ಕೊವಿದ್‌-19: ಇರಾನ್‌ನಲ್ಲಿ 2,500 ದಾಟಿದ ಸಾವಿನ ಸಂಖ್ಯೆ

ಟೆಹ್ರಾನ್, ಮಾರ್ಚ್ 28,-ಇರಾನ್‌ನಲ್ಲಿ ಮಾರಕ ಕೊವಿದ್‌-19 ಸೋಂಕಿನಿಂದ  ಸಾವಿನ ಸಂಖ್ಯೆ 2,500 ದಾಟಿದೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ಶನಿವಾರ ದೃಢಪಡಿಸಿದೆ. ಮಾರಣಾಂತಿಕ ಕೊರೊನವೈರಸ್‌ ಸೋಂಕಿಗೆ ದೇಶದಲ್ಲಿ ಇದುವರೆಗೆ 2,517 ಮಂದಿ ಬಲಿಯಾಗಿದ್ದಾರೆ ಎಂದು ಇರಾನ್‌ ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿ ಕಿಯಾನುಷ್ ಜಹಾನ್ಪುರ್ ಹೇಳಿದ್ದಾರೆ.
ಇರಾನ್‌ನಲ್ಲಿ  ಕರೋನವೈರಸ್ ಸೋಂಕಿನ ದೃಢಪಟ್ಟ ಒಟ್ಟು ಪ್ರಕರಣಗಳ ಸಂಖ್ಯೆ ಶನಿವಾರ 35,408 ಕ್ಕೆ ತಲುಪಿದೆ. ದೃಢಪಟ್ಟ ಪ್ರಕರಣಗಳ ಪೈಕಿ 11,679 ಮಂದಿ ಚೇತರಿಸಿಕೊಂಡಿದ್ದಾರೆ. 3,206 ರೋಗಿಗಳ ಸ್ಥಿತಿ ಗಂಭೀರವಾಗಿದೆ ಎಂದು ಅವರು ತಿಳಿಸಿದ್ದಾರೆ.ಒಂದು ವಾರ ಕಾಲ ಸಾಮಾಜಿಕ ಅಂತರ ಯೋಜನೆಯನ್ನು ಜಾರಿಗೆ ತರಲು ಇರಾನ್‌ ಶುಕ್ರವಾರ ಆರಂಭಿಸಿದೆ. ನಗರಗಳ ನಡುವಿನ ಪ್ರಯಾಣದ ಮೇಲೆ ಮತ್ತಷ್ಟು ನಿರ್ಬಂಧಗಳು, ಉದ್ಯಾನವನಗಳು, ಈಜುಕೊಳಗಳು ಮತ್ತು ಮನರಂಜನಾ ಕೇಂದ್ರಗಳಂತಹ ಸಾರ್ವಜನಿಕ ಸ್ಥಳಗಳನ್ನು ಮುಚ್ಚುವುದು, ಕೂಟಗಳನ್ನು ನಿಷೇಧಿಸುವುದು ಮತ್ತು ಪೌರಕಾರ್ಮಿಕರ ಕೆಲಸದ ಸಮಯವನ್ನು ಕಡಿಮೆ ಮಾಡುವುದು ಈ ಯೋಜನೆಯಲ್ಲಿ ಸೇರಿದೆ.