ಸ್ಲೋವೆನಿಯಾ ನಾಯಕರ ಜೊತೆಗೆ ಕೋವಿಂದ್ ಮಾತುಕತೆ

   ಜುಬ್ಲಜಾನಾ, ಸೆ 16     ಸ್ಲೊವೇನಿಯಾ ರಾಜಧಾನಿ ಜುಬ್ಲಜಾನಾದಲ್ಲಿ ಅಲ್ಲಿನ ಅಧ್ಯಕ್ಷ ಬೋರಟ್ ಪಹೋರ್ ಅವರೊಂದಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೋಮವಾರ ಮಾತುಕತೆ ನಡೆಸಲಿದ್ದಾರೆ. 

   ಐಸ್ಲ್ಯಾಂಡ್ ಮತ್ತು ಸ್ವಿಡ್ಜರ್ಲ್ಯಾಂಡ್ ಭೇಟಿಯ ನಂತರ ಸ್ಲೋವೇನಿಯಾ ರಾಜಧಾನಿಗೆ ಭಾನುವಾರ ರಾತ್ರಿ ಕೋವಿಂದ್ ತಲುಪಿದ್ದಾರೆ. ಉಭಯ ದೇಶಗಳ ನಡುವಿನ ನಿಯೋಗ ಮಟ್ಟದ ಮಾತುಕತೆ ಮತ್ತು ಒಪ್ಪಂದ ಸಹಿ ಹಾಕುವ ವೇಳೆ ರಾಷ್ಟ್ರಪತಿ ಉಪಸ್ಥಿತರಿರಲಿದ್ದಾರೆ. 

   ಎರಡು ದಿನಗಳ ಭೇಟಿ ಸಂದರ್ಭದಲ್ಲಿ ರಾಮ್ನಾಥ್ ಕೋವಿಂದ್ ಹಲವು ವ್ಯಾಪಾರ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಮತ್ತು ಯುದ್ಧ ಸ್ಮಾರಕಕ್ಕೆ ತೆರಳಿ ನಮನ ಸಲ್ಲಿಸಲಿದ್ದಾರೆ.  

ಸ್ಲೊವೇನಿಯಾಗೆ 1991 ರಲ್ಲಿ ಸ್ವಾತಂತ್ರ್ಯ ದೊರೆತ ನಂತರ ಅಲ್ಲಿಗೆ ಭೇಟಿ ನೀಡುತ್ತಿರುವ ಭಾರತದ ಮೊದಲ ರಾಷ್ಟ್ರಪತಿ ರಾಮ್ನಾಥ್ ಕೋವಿಂದ್.