ಇಸ್ಲಾಮಾಬಾದ್, ಏ.15,ಪಾಕಿಸ್ತಾನದಲ್ಲಿ ಸಾಂಕ್ರಾಮಿಕ ಕೊರೊನಾ ವೈರಸ್ (ಕೋವಿಡ್ 19) ಹರಡುತ್ತಲೇ ಇದ್ದು, ಬುಧವಾರ ದೇಶದಲ್ಲಿ ಸೋಂಕು ಪೀಡಿತ ಜನರ ಸಂಖ್ಯೆ 6000 ದಾಟಿದ್ದರೆ, 113 ಜನರು ಸಾವನ್ನಪ್ಪಿದ್ದಾರೆ.ಪಾಕಿಸ್ತಾನದಲ್ಲಿ ಮಂಗಳವಾರ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 5812 ಮತ್ತು ಸಾವಿನ ಸಂಖ್ಯೆ 100 ಆಗಿತ್ತು. ಬುಧವಾರ, ಸೋಂಕಿನ ಸಂಖ್ಯೆ 6146 ತಲುಪಿದೆ. ಪಾಕಿಸ್ತಾನದಲ್ಲಿ, ವೈರಸ್ ಸೋಂಕಿತರು ಮತ್ತು ಅದರಿಂದ ಸಾಯುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ.
ಪಂಜಾಬ್ ಪ್ರಾಂತ್ಯದಲ್ಲಿ, ಕೊರೊನಾ ನಿರಂತರವಾಗಿ ಭಯಾನಕ ರೂಪ ತೆಗೆದುಕೊಳ್ಳುತ್ತಿದೆ. ವೈರಸ್ ಇಲ್ಲಿ ಹೆಚ್ಚು ಹಾನಿ ಉಂಟುಮಾಡುತ್ತಿದೆ. ಪಂಜಾಬ್‌ನಲ್ಲಿ 2945 ಮಂದಿ ಸೋಂಕಿಗೆ ಒಳಗಾಗಿದ್ದರೆ 28 ಮಂದಿ ಸಾವನ್ನಪ್ಪಿದ್ದಾರೆ. ಕೊರೊನಾ ವೈರಸ್ ವಿಷಯದಲ್ಲಿ ಸಿಂಧ್ ಪ್ರಾಂತ್ಯ ಎರಡನೇ ಸ್ಥಾನದಲ್ಲಿದೆ. ಇಲ್ಲಿ 1668 ಜನರು ಸೋಂಕಿಗೆ ಒಳಗಾಗಿದ್ದರೆ. ಸಿಂಧ್ ಪ್ರಾಂತ್ಯದಲ್ಲಿ 41 ಮಂದಿ, ಖೈಬರ್ ಪಖ್ತುನ್‍ಖ್ವಾದಲ್ಲಿ, 38 ಜನರು ಸಾವನ್ನಪ್ಪಿದ್ದರೆ, ಖೈಬರ್ ಪಖ್ತುನ್‍ಖ್ವಾದಲ್ಲಿ 865 ಜನರು ಈ ಸೋಂಕಿನಿಂದ ಬಳಲುತ್ತಿದ್ದಾರೆ.ಬಲೂಚಿಸ್ತಾನದಲ್ಲಿ 248 ಜನರು ಸೋಂಕಿನಿಂದ ಬಳಲುತ್ತಿದ್ದರೆ, ಇಬ್ಬರು ಸಾವನ್ನಪ್ಪಿದ್ದಾರೆ. ಗಿಲ್ಗಿಟ್ ಬಾಲ್ಟಿಸ್ತಾನದಲ್ಲಿ 234 ಸೋಂಕಿತ ಮತ್ತು ಮೂರು ಸಾವುಗಳು ಸಂಭವಿಸಿವೆ. ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಈವರೆಗೆ 140 ಜನರು ಬಾಧಿತರಾಗಿದ್ದಾರೆ ಮತ್ತು ಒಬ್ಬರು ಮೃತಪಟ್ಟಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ 46 ಸೋಂಕಿತರಿದ್ದಾರೆ.