ಬರ್ಲಿನ್, ಮೇ 8, ಕಳೆದ 24 ಗಂಟೆಗಳಲ್ಲಿ ಜರ್ಮನಿಯಲ್ಲಿ 1,209 ಕೊವಿಡ್-19 ಪ್ರಕರಣ ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,67,300 ತಲುಪಿದೆ ಎಂದು ರಾಬರ್ಟ್ ಕೋಚ್ ಸಂಸ್ಥೆ ಶುಕ್ರವಾರ ಹೇಳಿದೆ. ಗುರುವಾರ 147 ಜನ ಮಹಾಮಾರಿಯಿಂದ ಜೀವಕಳೆದುಕೊಂಡಿದ್ದು, ಸತ್ತವರ ಸಂಖ್ಯೆ 7,226ಕ್ಕೆ ಏರಿದೆ. ದೇಶದಲ್ಲಿ 1.41 ಲಕ್ಷ ಜನರು ಚೇತರಿಸಿಕೊಂಡಿದ್ದಾರೆ ಎಂದು ಮಾಹಿತಿ ಬಹಿರಂಗಗೊಂಡಿದೆ. ಮಾರ್ಚ್ 11 ರಂದು ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್-19 ವನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಿತ್ತು. ಇಲ್ಲಿಯವರೆಗೆ, ವಿಶ್ವಾದ್ಯಂತ 3.8 ದಶಲಕ್ಷಕ್ಕೂ ಹೆಚ್ಚು ಜನರು ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದಾರೆ. 2,69,000 ಕ್ಕೂ ಹೆಚ್ಚು ಸಾವುನೋವುಗಳು ಸಂಭವಿಸಿವೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.