ಕ್ರಾಂತಿ ಜ್ಯೋತಿ ಸೀರತ್ ಅಭಿಯಾನ: ಪ್ರಬಂಧ ಸ್ಪರ್ಧೆ, ವಿಚಾರಗೋಷ್ಠಿ

ಕ್ರಾಂತಿ ಜ್ಯೋತಿ ಸೀರತ್ ಅಭಿಯಾನ: ಪ್ರಬಂಧ ಸ್ಪರ್ಧೆ, ವಿಚಾರಗೋಷ್ಠಿ  Kranti Jyoti Seerat Campaign: Essay Competition, Seminar

ಬಳ್ಳಾರಿ, ಆ. 25: ಪ್ರವಾದಿ ಮೊಹಮ್ಮದ್ ಅವರ ಜನ್ಮದಿನದ ಪ್ರಯುಕ್ತ ಜಮಾಅತೆ ಇಸ್ಲಾಂ ಹಿಂದ್, ಬಳ್ಳಾರಿ ವತಿಯಿಂದ ‘ಕ್ರಾಂತಿ ಜ್ಯೋತಿ ಸೀರತ್ ಅಭಿಯಾನ’ವನ್ನು ಸೆ.13ರವರೆಗೆ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಜಮಾಅತೆ ಇಸ್ಲಾಂ ಹಿಂದ್ ಬಳ್ಳಾರಿ ಘಟಕದ ಮಾಜಿ ಅಧ್ಯಕ್ಷ ಸೈಯದ್ ನಿಜಾಮುದ್ದೀನ್ ತಿಳಿಸಿದರು.  

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿಯಾನದ ಅಂಗವಾಗಿ ‘ಕ್ರಾಂತಿ ಜ್ಯೋತಿ ಪ್ರವಾದಿ ಮೊಹಮ್ಮದ್‌’ ವಿಷಯದಡಿ ವಿಚಾರಗೋಷ್ಠಿ, ಸಾರ್ವಜನಿಕ ಸಮಾವೇಶ, ಸಂವಾದ ಕಾರ್ಯಕ್ರಮ, ಚರ್ಚಾಗೋಷ್ಠಿ, ಸೀರತ್ ಪ್ರವಚನ, ಪ್ರದರ್ಶನ, ಸಮಾಜಸೇವಾ ಚಟುವಟಿಕೆಗಳು ಹಾಗೂ ಸೌಹಾರ್ದ ಸಂದೇಶ ಯಾತ್ರೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.  

ವಿಜಯನಗರ ಹಾಗೂ ಬಳ್ಳಾರಿ ಜಿಲ್ಲಾ ಮಟ್ಟದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದ್ದು, 16 ವರ್ಷ ಮೇಲ್ಪಟ್ಟ ಎಲ್ಲ ಜಾತಿ-ಧರ್ಮದವರು ಭಾಗವಹಿಸಬಹುದು. ಪ್ರಥಮ ಬಹುಮಾನ ?15,000, ದ್ವಿತೀಯ ?10,000 ಹಾಗೂ ತೃತೀಯ ?5,000 ನಗದು ಬಹುಮಾನ ಮತ್ತು ಪ್ರಮಾಣಪತ್ರ ನೀಡಲಾಗುವುದು. ಅಲ್ಲದೆ ತಲಾ ?2,000 ಮೊತ್ತದ ಐದು ಸಮಾಧಾನಕರ ಬಹುಮಾನಗಳನ್ನೂ ನೀಡಲಾಗುವುದು.  

ಸ್ಪರ್ಧಾಳುಗಳು ತಮ್ಮ ಪ್ರಬಂಧಗಳನ್ನು ಬರೆದು ಸಹಿ ಮಾಡಿದ ಪ್ರತಿಯನ್ನು ಸಂಗಮ್ ಸರ್ಕಲ್ನಲ್ಲಿರುವ ಸುರಭಿ ಜೆರಾಕ್ಸ್‌ ಅಂಗಡಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಸೆ.30ರೊಳಗೆ ಕಳುಹಿಸಬಹುದು ಎಂದು ತಿಳಿಸಿದರು.  

ಸುದ್ದಿಗೋಷ್ಠಿಯಲ್ಲಿ ಸಾಹಿತಿ ಯೋಗೇಶ್ ಮಾಸ್ಟರ್ ಅವರು ಬರೆದ ‘ಮಾನವ ಮನಸ್ಸಿನ ಕೃಷಿಕ ಪ್ರವಾದಿ ಮೊಹಮ್ಮದ್‌’ ಹಾಗೂ ‘ವಾತಾ9 ಭಾರತ’ ದಿನಪತ್ರಿಕೆ ಸಂಪಾದಕ ಅಬೂ ಸಲಾಂ ಕುತಿಗೆಯವರು ಬರೆದ ‘ಸಮಗ್ರ ಕ್ರಾಂತಿಯ ಜ್ಯೋತಿ ಬೆಳಗಿದ ಪೈಗಂಬರ್ ಮೊಹಮ್ಮದ್‌’ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.  

ಜಮಾಅತೆ ಇಸ್ಲಾಂ ಹಿಂದ್ನ ಕಾರ್ಯದರ್ಶಿ ಸೈಯದ್ ಅಮ್ಜದ್ ಹುಸೇನ್ ಮಾತನಾಡಿ, ಸರ್ವಧರ್ಮ ಸಹಬಾಳ್ವೆ ಹಾಗೂ ಸಮಾಜದಲ್ಲಿ ಶಾಂತಿ-ಸೌಹಾರ್ದತೆ ಬೆಳೆಸುವ ಉದ್ದೇಶದಿಂದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.  ಸುದ್ದಿಗೋಷ್ಠಿಯಲ್ಲಿ ಸೈಯದ್ ನಾಸಿರ್ ಅಲಿ, ಆರ್‌. ಲತೀಫ್ ಅಹಮದ್, ಅಬ್ದುಲ್ ಖಾಲಿದ್, ಸೈಯದ್ ಅಮ್ಜದ್ ಹುಸೇನ್ ಹಾಗೂ ನಯಾಜ್ ಬೆಳಗಾವಿ ಉಪಸ್ಥಿತರಿದ್ದರು.