ಮಠದಲ್ಲಿ ಸೆ. 4-5 ಕೃಷ್ಣ ಜನ್ಮಾಷ್ಟಮಿ ಹಾಗೂ ಲೀಲೋತ್ಸವ

ಮಠದಲ್ಲಿ ಸೆ. 4-5 ಕೃಷ್ಣ ಜನ್ಮಾಷ್ಟಮಿ ಹಾಗೂ ಲೀಲೋತ್ಸವ  Krishna Janmashtami and Leelotsava at the Matha on September 4–5


ವಿಜಯಪುರ 18 : ವಿಜಯಪುರ ನಗರದ  ಮಠದಲ್ಲಿ ಸೆಪ್ಟೆಂಬರ್ 4 ಮತ್ತು 5ರಂದು ಕೃಷ್ಣ ಜನ್ಮಾಷ್ಟಮಿ ಹಾಗೂ ಲೀಲೋತ್ಸವವನ್ನು ಭಕ್ತಿಭಾವದಿಂದ ಆಚರಿಸಲಾಗುವುದು ಎಂದು ಶ್ರೀಮಠದ ವಿಜಯಪುರ ಶಾಖೆಯ ಗೌರವಾಧ್ಯಕ್ಷ ಗೋಪಾಲ ನಾಯಕ ತಿಳಿಸಿದರು.  ಸೆ.4 ರಂದು ಶ್ರೀಕೃಷ್ಣ ದೇವರಿಗೆ ಲಕ್ಷ ತುಳಸಿ ಅರೆ​‍್ಣ ಹಾಗೂ ಮಹಿಳಾ ಮಂಡಳಿಗಳಿಂದ ಅಖಂಡ ಭಜನೆ ನಡೆಯಲಿದೆ. ಸೆ.5 ರಂದು ಪಂಚಾಮೃತ ಅಭಿಷೇಕ, ಪೂಜೆ, ನೈವೇದ್ಯ ಹಾಗೂ ಪ್ರಸಾದ ವಿತರಣೆ ಆಯೋಜಿಸಲಾಗಿದೆ. ಶ್ರೀಗಳ ಆದೇಶದಂತೆ ಮಠದ ಆವರಣದಲ್ಲಿದ್ದ ವಿದ್ಯಾರ್ಥಿ ನಿಲಯದ ಹಳೆಯ ಕಟ್ಟಡ ತೆರವುಗೊಳಿಸಿ, ಅಂದಾಜು ರೂ7 ಕೋಟಿ ವೆಚ್ಚದಲ್ಲಿ ಆಧುನಿಕ ನೂತನ ಕಟ್ಟಡ ನಿರ್ಮಿಸಲಾಗುತ್ತಿದೆ. ಕಟ್ಟಡ ನಿರ್ಮಾಣಕ್ಕೆ ಭಕ್ತರು ಹೆಚ್ಚಿನ ದೇಣಿಗೆ ನೀಡುವಂತೆ ಗೋಪಾಲ ನಾಯಕ ಮನವಿ ಮಾಡಿದರು. ಈ ಸಂದರ್ಭದಲ್ಲಿ ಹಿರಿಯರ ಸ್ಮರಣಾರ್ಥ ಕೊಠಡಿ ನಿರ್ಮಾಣಕ್ಕೆ ರೂ5 ಲಕ್ಷ ದೇಣಿಗೆ ನೀಡಿದರೆ ಅವರ ಹೆಸರು ಹಾಗೂ ಭಾವಚಿತ್ರ ಅಳವಡಿಸಲಾಗುವುದು ಎಂದು ಪ್ರಕಾಶ ಅಕ್ಕಲಕೋಟ ತಿಳಿಸಿದರು. ಸಮಿತಿ ಸದಸ್ಯ ವಿ.ಬಿ. ಕುಲಕರ್ಣಿ ಹಾಗೂ ಅಧ್ಯಕ್ಷ ಕಿರಣ ಚುಳಕಿ ತಲಾ ರೂ5 ಲಕ್ಷ ದೇಣಿಗೆ ಘೋಷಿಸಿದರು. ಹಲವರು ಉಪಸ್ಥಿತರಿದ್ದರು.