ಬರ್ಲಿನ್, ಏಪ್ರಿಲ್ 12,ಜರ್ಮನಿಯಲ್ಲಿ ಭಾನುವಾರ ಬೆಳಿಗ್ಗೆ ವರೆಗೆ ಒಟ್ಟು 1,20,479 ಕೊರೊನಾವೈರಸ್ ಪ್ರಕರಣಗಳು ದೃಢಪಟ್ಟಿವೆ ಎಂದು ವರದಿಯಾಗಿದೆ.ಕಳೆದ 24 ಗಂಟೆಗಳಲ್ಲಿ 2,821 ಪ್ರಕರಗಳು ದೃಢಪಟ್ಟಿವೆ ಎಂದು ಅಲ್ಲಿನ ರೋಗ ನಿಯಂತ್ರಣ ಸಂಸ್ಥೆಯಾದ ರಾಬರ್ಟ್ ಕೋಚ್ ಸಂಸ್ಥೆ ತಿಳಿಸಿದೆ.ದೇಶದಲ್ಲಿ ಹೊಸ 129 ಸಾವು ಪ್ರಕರಣಗಳೊಂದಿಗೆ ಸಾವಿನ ಸಂಖ್ಯೆ 2,673 ಕ್ಕೆ ತಲುಪಿದೆ. ಸೋಂಕಿನಿಂದ ಒಟ್ಟು 60,200 ಜನರು ಚೇತರಿಸಿಕೊಂಡಿದ್ದಾರೆ. ಗುಣಮಖರಾದವರ ಸಂಖ್ಯೆಯಲ್ಲಿ ಸುಧಾರಣೆ ಕಂಡು ಬಂದಿದ್ದು, ಹಿಂದಿನ ದಿನಕ್ಕಿಂತ 2,700 ಕ್ಕೂ ಹೆಚ್ಚು ರೋಗಿಗಳು ಚೇತರಿಸಿಕೊಂಡಿದ್ದಾರೆ ಎಂದು ಸಂಸ್ಥೆ ತಿಳಿಸಿದೆ. ಯೂರೋಪ್ ನಲ್ಲಿ ಇಟಲಿ, ಸ್ಪೇನ್, ಫ್ರಾನ್ಸ್ ನಂತರ ಮಾರಕ ಸೋಂಕಿನಿಂದ ಹೆಚ್ಚು ಬಾಧಿತವಾಗಿರುವ ಜರ್ಮನಿಯಲ್ಲಿ ಸೋಂಕು ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತರಲಾಗಿದೆ.