ಗದಗ, ಏ.28, ಗದಗ-ಬೆಟಗೇರಿ ನಗರದ ಗಂಜಿ ಬಸವೇಶ್ವರ ಓಣಿಯ ನಿವಾಸಿ 75 ವರ್ಷದ ವೃದ್ಧರಿಗೆ (ಪಿ.514) ಕೋವಿಡ್-19 ಸೋಂಕು ಧೃಡಪಟ್ಟಿದೆ. ತೀವ್ರ ತರವಾದ ಉಸಿರಾಟದ ತೊಂದರೆ ಇದ್ದ ಇವರ ಗಂಟಲು ದ್ರವದ ಮಾದರಿಯನ್ನು ಕೊವಿಡ್-19 ಸೋಂಕು ಪರೀಕ್ಷೆಗೆ ಕಳುಹಿಸಲಾಗಿತ್ತು. ಇವರ ಮನೆಯಲ್ಲಿ ಒಟ್ಟು 9 ಜನರ ಹಾಗೂ ಪ್ರಾಥಮಿಕ ಸಂಪರ್ಕದಲ್ಲಿದ್ದಂತಹ 15 ಜನರನ್ನು ಗುರುತಿಸಿ ಅವರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇದರಲ್ಲಿ 13 ಜನರ ವರದಿಗಳು ನಕಾರಾತ್ಮಕವಾಗಿದ್ದು ಬಾಕಿ ಉಳಿದವರ ವರದಿಯನ್ನು ನಿರೀಕ್ಷಿಸಲಾಗಿದೆ. ಅವರೆಲ್ಲರನ್ನೂ ಮುಂಜಾಗ್ರತಾ ಕ್ರಮವಾಗಿ ನಿಗದಿತ ಆಸ್ಪತ್ರೆಯಲ್ಲಿ ನಿಗಾದಲ್ಲಿರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.