ನಟ ದರ್ಶನ್ ತೂಗುದೀಪ ಅವರ ಸಾಮಾಜಿಕ ಕೊಡುಗೆಗಳ ಹಿನ್ನೆಲೆಯಲ್ಲಿ ಮಾನವೀಯ ದೃಷ್ಟಿಕೋನಕ್ಕೆ - ಕೃಷ್ಣಾ ಹಡಪದ ವಿನಂತಿ
Krishna Hadapada's request for a humanitarian perspective in the wake of actor Darshan Thugudeepa's
ಗದಗ 23: ಚಲನಚಿತ್ರ ನಟ ದರ್ಶನ್ ತೂಗುದೀಪ ಅವರ ಪ್ರಸ್ತುತ ಪ್ರಕರಣವು ಸದ್ಯ ನ್ಯಾಯಾಲಯದ ವ್ಯಾಪ್ತಿಯಲ್ಲಿದೆ. ಒಬ್ಬ ಜವಾಬ್ದಾರಿಯುತ ಸಾಮಾಜಿಕ ಕಾರ್ಯಕರ್ತನಾಗಿ ನಾನು ಭಾರತದ ಸಂವಿಧಾನ, ಕಾನೂನು ವ್ಯವಸ್ಥೆ ಮತ್ತು ಗೌರವಾನ್ವಿತ ನ್ಯಾಯಾಲಯದ ಮೇಲೆ ಅತ್ಯುನ್ನತ ಗೌರವವನ್ನು ಹೊಂದಿದ್ದೇನೆ ಎಂದು ಗದಗಿನ ಸಾಮಾಜಿಕ ಕಾರ್ಯಕರ್ತರಾದ ಕೃಷ್ಣ ಎಚ್ ಹಡಪದ ಅವರು ಪ್ರಕಟಣೆ ಮೂಲಕ ಸರ್ಕಾರಕ್ಕೆ ಮತ್ತು ಸಂಬಂಧಪಟ್ಟ ನ್ಯಾಯಾಂಗ ವ್ಯವಸ್ಥೆಗೆ ಕೈ ಮುಗಿದು ತಲೆಬಾಗಿ ಹೇಳಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಸಂತ್ರಸ್ತರ ಕುಟುಂಬದ ನೋವಿನಲ್ಲಿ ನಾವೂ ಭಾಗಿಗಳಾಗಿದ್ದೇವೆ ಮತ್ತು ಅವರಿಗೆ ಕಾನೂನಿನ ಪ್ರಕಾರ ಸಂಪೂರ್ಣ ನ್ಯಾಯ ಸಿಗಬೇಕು ಎನ್ನುವುದನ್ನು ನಾನು ಮುಕ್ತಾಂತಃಕರಣದಿಂದ ಒಪ್ಪುತ್ತೇನೆ. ಆದರೆ, ಕತ್ತಲ ಕೋಣೆಯ ಒಂದು ತಪ್ಪಿನಿಂದಾಗಿ ಒಬ್ಬ ವ್ಯಕ್ತಿ ಇಡೀ ಜೀವಮಾನದಲ್ಲಿ ಮಾಡಿದ ಸಾವಿರಾರು ಬೆಳಕಿನಂತಹ ಒಳ್ಳೆಯ ಕೆಲಸಗಳು ಸಂಪೂರ್ಣವಾಗಿ ಮರೆಯಾಗಿ ಹೋಗಬಾರದು. ದರ್ಶನ್ ತೂಗುದೀಪ ಅವರು ಸಾರ್ವಜನಿಕ ಜೀವನದಲ್ಲಿ ಕಳೆದ ಹಲವು ವರ್ಷಗಳಿಂದ ಕಣ್ಣೀರು ಒರೆಸಿದ ಆ ಬಡ ಜೀವಗಳ ಪರವಾಗಿ ಧ್ವನಿಯೆತ್ತುವುದು ನಮ್ಮ ಕರ್ತವ್ಯವಾಗಿದೆ
*ಸಾವಿರಾರು ಬಡ ಮಕ್ಕಳ ಭವಿಷ್ಯಕ್ಕೆ ಬೆಳಕು:* ತಂದೆ-ತಾಯಿ ಇಲ್ಲದ, ಫೀಸ್ ಕಟ್ಟಲು ಹಣವಿಲ್ಲದೆ ಬೀದಿಗೆ ಬೀಳುತ್ತಿದ್ದ ನೂರಾರು ಬಡ ವಿದ್ಯಾರ್ಥಿಗಳ ಎಲ್.ಕೆ.ಜಿ ಯಿಂದ ಹಿಡಿದು ವೈದ್ಯಕೀಯ (ಡಾಕ್ಟರ್) ಮತ್ತು ಎಂಜಿನಿಯರಿಂಗ್ ಓದಿನ ಸಂಪೂರ್ಣ ವೆಚ್ಚವನ್ನು ತಾವೇ ಒಬ್ಬ ತಂದೆಯ ಸ್ಥಾನದಲ್ಲಿ ನಿಂತು ಭರಿಸಿದ್ದಾರೆ. ಇಂದು ಅವರು ಕಷ್ಟದಲ್ಲಿದ್ದರೆ, ಆ ವಿದ್ಯಾರ್ಥಿಗಳ ಭವಿಷ್ಯದ ಕನಸುಗಳು ಕಮರಿ ಹೋಗುತ್ತಿವೆ.
*ಅನಾಥ ಪ್ರತಿಭೆಗಳ ಪಾಲಿನ ಆರಾಧ್ಯ ದೈವ:* ಗ್ರಾಮೀಣ ಭಾಗದ ಸೂಕ್ತ ಆಸರೆ ಇಲ್ಲದೆ ಅಲೆದಾಡುತ್ತಿದ್ದ ನೂರಾರು ಬಡ ಪ್ರತಿಭೆಗಳನ್ನು ಮತ್ತು ಕಲಾವಿದರನ್ನು ಗುರುತಿಸಿ, ಹೆಗಲ ಮೇಲೆ ಕೈಹಾಕಿ ಚಿತ್ರರಂಗದಲ್ಲಿ ಬದುಕು ಕಟ್ಟಿಕೊಟ್ಟ ಮಹಾ ದಯಾಳು ಇವರು. *ಮೂಕ ಪ್ರಾಣಿಗಳ ಕರುಣಾಳು ಬಾಂಧವ:* ಮನುಷ್ಯರು ಕಷ್ಟದಲ್ಲಿದ್ದಾಗ ಎಲ್ಲರೂ ಧಾವಿಸುತ್ತಾರೆ, ಆದರೆ ಮಾತನಾಡಲಾಗದ ಮೂಕ ಪ್ರಾಣಿಗಳ ಹಸಿವನ್ನು ಅರಿತು, ಮೃಗಾಲಯಗಳ ಪ್ರಾಣಿಗಳನ್ನು ದತ್ತು ಪಡೆದು ಅವುಗಳ ರಕ್ಷಣೆಗೆ ನಿಂತ ಅವರ ಪ್ರಾಣಿ ಪ್ರೇಮ ಮರೆಯಲಾಗದ್ದು.
*ಮನೆ ಬಾಗಿಲಿಗೆ ಬಂದವರ ಕಣ್ಣೀರು ಒರೆಸಿದ ಕೈಗಳು:* ರಾಜ್ಯದಲ್ಲಿ ಪ್ರವಾಹ ಬಂದಾಗ, ಕೊರೋನಾದಂತಹ ಸಾಂಕ್ರಾಮಿಕ ರೋಗ ಆವರಿಸಿದಾಗ ಅಥವಾ ವೈಯಕ್ತಿಕವಾಗಿ ಚಿಕಿತ್ಸೆಗೆ ಹಣವಿಲ್ಲದೆ ತತ್ತರಿಸುತ್ತಿದ್ದ ಬಡ ಕುಟುಂಬಗಳಿಗೆ ಕೋಟ್ಯಂತರ ರೂಪಾಯಿಗಳ ಆರ್ಥಿಕ ಸಹಾಯವನ್ನು ಸದ್ದಿಲ್ಲದೆ, ಯಾವುದೇ ಪ್ರಚಾರವಿಲ್ಲದೆ ಮಾಡಿದ ಹೆಮ್ಮೆಯ ಹೃದಯ ಅವರದ್ದು. ಕಾನೂನು ತನ್ನ ನಿಷ್ಪಕ್ಷಪಾತ ಕೆಲಸವನ್ನು ಮಾಡಲಿ.
ಆದರೆ, ಸಾರ್ವಜನಿಕ ಜೀವನದಲ್ಲಿ ಅವರು ಸಮಾಜಕ್ಕೆ ನೀಡಿರುವ ಈ ಎಲ್ಲಾ ಅಪಾರ ಕೊಡುಗೆಗಳು, ತಾಯಂದಿರ ಆಶೀರ್ವಾದ ಮತ್ತು ಸಾವಿರಾರು ಬಡ ಕುಟುಂಬಗಳಿಗೆ ನೀಡಿರುವ ಆಸರೆಯನ್ನು ಪರಿಗಣಿಸಿ, ಅವರ ವಿಷಯದಲ್ಲಿ ಮಾನವೀಯತೆಯ ಅತ್ಯುನ್ನತ ದೃಷ್ಟಿಕೋನ ಇರಲಿ ಎಂದು ಗದಗಿನ ಸಾಮಾಜಿಕ ಕಾರ್ಯಕರ್ತರಾದ ಕೃಷ್ಣ ಎಚ್ ಹಡಪದ ಅವರು ಸರ್ಕಾರಕ್ಕೆ ಮತ್ತು ಸಂಬಂಧಪಟ್ಟ ನ್ಯಾಯಾಂಗ ವ್ಯವಸ್ಥೆಗೆ ಅತ್ಯಂತ ವಿನಮ್ರವಾಗಿ ಹಾಗೂ ಕಳಕಳಿಯಿಂದ ಪ್ರಾರ್ಥಿಸಿದ್ದಾರೆ.
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ 