ಕೋವಿಡ್ 19 : ಇಸ್ರೇಲ್ ನಲ್ಲಿ 25 ಜನರ ಸಾವು

ಟೆಲ್ ಅವಿವ್, ಏ 2 (ಸ್ಫುಟ್ನಿಕ್) ಕೋವಿಡ್ 19 ಸೋಂಕಿಗೆ ಇಸ್ರೇಲ್ ನಲ್ಲಿ ಕಳೆದೊಂದು ದಿನದಲ್ಲಿ ಐವರು ಬಲಿಯಾಗಿದ್ದು ಒಟ್ಟು 25 ಜನರು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ.ಬುಧವಾರ ಸ್ಥಳೀಯ ಕಾಲಮಾನ 20.00 ಗಂಟೆ ವೇಳೆಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 6092 ರಷ್ಟಿತ್ತು. 95 ಜನರ ಸ್ಥಿತಿ ಗಂಭೀರವಾಗಿದ್ದು 241 ಜನರನ್ನು ಆಸ್ಪತ್ರೆಯಿಂದ ವಾಪಸ್ ಮನೆಗೆ ಕಳುಹಿಸಲಾಗಿದೆ, ಕೊರೊನಾ ಸೋಂಕನ್ನು ವಿಶ್ವ ಆರೋಗ್ಯ ಸಂಸ್ಥೆ ಡಬ್ಲ್ಯು ಎಚ್ ಒ ಮಾರ್ಚ್ 11 ರಂದು ಸಾಂಕ್ರಾಮಿಕ ಎಂದು ಘೋಷಿಸಿತ್ತು. ಈವರೆಗೆ ಜಗತ್ತಿನಾದ್ಯಂತ 921000 ಸಾವಿರ ಜನರಿಗೆ ಈ ಸೋಂಕು ತಗುಲಿದ್ದು 46 ಸಾವಿರಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ.