ಗುಳೇದಗುಡ್ಡ: ಗುಳೇದಗುಡ್ಡ ಸಮೀಪದ ಕೋಟೆಕಲ್ ಗ್ರಾಮದ ಕೆರೆಯಲ್ಲಿ ಬಿಟ್ಟಿದ್ದ 18ಸಾವಿರ ಮೌಲ್ಯದ ಮೀನಿನ ಮರಿಗಳು ಸಂಶಯಾಸ್ಪದವಾಗಿ ಮೃತಪಟ್ಟ ಘಟನೆ ರವಿವಾರ ಜರುಗಿದ್ದು, ಇದರಿಂದ ಗ್ರಾಮಸ್ಥರು ಕೆರೆಯಲ್ಲಿನ ನೀರನ್ನು ಜಾನುವಾರುಗಳಿಗೆ ಕುಡಿಸಲು ಭಯಪಡುತ್ತಿದ್ದಾರೆ.
ಗ್ರಾಮದ ಕೆರೆಯು ಅಂದಾಜು 8ಎಕರೆ ಹೊಂದಿದ್ದು, ಕಳೇದ ನಾಲ್ಕು ವರ್ಷಗಳಿಂದ ಮಳೆಯಾಗದೇ ಕೆರೆ ಬತ್ತಿ ಹೋಗಿತ್ತು. ಈ ಬಾರಿ ಉತ್ತಮ ಮಳೆಯಾಗಿದ್ದರಿಂದ ಕೆರೆಗೆ ನೀರು ಹರಿದು ಬಂದಿತ್ತು. ಆದರೆ ಪಂಚಾಯಿತಿ ಅನುಮತಿ ಪಡೆಯದೇ ಕೆರೆಯಲ್ಲಿ ಕಾಟಾಪೂರ ಗ್ರಾಮದ ಮೀನುಗಾರರೊಬ್ಬರು ಕಳೇದ 10-15ದಿನಗಳ ಹಿಂದೆ 18ಸಾವಿರ ಮೌಲ್ಯದ ಮೀನಿನ ಮರಿಗಳನ್ನು ತಂದು ಬಿಟ್ಟಿದ್ದರು, ಆದರೆ ರವಿವಾರ ಏಕಾಏಕಿ ಮೀನಿನ ಮರಿಗಳು ಸತ್ತಿವೆ. ಮೀನುಗಳು ಸತ್ತಿರುವದರಿಂದ ಕೆರೆಯಲ್ಲಿ ನೀರು ಕಲುಷಿತಗೊಂಡಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ವಿಷ ಬೆರಕೆ ಅನುಮಾನ: ಗ್ರಾಮದ ಕೆರೆಯಲ್ಲಿ ಕಾಟಾಪುರದ ಮೀನುಗಾರರು ಮೀನುಗಳನ್ನು ಬಿಟ್ಟಿದ್ದಾರೆ. ಏಕಾಏಕಿ ಮೀನುಗಳು ಸಾಯುತ್ತಿವೆಂದರೆ ಕೆರೆಯಲ್ಲಿರುವ ಮೀನುಗಳು ಕೊಲ್ಲಬೇಕೆಂಬ ಉದ್ದೇಶದಿಂದ ಕೆರೆಗೆ ಕಿಡಿಗೇಡಿಗಳು ವಿಷ ಬೆರೆಸಿರೆಂಬಕೆಂಬ ಅನುಮಾನ ಮೂಡಿದ್ದು, ಇದರಿಂದ ಗ್ರಾಮಸ್ಥರಲ್ಲಿ ಆತಂಕ ಶುರವಾಗಿದೆ. ಅಲ್ಲದೇ ತಮ್ಮ ಜಾನುವಾರುಗಳಿಗೂ ಕೆರೆ ನೀರು ಕುಡಿಸಲು ಭಯಪಡುತ್ತಿದ್ದಾರೆ.
