ಕೋವಿ, ಗೊಂಡಬಾಳ ಮತ್ತು ನದಾಫ್ ಸೇರಿ ಹಲವರಿಗೆ ಕೊಪ್ಪಳ ಐಸಿರಿ ಪ್ರಶಸ್ತಿ ಪ್ರದಾನ
Koppal Isiri awards conferred on Kovi, Gondabala and Nadaf, among others
ಕೊಪ್ಪಳ 24: ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಸಹ ನಗರದ ಸಾಹಿತ್ಯ ಭವನ ದಲ್ಲಿ ಶನಿವಾರ ಸಂಜೆ ಜರುಗಿದ ಕೊಪ್ಪಳ ಜಿಲ್ಲಾ ಉತ್ಸವ ದಲ್ಲಿ ವಿವಿಧ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ ಹಲವೂ ಜನ ಗಣ್ಯರಿಗೆ ಜಿಲ್ಲಾ ಉತ್ಸವ ಹಾಗೂ ತಿರುಳುಗನ್ನಡ ಸಾಂಸ್ಕೃತಿಕ ಸಮ್ಮೇಳನ ದ ಕಾರ್ಯಕ್ರಮದಲ್ಲಿ ಕೊಪ್ಪಳ ಐಸಿರಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ತಾಲೂಕಿನ ಕಿನ್ನಾಳ ಗ್ರಾಮ ಪಂಚಾಯಿತಿಯ ಸದಸ್ಯರಾದ ಹನುಮೇಶ್ ಕೋವಿ ಯವರ ಉತ್ತಮ ಜನಪರ ಸೇವೆಗಾಗಿ, ವೃತ್ತಿ ಶಿಕ್ಷಣ ಸೇವೆಗಾಗಿ ನಿವೃತ್ತಿ ವೃತ್ತಿ ಶಿಕ್ಷಕ ಅಮೀರ್ ಹಮ್ಜಾ ನದಾಫ್ ಅವರ ವೃತ್ತಿ ಶಿಕ್ಷಣದ ಉತ್ತಮ ಸೇವೆಗಾಗಿ, ವಾಣಿಜ್ಯ ಮತ್ತು ಸಮಾಜ ಸೇವೆಗಾಗಿ ಉದ್ಯಮಿ ಯಾಗಿರುವ ಲಕ್ಷ್ಮಿ ಕಲ್ಯಾಣ ಮಂಟಪದ ಪ್ರೊ, ರಾಮಚಂದ್ರ್ಪ ಅಡ್ಡೆದಾರ್ ರವರಿಗೆ, ಅವರ ಪರವಾಗಿ ಅವರ ಸುಪುತ್ರ ಸಂಜಯ್ ಅಡ್ಡದಾರ್ ರವರಿಗೆ ಹಾಗೂ ತಾಂತ್ರಿಕ ಮತ್ತು ಸುರಕ್ಷಾ ಸೇವೆಗಾಗಿ ಹೊಸಪೇಟೆ ಸ್ಟೀಲ್ ಕಲ್ಯಾಣಿ ಕಾರ್ಖಾನೆಯ ಸಹಾಯಕ ಫೋರ್ ಮೆನ್ ರಾಚಪ್ಪ ಗೊಂಡಬಾಳ ರವರ ಉತ್ತಮ ಸೇವೆಗಾಗಿ,, ಉತ್ತಮ ಪ್ರವಾಸಿ ತಾಣದ ಸೇವೆಗಾಗಿ ತಾಲೂಕಿನ ಬಸಾಪುರ್ ಲಿಯೋ ಉಡನ್ ರಿಸಾರ್ಟ್ ನ ಪ್ರೊ, ಶೀರೀಶ್, ಪಿ, ಹಾಗೂ ಸರ್ಕಾರಿ ನೌಕರರ ಸಂಘ ಕೊಪ್ಪಳ ಜಿಲ್ಲಾ ಘಟಕದ ವ್ಯವಸ್ಥಾಪಕ ಯಶವಂತ್ ಕುಮಾರ್ ರವರ ಉತ್ತಮ ಸೇವೆ ಅಲ್ಲದೆ ಕಿನ್ನಾಳ ಗ್ರಾಮದ ನಿವಾಸಿ ಜನಸಾಮಾನ್ಯರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾದ ವೀರೇಶ್ ,ಪಿ ,ಕಲಾಲ್ (ಗುಜರೆ ಕಾರ್) ರವರುಗಳಿಗೆ ಕೊಪ್ಪಳ ಜಿಲ್ಲಾ ನಾಗರೀಕರ ವೇದಿಕೆ ವತಿಯಿಂದ ಕೊಡ ಮಾಡುವ ಕೊಪ್ಪಳ ಐಸಿರಿ ಪ್ರಶಸ್ತಿಯನ್ನು ಶನಿವಾರದಂದು ಪ್ರಧಾನ ಮಾಡಲಾಯಿತು ಹಾಗೂ ಎಲ್ಲಾ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಸಂಘಟಕ ಹಾಗೂ ಸಂಚಾಲಕ ಮಹೇಶ್ ಬಾಬು ಸುರ್ವೆ ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ಅಧ್ಯಕ್ಷರಾದ ಜಿಎಸ್ ಗೋನಾಳ ವೇದಿಕೆಯ ರಾಜ್ಯ ಉಪಾಧ್ಯಕ್ಷ ಸಿದ್ದಪ್ಪ ಹಂಚಿನಾಳ ತಿರುಳುಗನ್ನಡ ಪ್ರತಿಷ್ಠಾನದ ಜಿಲ್ಲಾ ಅಧ್ಯಕ್ಷ ಎಂ ಸಾಧಿಕ ಅಲಿ ವೇದಿಕೆ ಗೌರವಾಧ್ಯಕ್ಷ ಎಂ ಬಿ ಅಳವಂಡಿ ಶ್ರೀ ಅಕ್ಕಮಹಾದೇವಿ ಮಹಿಳಾ ಮಂಡಳದ ನಿಕಟ ಪೂರ್ವ ಅಧ್ಯಕ್ಷ ರಾದ ಕೋಮಲ ಕುದುರೆಮೋತಿ ನೂತನ ಅಧ್ಯಕ್ಷರಾದ ಮಧು ಪಂಡಿತ್ ಹಡಗಲಿ ನೂತನ ಉಪಾಧ್ಯಕ್ಷರಾದ ಸುಧಾ ಚಕ್ಕಿ, ಸಾಹಿತಿ ಮಹೇಶ್ ಮನ್ನಾಪುರ, ಸಂಗೀತ ಕಲಾವಿದೆ ಅನ್ನಪೂರ್ಣಮ್ಮ ಮನ್ನಾಪುರ, ಉಮೇಶ್ ಸುರುವೇ ಪತ್ರಕರ್ತರಾದ ಶಿವಕುಮಾರ್ ಹಿರೇಮಠ, ಸಿದ್ದು ಹಿರೇಮಠ ಚನ್ನಬಸಪ್ಪ ಕೊಟ್ಟಿಗೆ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 