ಕೋವಿಡ್-19: ಬಾಂಗ್ಲಾದೇಶದಲ್ಲಿ 120 ಸಾವು

ಢಾಕಾ, ಏ.22,ಬಾಂಗ್ಲಾದೇಶದಲ್ಲಿ ಕೊರೊನಾ ವೈರಸ್ ಕಾರಣದಿಂದಾಗಿ ಸಾವನ್ನಪ್ಪಿದ್ದವರ ಸಂಖ್ಯೆ 120ಕ್ಕೆ ಏರಿದೆ. ಇನ್ನು 3,772 ಜನರು ಸೋಂಕಿಗೆ ಒಳಪಟ್ಟಿದ್ದಾರೆ. 390 ಹೊಸ ಪ್ರಕರಣಗಳು ದಾಖಲಾಗಿವೆ ಎಂದು ಆರೋಗ್ಯ ಇಲಾಖೆ ಅಧಿಕಾರಿ ನಸೀಮ್ ಸುಲ್ತಾನ್ ತಿಳಿಸಿದ್ದಾರೆ. ಕಳೆದ 24 ಗಂಟೆಗಳಲ್ಲಿ 3,096 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 3,772 ಪ್ರಕರಣಗಳು ದಾಖಲಾಗಿವೆ. ಏಳು ಪುರುಷರ ಹಾಗೂ ಮೂರು ಮಹಿಳೆಯರು ಸೇರಿದಂತೆ, ಸಾವಿನ ಸಂಖ್ಯೆ 120ಕ್ಕೆ ಏರಿದೆ ಎಂದು ತಿಳಿಸಿದ್ದಾರೆ. ಬಾಂಗ್ಲಾದೇಶದಲ್ಲಿ ಮೊದಲ ಕೊರೊನಾ ಪ್ರಕರಣ ಮಾರ್ಚ್ 8ರಂದು ದಾಖಲಾಗಿತ್ತು. ದೇಶದಲ್ಲಿ ಕೋವಿಡ್-19 ಪ್ರಕರಣಗಳು ಗಣನೀಯವಾಗಿ ಏರಿಕೆ ಆಗುತ್ತಿದೆ. ಕಳೆದ ವರ್ಷದ ಡಿಸೆಂಬರ್ ನಲ್ಲಿ ಚೀನಾದ ವುಹಾನ್ ನಲ್ಲಿ ಸೋಂಕು ಕಾಣಿಸಿಕೊಂಡಿತ್ತು. ವಿಶ್ವದಾದ್ಯಂತ ಮಹಾಮಾರಿ ಸೋಂಕಿನಿಂದ 1,77,780 ಸಾವನ್ನಪ್ಪಿದ್ದಾರೆ. ಅಲ್ಲದೆ 25,65,768 ಪ್ರಕರಣಗಳು ದಾಖಲಾಗಿದೆ.