ಗ್ರಾಮದ ಕೆರೆಯನ್ನು ನರೇಗಾ ಯೋಜನೆಯಲ್ಲಿ ಅಂದಾಜು 70-80ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗಿದೆ. ಇಲ್ಲಿ ಉದ್ಯಾನವ ನಿಮರ್ಿಸಬೇಕೆಂದು ಪಿಡಿಓ ಅವರಿಗೆ ಮನವಿ ಮಾಡಿದ್ದೇವು. ಆದರೆ ಆ ಕೆಲಸ ಮಾಡಿಲ್ಲ. ಈಗ ಕೆರೆಯಲ್ಲಿ ಬಿಡಲಾಗಿರುವ ಮೀನಿನ ಮರಿಗಳು ಮೃತಪಟ್ಟಿದ್ದು, ಮೀನುಗಳು ಸಾಯಲು ಕಾರಣ ಏನು ಎಂಬುದನ್ನು ಪತ್ತೆ ಹಚ್ಚಬೇಕು. ಅಲ್ಲದೇ ಮೀನುಗಳು ಸತ್ತು ಹೋಗಿರುವದರಿಂದ ಕೆರೆ ನೀರು ಕಲುಷಿತಗೊಂಡಿದೆ. ಸತ್ತ ಮೀನುಗಳನ್ನು ತೆರವುಗೊಳಿಸಿ, ಕೆರೆಯನ್ನು ಸ್ವಚ್ಛಗೊಳಿಸಿ, ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಬೇಕು. ಪಂಚಾಯಿತಿ ಅನುಮತಿ ಪಡೆಯದೇ ಮೀನುಗಳನ್ನು ಬಿಟ್ಟವರ ಮೇಲೆ ಕ್ರಮಕೈಗೊಳ್ಳಬೇಕೆಂದು ಗ್ರಾಮದ ಸಂಗಪ್ಪ ಆಲೂರ, ಹುಚ್ಚಪ್ಪ ಕಡಪಟ್ಟಿ, ಬಸವರಾಜ ಯಡಹಳ್ಳಿ, ಈರಯ್ಯ ಬೂದಿಹಾಳಮಠ, ಹುಚ್ಚಯ್ಯ ಬೂದಿಹಾಳಮಠ, ಮಹೇಶ ಅಬಕಾರಿ, ಈಶ್ವರಪ್ಪ ದಾಸರ ಸೇರಿದಂತೆ ಇತರರು ಆಗ್ರಹಿಸಿದ್ದಾರೆ.
ಪಂಚಾಯಿತಿ ಅಲಕ್ಷ್ಯ: ಕೆರೆಯಲ್ಲಿ ಮೀನು ಬಿಡಬೇಕೆಂದರೆ ಪಂಚಾಯಿತಿಯವರು ಟೆಂಡರ್ ಕರೆಯಬೇಕು. ಇಲ್ಲವೇ ಅನುಮತಿ ಪಡೆಯಬೇಕು. ಆದರೆ ಯಾವುದೇ ಅನುಮತಿ ಪಡೆಯದೇ ಕೆರೆಯಲ್ಲಿ ಹೇಗೆ ಮೀನುಗಳನ್ನು ಬಿಟ್ಟಿದ್ದಾರೆ. ಮೀನು ಬಿಟ್ಟ ಬಗ್ಗೆ ಪಂಚಾಯಿತಿಗೆ ತಿಳಿದಿಲ್ಲವೆಂದರೆ ಪಂಚಾಯಿತಿಯವರ ನಿರ್ಲಕ್ಷ್ಯವಿದೆ. ಮೀನು ಬಿಡಲು ಯಾರು ಅನುಮತಿ ನೀಡಿದ್ದಾರೆ. ಇದರ ಹಿಂದೆ ಅವ್ಯವಹಾರ ನಡೆದಿರಬಹುದು. ಕೆರೆಯಲ್ಲಿ ಬಿಟ್ಟ ಮೀನುಗಳು ದೀಢೀರನೇ ಸಾಯುತ್ತಿವೆ ಎಂದರೆ ಮೀನುಗಳು ಸಾಯಬೇಕೆಂದು ಯಾರಾದರೂ ಅದಕ್ಕೆ ವಿಷ ಬೆರಸಿರಬೇಕು. ಇಲ್ಲದಿದ್ದರೇ ಅವುಗಳು ಹೇಗೆ ಸಾಯುತ್ತವೆ. ಆ ನೀರನ್ನು ಜಾನುವಾರುಗಳು ಕುಡಿದು, ಅವುಗಳಿಗೆ ಏನಾದರೂ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.
