ಕೋವಿಡ್ 19: ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ

ಗದಗ ಎ.08: ನಿವೃತ್ತ ನ್ಯಾಯಮೂತರ್ಿಗಳಾದ ಅರಳಿ ನಾಗರಾಜ ಅವರು ಕೊರೊನಾ ವೈರಸ್ ತಡೆ ಕುರಿತಂತೆ ಮುಖ್ಯ ಮಂತ್ರಿಯವರ ಕೊವಿಡ್-19  ಪರಿಹಾರ ನಿಧಿಗೆ  50,000/-ರೂ.ಗಳ ದೇಣಿಗೆಯನ್ನು ನೀಡಿದ್ದಾರೆ. ಗದಗ ಜಿಲ್ಲಾಡಳಿತ ಭವನದಲ್ಲಿ  ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರಿಗೆ ಈ ಕುರಿತ ಚೆಕನ್ನು ನೀಡಿದರು. ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರರಾದ ಎಸ್.ಜಿ.ಪಲ್ಲೇದ ಉಪಸ್ಥಿತರಿದ್ದರು.