ವಿವಿಧೆಡೆ ಕೊಪ್ಪಳ ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ ಭೇಟಿ: ರೈತರೊಂದಿಗೆ ಚರ್ಚೆ
Koppal Deputy Commissioner Suresh B. Itnal visits various places: Discussions with farmers
ಕೊಪ್ಪಳ 17 : ಕೊಪ್ಪಳ ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ ಅವರು ಗುರುವಾರ ಕೊಪ್ಪಳ ಜಿಲ್ಲೆಯ ವಿವಿಧ ಗ್ರಾಮಗಳ ಹಣ್ಣು ಬೆಳೆಗಳ ಸಂಸ್ಕರಣ ಘಟಕಗಳು, ಕೃಷಿ ಹೊಂಡ ಮತ್ತು ದ್ರಾಕ್ಷಿ ಹಾಗೂ ದಾಳಿಂಬೆ ಬೆಳೆಗಳ ವೀಕ್ಷಣೆ ಮಾಡಿ ರೈತರೊಂದಿಗೆ ಚರ್ಚಿಸಿದರು.
ಕೊಪ್ಪಳ ತಾಲ್ಲೂಕಿನ ಮೆತಗಲ್ ಗ್ರಾಮದಲ್ಲಿ ನಬಾರ್ಡ ವತಿಯಿಂದ ನಿರ್ಮಿಸುತ್ತಿರುವ ಹಣ್ಣು ಬೆಳೆಗಳ ಸಂಸ್ಕರಣ ಘಟಕಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ, ಪರೀಶೀಲನೆ ನಡೆಸಿದರು. ನಂತರ ಯಲಬುರ್ಗಾ ತಾಲ್ಲೂಕಿನ ಮಾಟಲದಿನ್ನಿ ಗ್ರಾಮದ ರೈತರ ಕೃಷಿ ಭಾಗ್ಯ ಯೋಜನೆ, ಉದ್ಯೋಗ ಖಾತ್ರಿ ಯೋಜನೆ ಮತ್ತು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಕೃಷಿ ಹೊಂಡ ಮತ್ತು ದ್ರಾಕ್ಷಿ ಹಾಗೂ ದಾಳಿಂಬೆ ಬೆಳೆಗಳ ವೀಕ್ಷಣೆ ಮಾಡಿದರು. ಅಂತರಾಷ್ಟ್ರೀಯ ಸಾವಯವ ಕೃಷಿಕ ಬಸಯ್ಯ ಹಿರೇಮಠ ಅವರ ನುಗ್ಗೆಕಾಯಿ ಸಂಸ್ಕರಣ ಘಟಕಕ್ಕೂ ಭೇಟಿ ನೀಡಿದರು. ನಂತರ ಕುಷ್ಟಗಿ ತಾಲ್ಲೂಕಿನ ಬ್ಯಾಲಿಹಾಳ ಗ್ರಾಮದ ನೈಸರ್ಗಿಕ ಕೃಷಿಕ ಡಾ.ದೇವಿಂದ್ರ ಬಳ್ಳುಟಗಿ ಅವರ ತೋಟಕ್ಕೆ ಭೇಟಿ ನೀಡಿ, ಕೃಷಿ ಸಂಬಂಧಿಸಿದ ವಿಷಯಗಳ ಕುರಿತು ರೈತರೊಂದಿಗೆ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೆಶಕ ರುದ್ರೇಶಪ್ಪ ಟಿ.ಎಸ್., ಉಪನಿರ್ದೆಶಕ ಸಿದ್ದೇಶ್ವರ ಎಲ್., ಮೀನುಗಾರಿಕೆ ಇಲಾಖೆಯ ಉಪನಿರ್ದೆಶಕ ಡಾ. ಶ್ರೀನಿವಾಸ ಕುಲಕರ್ಣಿ, ಕೊಪ್ಪಳ ಕೃಷಿ ತಂತ್ರಜ್ಞರ ಸಂಸ್ಥೆಯ ಉಪಾಧ್ಯಕ್ಷರಾದ ವೀರಣ್ಣ ಕಮತರ, ತೋಟಗಾರಿಕೆ ಇಲಾಖೆಯ ಉಪನಿರ್ದೆಶಕ ಕೃಷ್ಣ ಉಕ್ಕುಂದ, ರಾಯಚೂರು ಕೃಷಿ ವಿಶ್ವವಿದ್ಯಾಲಯದ ಡಾ. ರವಿ ಸೇರಿದಂತೆ ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಇತರೆ ಅಧಿಕಾರಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 