ಆರೋಗ್ಯ ಕಾಳಜಿ ವಹಿಸಿ: ಡಾ.ಪಾಟೀಲ
ಗುಳೇದಗುಡ್ಡ: ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗೆಗೆ ಕಾಳಜಿವಹಿಸಬೇಕು. ಶುದ್ಧ ಗಾಳಿ, ಸ್ವಚ್ಚತೆ, ಸುಂದರ ಪರಿಸರ ನಿಮರ್ಿಸುವ ಮೂಲಕ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಪಟ್ಟಣದಲ್ಲಿ ಆಯೋಜಿಸಿರುವ ಈ ಶಿಬಿರದ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಬಾಗಲಕೋಟೆಯ ಕುಮಾರೇಶ್ವರ ಆಸ್ಪತ್ರೆಯ ಸಂಪಕರ್ಾಧಿಕಾರಿ ಡಾ.ಸಿ.ಎಸ್.ಪಾಟೀಲ ಹೇಳಿದರು.
ಪಟ್ಟಣದ ಅಟಲ್ ಬಿಹಾರಿ ವಾಜಪೇಯಿ ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ರಾಂದಡ ಎಂಟರ್ಪ್ರೈಜಿಸ್, ಬಾಗಲಕೋಟದ ಕುಮಾರೇಶ್ವರ ಆಸ್ಪತ್ರೆ ಸಂಯುಕ್ತವಾಗಿ ಪಟ್ಟಣದ ಸರಸ್ವತಿ ವಿದ್ಯಾ ಮಂದಿರದಲ್ಲಿ ಬಾನುವಾರ ಹಮ್ಮಿಕೊಂಡ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಘನಶ್ಯಾಮದಾಸಜೀ ರಾಠಿ ಅಧ್ಯಕ್ಷತೆ ವಹಿಸಿದ್ದರು. ರಂಗಪ್ಪ ಶೇಬಿನಕಟ್ಟಿ, ಮಾಜಿ ಶಾಸಕ ರಾಜಶೇಖರ ಶೀಲವಂತ, ಮಧುಸುಧನ ರಾಂದಡ, ಸಿದ್ದು ಅರಕಾಲಚಿಟ್ಟಿ, ದೀಪಕ ನೇಮದಿ, ಮಲ್ಲಿಕಾಜರ್ುನ ಶೀಲವಂತ, ರಘುನಾಥದಾಸ ರಾಂದಡ, ಸಂಗಪ್ಪ ಹುನಗುಂದ, ಪುರಸಭೆ ಸದಸ್ಯ ಪ್ರಶಾಂತ ಜವಳಿ, ಗಣೇಶ ಶೀಲವಂತ, ಡಾ.ಶ್ರೀಕಾಂತ ಸೋನಿ, ಲಕ್ಷ್ಮೀ ಬ್ಯಾಂಕ್ ಚೇರಮನ್ ಸಂಪತ್ತಕುಮಾರ ರಾಠಿ, ಸಿದ್ದರಾಮಯ್ಯ ಪುರಾಣಿಕಮಠ, ಗೋವಿಂದ ರಾಂದಡ, ಮಹಾದೇವ ಜಗತಾಪ, ಸಂಜೀವ ಕಾರಕೂನ, ರಾಜು ಜಿಲರ್ಿ, ಮೋಹನ ಮಲಜಿ, ವೀರುಪಾಕ್ಷಪ್ಪ ಅಳ್ಳಿಮಟ್ಟಿ, ಬಾಳಕೃಷ್ಣ ನಿರಂಜನ, ಕಮಲಕಿಶೋರ ತಾಪಡಿಯಾ, ಕಮಲಕಿಶೋರ ಮಾಲಪಾಣಿ ಸೇರಿದಂತೆ ಇತರರು ಪಾಲ್ಗೋಂಡಿದ್ದರು.
ತಜ್ಞ ವೈದ್ಯರು ಹೃದಯ ರೋಗ, ಎಲುಬು ಕೀಲು ವ್ಯಾದಿ, ಸಕ್ಕರೆ ಖಾಯಿಲೆ, ಚಿಕ್ಕ ಮಕ್ಕಳ ಆರೋಗ್ಯ ತಪಾಸಣೆ, ಚರ್ಮ ರೋಗ, ಕೀವಿ ಮೂಗು ಗಂಟಲು ಹೀಗೆ ಎಲ್ಲ ರೀತಿಯ ಆರೋಗ್ಯ ತಪಾಸಣೆಯನು ಶಿಬಿರದಲ್ಲಿ ಉಚಿತವಾಗಿ ಮಾಡಲಾಯಿತು.