ಕಾರವಾರದ ಜಿಲ್ಲಾಧಿಕಾರಿ ಕಚೇರಿ ಯಲ್ಲಿ ಕೃಷ್ಣನ ಸ್ಮರಣೆ

Krishan jayanti at karwar dc office

ಕಾರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ   ಕೃಷ್ಣ ಜಯಂತಿ ಆಚರಣೆ


ಕಾರವಾರ ಅಗಸ್ಟ್ 11: ಕೋವಿಡ್-19 ಹಿನ್ನಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಜಿಲ್ಲಾಡಳಿತದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಅತ್ಯಂತ ಸರಳವಾಗಿ ಆಚರಿಸಲಾಯಿತು.

ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಕೆ ಅವರು ಶ್ರೀ ಕೃಷ್ಣ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಸರಳವಾಗಿ ಆಚರಿಸಿದರು. 

ಅಪರ ಜಿಲ್ಲಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ ಅವರು ಕೃಷ್ಣನ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಮಾತನಾಡಿ, ಶ್ರೀ ಕೃಷ್ಣನು ಸಾರ್ವಕಾಲಿಕವಾಗಿದ್ದಾನೆ. ಅವನು ಗುರುವಾಗಿ, ನಾಯಕನಾಗಿ ರಾಜನೀತಿ ತಂತ್ರಜ್ಞನು ಆಗಿದ್ದನು ಎನ್ನುವ ಅವನ ಇತಿಹಾಸವೇ ನಮಗೆ ಮಾದರಿಯಾಗಿದೆ. ಕೃಷ್ಣ-ಸುಧಾಮರ ಸ್ನೇಹ ನಮ್ಮ ಅಹಂನ್ನು ಇಳಿಸುತ್ತದೆ. ಕೃಷ್ಣ-ರಾಧೆಯರದ್ದು ಕಲ್ಮಷವಿಲ್ಲದ ಪ್ರೀತಿ, ಕೃಷ್ಣನ ಕುರಿತು ಬರೆದ ಮೂಲ ಕೃತಿಗಳನ್ನು ಓದಿ ಕೃಷ್ಣನ ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳೊಣ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಮಂಜುನಾಥ ಮಡಿವಾಳ ಹಾಗೂ ಜಿಲ್ಲಾಧಿಕಾರಿ ಕಚೇರಿ ವಿವಿಧ ವಿಭಾಗಗಳ ಸಿಬ್ಬಂದಿ ಹಾಜರಿದ್ದರು.