jayanti on August 16: Preparatory meeting

ಲೋಕದರ್ಶನ ವರದಿ 

ಅಗಸ್ಟ 16 ರಂದು ಕೃಷ್ಣ ಜಯಂತಿ : ಪೂರ್ವಭಾವಿ ಸಭೆ 

ಗದಗ  4: ಶ್ರೀ ಕೃಷ್ಣ ಜಯಂತಿಯನ್ನು ಅಗಸ್ಟ 16 ರಂದು ಬೆಳಿಗ್ಗೆ 11 ಗಂಟೆಗೆ  ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ದಲ್ಲಿ ಅರ್ಥಪೂರ್ಣವಾಗಿ ಆಚರಿಸುವಂತೆ ಅಪರ ಜಿಲ್ಲಾಧಿಕಾರಿ ಡಾ. ದುರುಗೇಶ್  ಕೆ.ಆರ್  ಸೂಚಿಸಿದರು.  


ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಶ್ರೀ ಕೃಷ್ಣ ಜಯಂತಿ ಕುರಿತು ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ ತಾಲೂಕು, ಗ್ರಾಮ ಪಂಚಾಯತಿ ಹಾಗೂ ಶಾಲೆಗಳಲ್ಲಿಯೂ ಸಹ ಜಯಂತಿ ಆಚರಣೆಗೆ ಕ್ರಮ ವಹಿಸಬೇಕು ಎಂದರು. 


ಜಯಂತಿ ಕಾರ್ಯಕ್ರಮದಲ್ಲಿ ಎಸ್‌.ಎಸ್‌.ಎಲ್‌.ಸಿ. ಪಿ.ಯು.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದವರಿಗೆ ಸನ್ಮಾನಿಸಲಾಗುವುದು. ಒಟ್ಟಾರೆಯಾಗಿ ಜಯಂತಿ ಕಾರ್ಯಕ್ರಮ ಯಶಸ್ವಿಗೆ ಶ್ರಮಿಸಬೇಕೆಂದು ಅಪರ ಜಿಲ್ಲಾಧಿಕಾರಿಗಳು ತಿಳಿಸಿದರು. 


ನಗರದ ಜೋಡು ಮಾರುತಿ ದೇವಸ್ಥಾನದಿಂದ ಶ್ರೀ ಕೃಷ್ಣ ಭಾವಚಿತ್ರದ ಮೆರವಣಿಗೆ ಅಂದು ಬೆಳಿಗ್ಗೆ 9 ಗಂಟೆಯಿಂದ ಆರಂಭವಾಗಲಿದೆ. ಮೆರವಣಿಗೆಯಲ್ಲಿ ಕಲಾ ತಂಡಗಳು, ಸಾರ್ವಜನಿಕರು ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಸೂಚಿಸಿದರು.   


ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ  ಡಾ.ಬಸವರಾಜ ಬಳ್ಳಾರಿ ಅವರು ಮಾತನಾಡಿ ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯರಿಗೆ, ಸಮಾಜದ ಸಾರ್ವಜನಿಕರಿಗೆ ಉಪಹಾರ ವ್ಯವಸ್ಥೆ ಮಾಡಲಾಗುವುದು ಜೊತೆಗೆ ಪ್ರಚಾರಕ್ಕಾಗಿ ನಗರದ ವಿವಿಧೆಡೆ ಬ್ಯಾನರ್ ಅಳವಡಿಸಲಾಗುವುದು. ಶಿಷ್ಟಾಚಾರದನ್ವಯ ಆಮಂತ್ರಣ ಪತ್ರಿಕೆ ಮುದ್ರಿಸಿ ವಿತರಿಸಲಾಗುವುದು. ಕಾರ್ಯಕ್ರಮ ಅರ್ಥಪೂರ್ಣ ಆಚರಣೆಗೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ವಹಿಸಲಾಗುವುದು  ಎಂದು ಸಭೆಗೆ ವಿವರಿಸಿದರು. 


ಸಭೆಯಲ್ಲಿ ಕಲಾ ತಂಡಗಳ ಆಯ್ಕೆ, ಜಯಂತಿ ನಿಮಿತ್ತ ಮೆರವಣಿಗೆ, ವೇದಿಕೆ ಕಾರ್ಯಕ್ರಮ ,  ಆಮಂತ್ರಣ ಪತ್ರಿಕೆ ಮುದ್ರಣ,  ಉಪನ್ಯಾಸಕರ ಆಯ್ಕೆ ಕುರಿತು ಚರ್ಚಿಸಲಾಯಿತು.   ಸಭೆಯಲ್ಲಿ ಸಮುದಾಯದ ಹರೀಶ ಪೂಜಾರ, ಸಮುದಾಯದ ಮುಖ್ಯಸ್ಥರು, ಹಿರಿಯರು, ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದು ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮ ಯಶಸ್ವಿಗೆ ಚರ್ಚಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸೋಣ ಎಂದರು.