ಅಕ್ಷತಾ ನಿಂಗನೂರ ಥ್ರೋಬಾಲ್ ಪಂದ್ಯಾವಳಿಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ
ಬೀಳಗಿ 10: ತಾಲೂಕಿನ ಹೊಸರೊಳ್ಳಿ ಗ್ರಾಮದ ಅಂತರ ರಾಜ್ಯ ಮಟ್ಟದ ಪ್ರಸಿದ್ದ ಕಬಡ್ಡಿ ಕ್ರೀಡಾ ಪಟು ಮಲ್ಲಪ್ಪ ನಿಂಗನೂರವರ ಸುಪುತ್ರಿ ಜಮಖಂಡಿ ತಾಲೂಕಿನ ಹಿಪ್ಪರಗಿ ಮುರಾರ್ಜಿ ದೇಸಾಯಿ ವಸತಿ ಪ್ರೌಢ ಶಾಲೆಯ 10 ನೇ ತರಗತಿ ವಿದ್ಯಾರ್ಥಿನಿ ಅಕ್ಷತಾ ನಿಂಗನೂರ ಥ್ರೋಬಾಲ್ ಪಂದ್ಯಾವಳಿಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ಕೋಲಾರ ಜಿಲ್ಲೆಯ ಕೆ.ಜಿ.ಎಫ್ ಬೇತ ಮಂಗಲದ ಗ್ರಾಮೀಣ ಪ್ರೌಢ ಹಾಗೂ ಪದವಿ ಪೂರ್ವ ಮತ್ತು ಪ್ರಥಮ ದರ್ಜೆಯ ಕಾಲೇಜ ಆವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ಪ್ರೌಢ ಶಾಲಾ ವಿಭಾಗದಲ್ಲಿ ನಡೆದ ರಾಜ್ಯ ಮಟ್ಟದ ಥ್ರೋ ಬಾಲ್ ಪಂದ್ಯಾವಳಿಯಲ್ಲಿ ಬೆಂಗಳೂರ ವಿಭಾಗದ ಪ್ರತಿಷ್ಟಿತ ಪ್ರೌಢ ಶಾಲೆಯ ವಿದ್ಯಾರ್ಥಿಗಳನ್ನು ಮಣಿಸಿ 105 ಅಂಕ ಪಡೆದು ಪ್ರಥಮ ಸ್ಥಾನ ಪಡೆದು ರಾಷ್ಟಮಟ್ಟದ ಚಾಂಪಿಯನ್ ಆಗಿ ಆಯ್ಕೆಯಾಗಿದ್ದಕ್ಕೆ ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ವಿ.ಪಿ ಹಿರೇಮಠ, ಮಾಜಿ ಸೈನಿಕ ಬೀಮಣ್ಣ ಕುಬಕಡ್ಡಿ, ಪಿ.ಕೆ.ಪಿ.ಎಸ್.ರೊಳ್ಳಿ ಅಧ್ಯಕ್ಷ ಪ್ರಕಾಶ ಚಿನಿವಾಲ ಹಾಗೂ ಗ್ರಾಮಸ್ಥರು ಸೇರಿ ಗ್ರಾಮದ ಕೀರ್ತಿಯನ್ನು ರಾಷ್ಟಮಟ್ಟದಲ್ಲಿ ಗುರುತಿಸುವಂತ ಸಾಧನೆ ಮಾಡಿದ್ದು ನಮ್ಮ ಗ್ರಾಮದ ಹೆಮ್ಮೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.