ಜಕಾರ್ತಾ, ಏಪ್ರಿಲ್ 6,ಇಂಡೋನೇಷ್ಯಾದಲ್ಲಿ ಸೋಮವಾರದ ವೇಳೆಗೆ ಕೊವಿದ್-19 ಸೋಂಕಿನಿಂದ ಸಾವನ್ನಪ್ಪಿದ್ದವರ ಸಂಖ್ಯೆ 200 ಮೀರಿದೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ. ಕರೋನವೈರಸ್‌ನಿಂದ ಈವರೆಗೆ ಒಟ್ಟು 209 ಜನರು ಸಾವನ್ನಪ್ಪಿದ್ದು, ದೇಶದಲ್ಲಿ ದೃಢಪಟ್ಟ ಪ್ರಕರಣಗಳ ಸಂಖ್ಯೆ 2,491 ಕ್ಕೆ ಏರಿದೆ. 192 ರೋಗಿಗಳು ಮಾರಕ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ ಎಂದು ಕೊವಿದ್-19 ಸಂಬಂಧಿತ ವಿಷಯಗಳ ಸರ್ಕಾರದ ವಕ್ತಾರ ಅಚ್ಮದ್ ಯೂರಿಯಾಂಟೊ ಸೋಮವಾರ ತಿಳಿಸಿದ್ದಾರೆ.
ಸುಮಾರು ಒಂದು ಕೋಟಿ ಜನಸಂಖ್ಯೆ ಜನಸಂಖ್ಯೆ ಹೊಂದಿರುವ ರಾಜಧಾನಿ ಜಕಾರ್ತಾದಲ್ಲಿ ಅತಿ ಹೆಚ್ಚು 99 ಸಂಭವಿಸಿವೆ. ನಂತರದ ಸ್ಥಾನಗಳಲ್ಲಿ ಪಶ್ಚಿಮ ಜಾವಾ 29, ಮಧ್ಯ ಜಾವಾ 22, ಬ್ಯಾಂಟನ್ 17, ಪೂರ್ವ ಜಾವಾ 14 ಹಾಗೂ ಉಳಿದ ಪ್ರಕರಣಗಳು ದೇಶದ ಇತರ ಪ್ರದೇಶಗಳಿಂದ ವರದಿಯಾಗಿವೆ.ಕೊವಿದ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಇಂಡೋನೇಷ್ಯಾ ಅಧ್ಯಕ್ಷ ಜೋಕೊ ವಿಡೊಡೊ ದೇಶದಲ್ಲಿ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಘೋಷಿಸಿದ್ದಾರೆ. ಪ್ರಕರಣಗಳು ಪತ್ತೆಯಾದ ಪ್ರದೇಶಗಳಲ್ಲಿ ಅಧಿಕಾರಿಗಳು ತ್ವರಿತ ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ. ಕರೋನವೈರಸ್ ಮತ್ತಷ್ಟು ಹರಡುವುದನ್ನು ತಡೆಗಟ್ಟಲು ಸಾರ್ವಜನಿಕರು ಯಾವಾಗಲೂ ಮುಖಗವಸುಗಳನ್ನು ಧರಿಸಲು ಆದೇಶಿಸಲಾಗಿದೆ.ಗಲಾಂಗ್ ದ್ವೀಪದ 16 ಹೆಕ್ಟೇರ್ ಪ್ರದೇಶದಲ್ಲಿ ಸರ್ಕಾರ ಕೊವಿದ್-19 ತುರ್ತು ಆಸ್ಪತ್ರೆಯನ್ನು ನಿರ್ಮಿಸಿದೆ. ಇದು ಸೋಮವಾರದಿಂದ ಕಾರ್ಯನಿರ್ವಹಿಸಲು ಆರಂಭಿಸಿದೆ.