ಟ್ರಂಪ್ ಗೆ ಆಕರ್ಷಕ ಪತ್ರ ಕಳುಹಿಸಿದ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್

  ವಾಷಿಂಗ್ಟನ್, ಆ 10     ಡೆಮಾಕ್ರಟಿಕ್ ಪೀಪಲ್ಸ್ ರಿಪಬ್ಲಿಕ್ ಕೋರಿಯಾದ ಅಧ್ಯಕ್ಷ ಕಿಮ್ ಜಾಂಗ್ ಉನ್ ಅವರು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಆಕರ್ಷಕ ಪತ್ರವೊಂದನ್ನು ಬರೆದಿದ್ದಾರೆ   ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಕಿಮ್ ಅವರು ತಮಗೆ ಕಳುಹಿಸಿದ ಪತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.  ಕಿಮ್ ಜಾಂಗ್ ಅವರು ಗುರುವಾರ ತಮಗೆ ಪತ್ರವೊಂದನ್ನು ಬರೆದಿದ್ದು, ಅದು ಶುಕ್ರವಾರ ತಮಗೆ ತಲುಪಿದೆ. ಮೂರು ಪುಟಗಳ ಪತ್ರ ಬಹು ಆಕರ್ಷಕವಾಗಿದ್ದು, ಪತ್ರದಲ್ಲಿ ಅಮೆರಿಕಾ ಹಾಗೂ ದಕ್ಷಿಣ ಕೊರಿಯಾ ನಡುವಿನ ಸಮರಾಭ್ಯಾಸದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ ಎಂದರು.   ಕಿಮ್ ತಮ್ಮೊಂದಿಗೆ ಮತ್ತೊಂದು ಸುತ್ತಿನ ಸಭೆ ನಡೆಸಲಿದ್ದಾರೆ ಎಂದು ತಿಳಿಸಿದ ಟ್ರಂಪ್,  ಸಭೆ ಯಾವಾಗ ಎಲ್ಲಿ ನಡೆಯಲಿದೆ ಎಂಬುದನ್ನು ಮಾತ್ರ ಬಹಿರಂಗಪಡಿಸಲಿಲ್ಲ.  

  ಡೊನಾಲ್ಡ್ ಟ್ರಂಪ್ ಹಾಗೂ ಕಿಮ್ ಜಾಂಗ್ ಉನ್ ನಡುವೆ ಪ್ರಸಕ್ತ ಸಾಲಿನ ಫೆಬ್ರವರಿ ತಿಂಗಳಿನಲ್ಲಿ ಪರಮಾಣು ನಿಶ್ಶಸ್ತ್ರೀಕರಣಕ್ಕೆ ಸಂಬಂಧಿಸಿದಂತೆ ವಿಯಟ್ನಾಂನಲ್ಲಿ ಸಭೆ ನಡೆದಿತ್ತಾದರೂ ಸಭೆಯಲ್ಲಿ ಯಾವುದೇ ಪರಿಣಾಮಕಾರಿ ತೀಮರ್ಾನಗಳನ್ನು ಕೈಗೊಳ್ಳಲು ಸಾಧ್ಯವಾಗಿರಲಿಲ್ಲ.  ಆ ನಂತರ ಇಬ್ಬರ ನಡುವೆ ಯಾವುದೇ ಭೇಟಿ ನಡೆದಿರಲಿಲ್ಲ.