ಕೊವಿದ್‍-19 ಭೀತಿ- ಬಾಂಗ್ಲಾದೇಶದಿಂದ ತ್ರಿಪುರಾದೊಳಗೆ ಒಳನುಸುಳುವಿಕೆ ಏರಿಕೆ

ಅಗರ್ತಲಾ, ಮಾರ್ಚ್ 28,  ಕರೋನವೈರಸ್ ಪೀಡಿತ ವ್ಯಕ್ತಿಗಳ ಪ್ರವೇಶ ತಡೆಗಟ್ಟಲು ಭಾರತ-ಬಾಂಗ್ಲಾ ಗಡಿಯನ್ನು ಮುಚ್ಚಿದ್ದರೂ ಸಹ ಬಾಂಗ್ಲಾದೇಶದಿಂದ ಒಳನುಸುಳುವಿಕೆ ತಡೆಯಲು ಬಿಎಸ್‌ಎಫ್ ಸಾಕಷ್ಟು ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಲಾಗಿದೆ.ಭಾರತೀಯ ಹಳ್ಳಿಗಳಿಗೆ ಪ್ರವೇಶಿಸಲು ಬಾಂಗ್ಲಾದೇಶದ ಪ್ರಜೆಗಳು ಗಡಿರೇಖೆಯನ್ನು ಬಳಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಕಳೆದ ನಾಲ್ಕು ದಿನಗಳಲ್ಲಿ ಪಶ್ಚಿಮ ಸೆಪಾಹಿಜಲಾ, ಉತ್ತರ ಖೋವಾಯಿ, ಉನೊಕೊಟಿ ಮತ್ತು ದಕ್ಷಿಣ ತ್ರಿಪುರಾ ಜಿಲ್ಲೆಗಳಲ್ಲಿ ಅನೇಕ ಪ್ರಕರಣಗಳನ್ನು ಪೊಲೀಸರು ದಾಖಲು ಮಾಡಿಕೊಂಡಿದ್ದಾರೆ. ಕೆಲ ಸಂದರ್ಭಗಳಲ್ಲಿ  ಗ್ರಾಮಸ್ಥರು ಮತ್ತೆ ಅವರನ್ನು ಬಾಂಗ್ಲಾದೇಶಕ್ಕೆ ಹೊರದಬ್ಬಿದ್ದಾರೆ. ಆದರೆ ಗಡಿ ಗ್ರಾಮಗಳಾದ ಸೋನಮುರಾ, ಬೆಲೋನಿಯಾ, ಕಮಲಸಾಗರ್, ಮೋಹನ್‌ಪುರ, ಖೋವಾಯ್ ಮತ್ತು ಕೈಲಾಶಹರ್ ನಲ್ಲಿರುವ ಹೆಚ್ಚಿನ ಸಂಖ್ಯೆಯ ಬಾಂಗ್ಲಾ ನುಸುಳುಕೋರರು ತಮ್ಮ ಸಂಬಂಧಿಕರ ಮನೆಗಳಲ್ಲಿ ವಾಸಿಸುತ್ತಿದ್ದಾರೆ.
ತ್ರಿಪುರಾ - ಬಾಂಗ್ಲಾದೇಶದ ಗಡಿಯ ಮಾನವರಹಿತ ಮತ್ತು ಭದ್ರತೆ ಇಲ್ಲದ ಭಾಗದಲ್ಲಿ ಭದ್ರತೆಯನ್ನು ಬಲಪಡಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಬಿಎಸ್‌ಎಫ್‌ಗೆ ಸೂಚಿಸಿವೆ. ಆದರೆ ಪ್ರತಿದಿನ  ಗಡಿರೇಖೆಯ ಹಳ್ಳಿಗಳಲ್ಲಿ ಒಳನುಸುಳುವಿಕೆ ಮೂಲಕ ತ್ರಿಪುರಾದಲ್ಲಿ ಕೊವಿದ್‍ -19 ರ ಅಪಾಯವನ್ನು ಹೆಚ್ಚಿಸುವ ವರದಿಗಳು ಬರುತ್ತಿವೆ. ಬಾಂಗ್ಲಾದೇಶದಲ್ಲಿ ಸೋಂಕು ವ್ಯಾಪಿಸುತ್ತಿರುವುದು ಇದಕ್ಕೆ ಕಾರಣವಾಗಿದೆ ಎಂದು ಇಲ್ಲಿನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಗಡಿಯಲ್ಲಿ ನಿಯೋಜಿಸಲಾದ ಸೈನಿಕರ ಮತ್ತು ಅವರ ಮೇಲ್ವಿಚಾರಣಾ ಸಿಬ್ಬಂದಿಯ ಆಸಡ್ಡೆ ಕಾರಣದಿಂದಲೇ  ತ್ರಿಪುರಾಗೆ ವಲಸೆ ಹೆಚ್ಚಾಗಿದೆ ಎಂದು ಅವರು ಆರೋಪಿಸಿದ್ದಾರೆ.ಆದರೆ, ದೇಶದ ಹಿತಾಸಕ್ತಿ ದೃಷ್ಟಿಯಿಂದ ರಾಜ್ಯ ಸರ್ಕಾರ ಮತ್ತೆ ಬಿಎಸ್‌ಎಫ್ ಉನ್ನತ ಅಧಿಕಾರಿಗಳೊಂದಿಗೆ ಈ ವಿಷಯವನ್ನು ಚರ್ಚಿಸುತ್ತಿದೆ.